

ಮಡಿಕೇರಿ ನ.4 NEWS DESK : ರಾಜ್ಯದ ಹಲವಾರು ಭಾಗಗಳಲ್ಲಿ ಪ್ರದರ್ಶನ ಕಂಡು ಎಲ್ಲರ ಮೆಚ್ಚುಗೆಗೆ ಪಾತ್ರವಾದ ಪಾಡ್ದನ ಆಧಾರಿತ ಕನ್ನಡ ನಾಟಕ “ಪರಮಾತ್ಮ ಪಂಜುರ್ಲಿ” ನಾಟಕವು ನ.9 ರಂದು ಮಡಿಕೇರಿಯಲ್ಲಿ ನಡೆಯಲಿದೆ. ನಗರದ ಗಾಂಧಿ ಮೈದಾನದಲ್ಲಿ ಸಂಜೆ 5.30 ರಿಂದ ರಾತ್ರಿ 9 ಗಂಟೆಯ ವರೆಗೆ ಆದ್ದೂರಿ ಸೆಟ್ಟಿಂಗ್‌ನಲ್ಲಿ ಪ್ರದರ್ಶನಗೊಳ್ಳುವ ಈ ನಾಟಕವು ಪಂಜುರ್ಲಿ ದೈವದ ಮೂಲಕಥೆಯನ್ನು ಒಳಗೊಂಡಿದೆ. ರಾಜ್ಯ ಪ್ರಶಸ್ತಿ ಪುರಸ್ಕೃತ ಕಲಾಕುಂಭ ಕುಳಾಯಿ, ಮಂಗಳೂರು ತಂಡ ಈ ನಾಟಕವನ್ನು ನಡೆಸಿಕೊಡಲಿದೆ. ನಾಟಕ ಪ್ರಾರಂಭಕ್ಕೂ ಮುನ್ನ ಪಂಜುರ್ಲಿ ದೈವದ ಇತಿಹಾಸ ಮತ್ತು ಮಹತ್ವ ಕುರಿತು ಖ್ಯಾತ ವಾಗ್ಮಿ, ಜಾನಪದ ವಿದ್ವಾಂಸ ಹಾಗೂ ಪ್ರಸಿದ್ಧ ದೈವ ನರ್ತಕ ದಯಾನಂದ ಕತ್ತಲ್ ಸರ್ ಮಾಹಿತಿ ನೀಡಲಿದ್ದಾರೆ ಎಂದು ಸಂಘಟಕರು ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಪಿ.ಎಂ.ರವಿ – 9972073295, ವಸಂತ್ – 9448895870 ಸಂಪರ್ಕಿಸಬಹುದಾಗಿದೆ.










