ನಾಪೋಕ್ಲು ನ.6 NEWS DESK : ಶ್ರೀ ನಾರಾಯಣ ಧರ್ಮ ಪರಿಪಾಲನ ಯೋಗಂ ವತಿಯಿಂದ 171ನೇ ಶ್ರೀ ನಾರಾಯಣ ಗುರು ಜಯಂತಿ ಹಾಗೂ ಓಣಂ ಆಚರಣೆಯನ್ನು ನ.23 ರಂದು ನಾಪೋಕ್ಲುವಿನ ಸರ್ಕಾರಿ ಮಾದರಿ ಪ್ರಾಥಮಿಕ ಶಾಲಾ ಮೈದಾನದಲ್ಲಿ ಆಯೋಜಿಸಲಾಗಿದೆ ಎಂದು ಆಚರಣೆ ಸಮಿತಿ ಅಧ್ಯಕ್ಷ ಶ್ರೀಧರ್ ಹೇಳಿದರು. ನಾಪೋಕ್ಲುವಿನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಬ್ರಹ್ಮರ್ಷಿ ಶ್ರೀ ನಾರಾಯಣ ಗುರುಜಯಂತಿ ಹಾಗೂ ಓಣಂ ಆಚರಣೆಯ ಪ್ರಯುಕ್ತ ಕ್ರಿಕೆಟ್, ಹಗ್ಗಜಗ್ಗಾಟ ಹಾಗೂ ವಿವಿಧ ಕ್ರೀಡಾಕೂಟಗಳನ್ನು ಆಯೋಜಿಸಲಾಗಿದೆ. ನ.23 ರಂದು ಮಾರುಕಟ್ಟೆ ಆವರಣದಿಂದ ಬೆಳಿಗ್ಗೆ 10 ಗಂಟೆಗೆ ಗುರುವಿನ ಅಲಂಕೃತ ಮಂಟಪವನ್ನು ಚಂಡೆಮೇಳಗಳೊಂದಿಗೆ ಮೆರವಣಿಗೆ ಸಾಗಿ ಶಾಲಾ ಮೈದಾನಕ್ಕೆ ಬರಲಿದೆ ಎಂದರು. ನ.19 ರಂದು ಬೆಳಿಗ್ಗೆ 9.30 ಗಂಟೆಗೆ ಕ್ರೀಡಾಕೂಟವನ್ನು ಎಸ್‍ಎನ್‍ಡಿಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷ ವಿ.ಕೆ.ಲೋಕೇಶ್ ಉದ್ಘಾಟಿಸುವರು. ನ.23 ರಂದು ಬೆಳಿಗ್ಗೆ 10 ಗಂಟೆಗೆ ಮೆರವಣಿಗೆಯನ್ನು ಸಂಘಟನಾ ಕಾರ್ಯದರ್ಶಿ ಹಿತೇಶ್ (ಚಿನ್ನ) ಉದ್ಘಾಟಿಸಲಿದ್ದಾರೆ. ಬಳಿಕ ಸಭಾ ಕಾರ್ಯಕ್ರಮ ನಡೆಯಲಿದೆ. ಕಾರ್ಯಕ್ರಮವನ್ನು ಶಾಸಕ ಎ.ಎಸ್ ಪೊನ್ನಣ್ಣ ಉದ್ಘಾಟಿಸುವರು. ಕಳoಚೇರಿ ಮಠದ ಪೀಠಾಧ್ಯಕ್ಷ ಶ್ರೀ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ ಆಶೀರ್ವಚನ ನೀಡಲಿರುವರು. ಎಸ್.ಎನ್.ಡಿ.ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ.ಲವ ಅಧ್ಯಕ್ಷತೆಯಲ್ಲಿ ಕಾರ್ಯಕ್ರಮ ನಡೆಯಲಿದ್ದು, ಮುಖ್ಯ ಅತಿಥಿಗಳಾಗಿ ಶಾಸಕ ಡಾ.ಮಂತರ್ ಗೌಡ, ಎಸ್ ಎನ್.ಡಿ.ಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಅಧ್ಯಕ್ಷೆ ವಿ.ಕೆ.ಲೋಕೇಶ್, ವಿಧಾನಪರಿಷತ್ ಸದಸ್ಯ ಸುಜಾ ಕುಶಾಲಪ್ಪ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ, ಎಸ್.ಎನ್.ಡಿ.