ಮಡಿಕೇರಿ ನ.5 NEWS DESK : ಮಡಿಕೇರಿಯ ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜ್ ನಲ್ಲಿ ರೋಟರಿ ಮಡಿಕೇರಿ ವುಡ್ಸ್ ವತಿಯಿಂದ ರೋಟರಾಕ್ಟ್ ಕ್ಲಬ್ ನ್ನು ಸ್ಥಾಪಿಸಲಾಯಿತು. ರೋಟರಿ ವುಡ್ಸ್ ಅಧ್ಯಕ್ಷ ಕಿರಣ್ ಕುಂದರ್ ಅಧ್ಯಕ್ಷತೆಯಲ್ಲಿ ನಡೆದ ಸಮಾರಂಭದಲ್ಲಿ ಪದಗ್ರಹಣ ಅಧಿಕಾರಿ ರೋಟರಿ ಕುಶಾಲನಗರ ಕ್ಲಬ್ ನ ಸುನಿತಾ ಮಹೇಶ್ ನೂತನವಾಗಿ ಅಸ್ತಿತ್ವಕ್ಕೆ ಬಂದ ರೋಟರ್ಯಾಕ್ಟ್ ಕ್ಲಬ್ ನ್ನು ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳು ಶಾಲಾ ದಿನಗಳಿಂದಲೇ ಸೇವಾ ಮನೋಭಾವ ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ಓದಿನ ಜೊತೆಗೆ ರೋಟರಿ ಬಗ್ಗೆ ಹೆಚ್ಚಿನ ವಿಚಾರಗಳನ್ನು ಅರಿತುಕೊಂಡು ಜನ ಸಾಮಾನ್ಯರ ಕಷ್ಟಗಳನ್ನು ಅರಿತು ಅಗತ್ಯಕ್ಕೆ ಅನುಗುಣವಾಗಿ ಅವರಿಗೆ ನೆರವು ನೀಡುವ ಪ್ರಯತ್ನ ಮಾಡಬೇಕು ಎಂದು ಅವರು ಹೇಳಿದರು. ಕೇವಲ ಒಬ್ಬನಿಂದ ಆಗದ ಕೆಲಸವನ್ನು ಹಲವು ಕೈಗಳನ್ನು ಸೇರಿಸಿಕೊಂಡು ಜನರ ನೋವಿಗೆ ಸ್ಪಂದಿಸುವ ಪ್ರಾಮಾಣಿಕ ಪ್ರಯತ್ನ ನಿಮ್ಮದಾಗಿರಲಿ ಎಂದು ಸುನೀತಾ ಹೇಳಿದರು. ಕಾಲೇಜು ಪ್ರಾಂಶುಪಾಲೆ ನಿರ್ಮಲಾ ಮಾತನಾಡಿ , ರೋಟರಿ ವುಡ್ಸ್ ನ ಪ್ರತಿಯೊಂದು ಚಟುವಟಿಕೆಗಳ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರಲ್ಲದೇ ರೋಟರಿ ವುಡ್ಸ್ ನಿಂದ ಸ್ಥಾಪಿತಗೊಂಡ ನೂತನ ರೋಟರಾಕ್ಟ್ ಉತ್ತಮ ಕೆಲಸಗಳನ್ನು ಮಾಡುವ ಬದ್ಧತೆಯೊಂದಿಗೆ, ಮಾತೃ ಸಂಸ್ಥೆಯೊಂದಿಗೆ ಕೈಜೋಡಿಸುವ ಭರವಸೆಯನ್ನು ನೀಡಿದರು. ಹೊಸ ಸದಸ್ಯರಿಗೆ ರೋಟರಿಯ ಮಹತ್ವ ಮತ್ತು ಕಾರ್ಯಕ್ರಮಗಳ ಬಗ್ಗೆ ಮಾಹಿತಿ ನೀಡಿದ ರೋಟರಿ ಮಿಸ್ಟಿ ಹಿಲ್ಸ್ ನಿರ್ದೇಶಕ ಎಂ. ಧನಂಜಯ್ ಶ್ಯಾಮ್, ಸೇವಾ ಮನೋಭಾವವನ್ನು ಬೆಳೆಸಿಕೊಳ್ಳುವಂತೆ ಕರೆ ನೀಡಿದರು. ರೋಟರಿ ಬಗ್ಗೆ ಸರಳವಾಗಿ ಮಕ್ಕಳಿಗೆ ಅರ್ಥವಾಗುವ ರೀತಿಯಲ್ಲಿ ಮಾಹಿತಿ ನೀಡಿದರು. ನೂತನ ರೋಟರಾಕ್ಟ್ ಕ್ಲಬ್ ಅಧ್ಯಕ್ಷೆ ಯಾಗಿ ಅಂತಿಮ ಬಿ. ಕಾಂ ವಿದ್ಯಾರ್ಥಿನಿ ಪ್ರಿಯಾ ಸಿ. ಆರ್ ಮತ್ತು ಕಾರ್ಯದರ್ಶಿಯಾಗಿ ದ್ವಿತೀಯ ಬಿ. ಕಾಂ ವಿದ್ಯಾರ್ಥಿನಿ ಅಮೃತಾ ಎಂ. ಎಸ್ ಪ್ರತಿಜ್ಞಾ ವಿಧಿಯನ್ನು ಸ್ವೀಕರಿಸಿದರು. ರೋಟರಾಕ್ಟ್ ಕಾರ್ಡಿನೇಟರ್ ಆಗಿ ಪ್ರಾದ್ಯಾಪಕಿ ರಾಖಿ ಪೂವಣ್ಣ ಜವಾಬ್ದಾರಿಯನ್ನು ವಹಿಸಿಕೊಂಡರು. ಅಧ್ಯಾಪಕರಾದ ಡಾ.ವೇಣುಗೋಪಾಲ್, ಕುಶಾಲನಗರ ರೋಟರಿ ನಿದೇ೯ಶಕ ಮಹೇಶ್ ನಲ್ವಾಡೆ, ರೋಟರಿ ವುಡ್ಸ್ ಕಾಯ೯ದಶಿ೯ ಪ್ರಮೀಳಾ ಶೆಟ್ಟಿ, ರೋಟರಿ ವುಡ್ಸ್ ನಿದೇ೯ಶಕರಾದ ಕಿಗ್ಗಾಲ್ ರಂಜಿತ್, ಕಶ್ಯಪ್, ಹೆಚ್.ವಿ. ರವೀಂದ್ರ, ರಾಧಾಮಣಿ ಹಾಜರಿದ್ದ ಕಾಯ೯ಕ್ರಮವನ್ನು ವಸಂತ್ ಕುಮಾರ್ ನಿರೂಪಿಸಿದರು.











