
ಕಾರ್ಕಳ ಅ.29 NEWS DESK : ಕನ್ನಡ ರಾಜ್ಯೋತ್ಸವದ ಶುಭಾವಸರದಲ್ಲಿ ಕನ್ನಡ ಸಂಸ್ಕೃತಿಯ ಪ್ರಚಾರ ಹಾಗೂ ಓದುಗರಲ್ಲಿ ಪುಸ್ತಕಾಭಿರುಚಿ ಬೆಳೆಸುವ ಉದ್ದೇಶದಿಂದ ಕಾರ್ಕಳ ಹಾಗೂ ಮೂಡುಬಿದಿರೆಯಲ್ಲಿರುವ ಕ್ರಿಯೇಟಿವ್ ಪುಸ್ತಕ ಮನೆ ಪ್ರಕಾಶನದ ವತಿಯಿಂದ ವಿಶೇಷ ರಿಯಾಯಿತಿಯಲ್ಲಿ ಪುಸ್ತಕಗಳ ಮಾರಾಟ ಮೇಳ ಆಯೋಜಿಸಲಾಗಿದೆ. ಈ ಮೇಳದಲ್ಲಿ ಸಾಹಿತ್ಯ, ಕಾದಂಬರಿ, ಪ್ರಬಂಧ, ಜೀವನ ಚರಿತ್ರೆ, ಮಕ್ಕಳ ಸಾಹಿತ್ಯ ಸೇರಿದಂತೆ ವಿವಿಧ ವಿಷಯಗಳ ನೂರಾರು ಪುಸ್ತಕಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿರಲಿವೆ. ಕನ್ನಡ ಸಾಹಿತ್ಯ ಕ್ಷೇತ್ರದ ಮಹನೀಯರ ಕೃತಿಗಳ ಜೊತೆಗೆ ಯುವ ಲೇಖಕರ ಹೊಸ ಕೃತಿಗಳು, ಹೊಸ ಪ್ರಕಾಶನಗಳು ಹಾಗೂ ಜನಪ್ರಿಯ ಪುಸ್ತಕಗಳು ಈ ಮೇಳದ ಆಕರ್ಷಣೆಯಾಗಿದೆ. ಶೇ.10 ರಿಂದ ಶೇ.50ರ ವರೆಗೆರಿಯಾಯಿತಿಸಿಗಲಿದೆ. ಈ ವಿಶೇಷ ಮೇಳವು ನ.1 ರಿಂದ ನ.9 ರವರೆಗೆ ನಡೆಯಲಿದ್ದು, ಪ್ರತಿದಿನ ಬೆಳಗ್ಗೆ ಸಮಯ 9 ರಿಂದ ಸಂಜೆ ಸಮಯ 9ರ ವರೆಗೆ ಸಾರ್ವಜನಿಕರಿಗೆ ಮುಕ್ತ ಪ್ರವೇಶವಿದೆ. ಎಲ್ಲಾ ಪುಸ್ತಕ ಪ್ರೇಮಿಗಳು ಈ ಅವಕಾಶವನ್ನು ಸದುಪಯೋಗಪಡಿಸಿಕೊಳ್ಳುವಂತೆ ಪ್ರಕಾಶಕರು ಕೋರಿದ್ದಾರೆ. ಕನ್ನಡದ ನಾಡು ನುಡಿ ಮತ್ತು ನಂಬಿಕೆಗೆ ಬೆಂಬಲವಾಗಿ ಪುಸ್ತಕ ಓದುವುದನ್ನು ಅಭ್ಯಾಸವನ್ನಾಗಿಸೋಣ ಎಂಬುದು ಈ ಕಾರ್ಯಕ್ರಮದ ಆಶಯ ಎಂದು ಕ್ರಿಯೇಟಿವ್ ಪುಸ್ತಕ ಮನೆ ಪ್ರಕಟಣೆಯಲ್ಲಿ ತಿಳಿಸಿದೆ. ಸಂಪರ್ಕ: +919606474289