ಪಿ ಕೊಡಗು ಯೂನಿಯನ್ ಸಿದ್ದಾಪುರ ಘಟಕದ ಕಾರ್ಯದರ್ಶಿ ಪ್ರೇಮಾನಂದ, ನಾಪೋಕ್ಲು ಟೌನ್ ಜುಮ್ಮಾ ಮಸೀದಿಯ ಶೌಕತ್ ಆಲಿ ಸಕಾಫಿ, ಸಂತ ಅನ್ನಮ್ಮ ಚರ್ಚ್ ನ ಧರ್ಮಗುರು ಜೇಮ್ಸ್ ಡೊಮೇಲಿಕ್ ಫಾದರ್, ಕೊಡಗು ಎಸ್ ಎನ್ ಡಿ ಪಿ ಯೂನಿಯನ್ ಮಹಿಳಾ ಘಟಕದ ಅಧ್ಯಕ್ಷೆ ರೀಷಾ ಸುರೇಂದ್ರ, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎ.ಇಸ್ಮಾಯಿಲ್, ಆರ್ ಎಂ ಸಿ ಮಾಜಿ ಅಧ್ಯಕ್ಷ ಶಿವ ಚಾಳಿಯಂಡ ಅಂಬಿಕಾರಿಯಪ್ಪ, ಹೊದ್ದೂರು ಗ್ರಾಮ ಪಂಚಾಯಿತಿ ಅಧ್ಯಕ್ಷ ಹಂಸ, ಕಾಫಿಬೆಳೆಗಾರ ಅರೆಯಡ ರತ್ನ ಪೆಮ್ಮಯ್ಯ ಕೊಡಗು ಜಿಲ್ಲಾ ಕಾಂಗ್ರೆಸ್ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ನಾಪೋಕ್ಲು ಜಮಾಯತ್ ಅಧ್ಯಕ್ಷರಾದ ಎಮ್ ಎಚ್ ಅಬ್ದುಲ್ ರೆಹಮಾನ್, ನಾಪೋಕ್ಲು ಕಾಫಿ ಬೆಳೆಗಾರರು ವಕೀಲರು ಕೂಡಿಮನಿಯಿಂದ ಶರಣು ಕುಟ್ಟಪ್ಪ, ಜೆಡಿಎಸ್ ವಕ್ತಾರ ಮನ್ಸೂರು ಆಲಿ ಎಂ ಎ, ನಾಪೋಕ್ಲು, ಕೊಕೇರಿಯ ಕಾಫಿ ಬೆಳೆಗಾರ ಎ.ಕೆ.ಹಾರಿಸ್, ನಾಪೋಕ್ಲು ಉದ್ಯಮಿ ಕಿಶೋರ್ ತಮ್ಮಯ್ಯ, ಕಾಫಿ ಬೆಳೆಗಾರ ಹಾಗೂ ದಾನಿ ಬಿದ್ದಾಟಂಡ .ಟಿ ಕಾರ್ಯಪ್ಪ, ಹಾಗೂ ವಿವಿಧ ಸಮಿತಿಗಳ ಪದಾಧಿಕಾರಿಗಳು ಪಾಲ್ಗೊಳ್ಳಲಿರುವರು ಎಂದರು. ಕ್ರಿಕೆಟ್ ಪಂದ್ಯವಿಜೇತ ತಂಡಕ್ಕೆ ಪ್ರಥಮ ಬಹುಮಾನ 33,333 ಹಾಗೂ ಆಕರ್ಷಕ ಟ್ರೋಫಿ, ದ್ವಿತೀಯ ಬಹುಮಾನ 15555ನಗದು ಹಾಗೂ ಆಕರ್ಷಕ ಟ್ರೋಫಿ ವಿತರಿಸಲಾಗುವುದು. ಹಗ್ಗ ಜಗ್ಗಾಟ ಸ್ಪರ್ಧೆಯ ಪ್ರಥಮ ವಿಜೇತರಿಗೆ 30000 ನಗದು ಹಾಗೂ ಟ್ರೋಫಿ ದ್ವಿತೀಯ ಬಹುಮಾನ 15000 ನಗದು ಹಾಗೂ ಟ್ರೋಫಿ ವಿತರಿಸಲಾಗುವುದು. ಸಂಜೆ 7ಗೆ 7ಬೀಟ್ಸ್ ಆರ್ಕೆಸ್ಟ್ರಾ ಕ್ಯಾಲಿಕೆಟ್ ನೇತೃತ್ವದಲ್ಲಿ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು. ಹೆಚ್ಚಿನ ಮಾಹಿತಿಗೆ ಸಂಪರ್ಕಿಸಬೇಕಾದ ಮೊ.ನಂ.9741339029, 8310265327. ಪತ್ರಿಕಾಗೋಷ್ಠಿಯಲ್ಲಿ ಎಸ್ ಎನ್ ಡಿ ಪಿ ನಾಪೋಕ್ಲು ಶಾಖೆಯ ಅಧ್ಯಕ್ಷ ಟಿ.ಸಿ ಲವ, ಕಾರ್ಯದರ್ಶಿ ಅಜಿತ್ ಎಂ.ಆರ್., ಆಚರಣಾ ಸಮಿತಿ ಉಪಾಧ್ಯಕ್ಷ ಸತೀಶ್ ಟಿ..ಕೆ, ಆಚರಣಾ ಸಮಿತಿ ಉಪಾಧ್ಯಕ್ಷ ತಂಗ ಎಂ.ಕೆ, ಹರೀಶ್, ಮಣಿ ಟಿ.ಸಿ., ಹರೀಶ್ ಕುಮಾರ್ ಪಿ.ಬಿ ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.












