ಸೋಮವಾರಪೇಟೆ ನ.5 NEWS DESK : ಶ್ರೀ ಹೊನ್ನಮ್ಮ ವಿಶೇಷ ಚೇತನ ಸ್ವಸಹಾಯ ಸಂಘದ ವತಿಯಿಂದ ‘ಸಾಮರ್ಥ್ಯ ಬಲವರ್ಧನ ತರಬೇತಿ’ ಶಿಬಿರ ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಸಭಾಂಗಣದಲ್ಲಿ ನಡೆಯಿತು. ಕಾರ್ಯಕ್ರಮವನ್ನು ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ಅಧ್ಯಕ್ಷ ಡಿ.ಎಂ.ಗೋಪಾಲಕೃಷ್ಣ ಉದ್ಘಾಟಿಸಿದರು. ಉಪಾಧ್ಯಕ್ಷೆ ರಸೀದಾ, ಪಿಡಿಒ ಮೋಹನ್, ಹೆಚ್.ಆರ್.ಮೋಹನ್, ವಿವೇಕಾನಂದ ಯೂತ್ ಮೂವ್‍ಮೆಂಟ್ ಸಂಸ್ಥೆಯ ಸುನೀತಾ ತರಬೇತಿ ನೀಡಿದರು. ಸಂಘವನ್ನು ಮುನ್ನೆಡೆಸುವ ಬಗ್ಗೆ, ಸಂಘದ ಪುಸ್ತಕ ಬರೆಯುವುದು ಅಂತರೀಕ ಸಾಲ ಸೌಲಭ್ಯದ ಬಗ್ಗೆ ಮಾಹಿತಿ ನೀಡಿದರು.
ಸಂಘದ ಪ್ರತಿನಿಧಿ ನಾರಾಯಣ, ಮಧುಸೂದನ್ ಇದ್ದರು. 25 ಮಂದಿ ತರಬೇತಿ ಪಡೆದುಕೊಂಡರು.











