
ಸುಂಟಿಕೊಪ್ಪ ಅ.28 NEWS DESK : ಜಿಲ್ಲಾ ಮಟ್ಟದ ಟೇಬಲ್‍ಟೆನ್ನಿಸ್ ಪಂದ್ಯಾವಳಿಯಲ್ಲಿ ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯ ಬಾಲಕಿಯರ ತಂಡವು ಜಿಲ್ಲಾ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿದೆ. ಜಿಲ್ಲಾ ಮಟ್ಟದ 14ರ ವಯೋಮನದವರಿಗೆ ಟೇಬಲ್ ಟೆನ್ನಿಸ್ ಪಂದ್ಯಾವಳಿಯನ್ನು ಕೊಡಗರಹಳ್ಳಿ ಶಾಂತಿನಿಕೇತನ ಶಾಲೆಯಲ್ಲಿ ಆಯೋಜಿಸಲಾಗಿದ್ದು, ಪಂದ್ಯಾವಳಿಯಲ್ಲಿ ಜಿಲ್ಲೆಯ 5 ತಾಲ್ಲೂಕುಗಳ ತಂಡಗಳು ಭಾಗವಹಿಸಿದ್ದವು. ಅತಿಥೇಯ ಶಾಂತಿನೀಕೇತನದ ಬಾಲಕಿಯರ ತಂಡವು ಮಡಿಕೇರಿ ತಾಲ್ಲೂಕು ತಂಡವನ್ನು ಸೋಲಿಸುವ ಮೂಲಕ ಪ್ರಶಸ್ತಿಯನ್ನು ಪಡೆದು ವಿಭಾಗಿಯ ಮಟ್ಟಕ್ಕೆ ಆಯ್ಕೆಗೊಂಡಿತು.









