ಮಡಿಕೇರಿ NEWS DESK ನ.4 : ನ್ಯಾಷನಲ್ ರೈಫಲ್ ಅಸೋಸಿಯೇಷನ್ ಆಫ್ ಇಂಡಿಯಾ ವತಿಯಿಂದ ಚೆನೈಯಲ್ಲಿ ಅ.27 ರಿಂದ ನ.4 ರವರೆಗೆ ನಡೆದ 27ನೇ ರಾಷ್ಟ್ರೀಯ ಕುಮಾರ್ ಸುರೇಂದರ್ ಸಿಂಗ್ ಇಂಟರ್ ಸ್ಕೂಲ್ ಶೂಟಿಂಗ್ ಚಾಂಪಿಯನ್ ಶಿಪ್ ಸ್ಪರ್ಧೆಯಲ್ಲಿ ಕೊಡಗಿನ ಕಾನಡ್ಕ ಧನ್ವಿ 10 ಮೀ. ಏರ್ ಪಿಸ್ತೂಲ್ ಶೂಟಿಂಗ್ ಸ್ಪರ್ಧೆಯಲ್ಲಿ ಸಬ್ ಯೂತ್ ಮಹಿಳೆಯರ ವಿಭಾಗದಲ್ಲಿ ಕಂಚಿನ ಪದಕವನ್ನು ಗೆದ್ದು ಕರ್ನಾಟಕಕ್ಕೆ ಕೀರ್ತಿ ತಂದಿದ್ದಾಳೆ. ರಾಷ್ಟ್ರದ ವಿವಿಧ ಭಾಗಗಳ 2500ಕ್ಕೂ ಹೆಚ್ಚು ಯುವ ಶೂಟರ್ ಗಳು ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದರು. ಕಾನಡ್ಕ ಧನ್ವಿ ಬೆಂಗಳೂರಿನ ಡೆಲ್ಲಿ ಪಬ್ಲಿಕ್ ಶಾಲೆಯ 10ನೇ ತರಗತಿ ವಿದ್ಯಾರ್ಥಿನಿಯಾಗಿದ್ದು, ಅಂತರಾಷ್ಟ್ರೀಯ ಕೋಚ್ ಶರಣೇಂದ್ರ ಕೆ.ವೈ ಅವರ ಮಾರ್ಗದರ್ಶನದಲ್ಲಿ ಹಾಕ್ ಐ ಸ್ಪೋರ್ಟ್ಸ್ ರೈಫಲ್ ಮತ್ತು ಪಿಸ್ತೂಲ್ ಶೂಟಿಂಗ್ ಅಕಾಡೆಮಿಯಲ್ಲಿ ತರಬೇತಿಯನ್ನು ಪಡೆಯುತ್ತಿದ್ದಾಳೆ. ಧನ್ವಿ ಮಡಿಕೇರಿ ತಾಲ್ಲೂಕಿನ ಮರಗೋಡು ಗ್ರಾಮದ ಕೃಷಿಕ ಕಾನಡ್ಕ ಹನೀಶ್ ಹಾಗೂ ಆಶಾ ದಂಪತಿಯ ಪುತ್ರಿ.











