ಪುತ್ತೂರು, NEWS DESK ಅ. 14: ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ, ಕೊಡಗಿನ ರಜನಿ ಬಾಲಕೃಷ್ಣ ರೈ ಅವರು ಡಾಕ್ಟರೇಟ್ ಪದವಿಗೆ ಭಾಜನರಾಗಿದ್ದಾರೆ.
ರಜನಿ ರೈ ಅವರು ಮಂಡಿಸಿದ “ಎ ಮಲ್ಟಿಸ್ಟೇಜ್ ಕಾಂಪಿಟೇಶನ್ ಫ್ರೇಮ್ವರ್ಕ್ ಫಾರ್ ಅಡ್ವಾನ್ಸ್ಡ್ ಸಿಗ್ನಲ್ ಪ್ರೊಸೆಸಿಂಗ್ ಇನ್ ಎಪಿಲೆಪ್ಟಿಕ್ ಪ್ಯಾಟರ್ನ್ ಅನಾಲಿಸಿಸ್” ಎಂಬ ಮಹಾಪ್ರಬಂಧಕ್ಕೆ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ (ವಿಟಿಯು) ಪಿಎಚ್.ಡಿ. ಪದವಿ ನೀಡಿ ಗೌರವಿಸಿದೆ.
ಶೈಕ್ಷಣಿಕ ಕ್ಷೇತ್ರದಲ್ಲಿ ಗಮನಾರ್ಹ ಸಾಧನೆ ಮಾಡಿರುವ ರಜನಿ ರೈ ಅವರು ಮಡಿಕೇರಿಯ ಬಾಲಕೃಷ್ಣ ರೈ ಮತ್ತು ಲೀಲಾವತಿ ದಂಪತಿಯ ಪುತ್ರಿ. ಇವರು ಪುತ್ತೂರಿನ ಅಶ್ವಿನ್ ಆಳ್ವ ಅವರ ಪತ್ನಿಯಾಗಿದ್ದಾರೆ.
ರಜನಿ ರೈ ಅವರ ಈ ಶೈಕ್ಷಣಿಕ ಸಾಧನೆಗೆ ಕುಟುಂಬಸ್ಥರು, ಸ್ನೇಹಿತರು ಹಾಗೂ ಹಿತೈಷಿಗಳು ಅಭಿನಂದನೆ ಸಲ್ಲಿಸಿದ್ದಾರೆ.

















