ಮಡಿಕೇರಿ ನ.11 NEWS DESK : ಸಾಮಾಜಿಕ ಸೇವಾ ಕಾಯ೯ಗಳಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ 5 ದಶಕಗಳ ಸಾಥ೯ಕ ಸೇವೆ ಸ್ಮರಣೀಯವಾಗಿದೆ ಎಂದು ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಶ್ಲಾಘಿಸಿದ್ದಾರೆ. ನಗರದ ಕೊಡವ ಸಮಾಜದಲ್ಲಿ ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯ ಸುವಣ೯ ಮಹೋತ್ಸವ ಸಮಾರಂಭಕ್ಕೆ ಚಾಲನೆ ನೀಡಿ ಮಾತನಾಡಿದ ಇನ್ನರ್ ವೀಲ್ ಜಿಲ್ಲೆ 318 ರ ಅಧ್ಯಕ್ಷೆ ಶಬರಿ ಕಡಿದಾಳ್, ಇನ್ನರ್ ವೀಲ್ ಸಂಸ್ಥೆಯು ಮಡಿಕೇರಿ ವ್ಯಾಪ್ತಿಯಲ್ಲಿ 50 ವಷ೯ಗಳಿಂದ ಸೇವಾ ಕಾಯ೯ ಹಮ್ಮಿಕೊಳ್ಳುವ ಮೂಲಕ ಜನಸೇವೆಯಲ್ಲಿ ಸಕ್ರಿಯವಾಗಿ ಕಾಯ೯ಪ್ರವೖತ್ತವಾಗಿರುವುದು ಸಂತೋಷದ ವಿಚಾರ. ಜನರಿಗೆ ಈ ಸೇವಾ ಕಾಯ೯ಗಳ ನಿಜವಾದ ಪ್ರಯೋಜನ ತಲುಪಿದಾಗ ಸೇವೆಗೆ ನಿಜವಾದ ಸಾಥ೯ಕತೆ ಲಭಿಸುತ್ತದೆ ಎಂದು ಅಭಿಪ್ರಾಯಪಟ್ಟರು. ಇನ್ನರ್ ವೀಲ್ ಸಂಸ್ಥೆಯು ಮತ್ತಷ್ಟು ಸೇವಾ ಯೋಜನೆ ಹಮ್ಮಿಕೊಳ್ಳಲು ಸುವಣ೯ ಸಂಭ್ರಮ ಕಾಯ೯ಕ್ರಮ ಸಹಾಯಕವಾಗಲಿ ಎಂದೂ ಅವರು ಹಾರೈಸಿದರು. ಮಡಿಕೇರಿ ಇನ್ನರ್ ವೀಲ್ ಸಂಸ್ಥೆಯನ್ನು 50 ವಷ೯ಗಳ ಹಿಂದೆ ಸ್ಥಾಪಿಸಿದ್ದ ಡಾ.ಜಯಲಕ್ಷ್ಮಿ ಪಾಟ್ಕರ್ ಅವರು ಗೌರವಾಪ೯ಣೆ ಸ್ವೀಕರಿಸಿ ಮಾತನಾಡಿ, ಯಾವುದೇ ಸಂಸ್ಥೆ 50 ವಷ೯ಗಳನ್ನು ಪೂರೈಸುವುದು ಸುಲಭಸಾಧ್ಯವಲ್ಲ. ಹೀಗಿರುವಾಗ ಅನೇಕ ಸವಾಲುಗಳನ್ನು ಎದುರಿಸಿ ಮಹಿಳೆಯರೇ ಸದಸ್ಯರಾಗಿರುವ ಮಡಿಕೇರಿ ಇನ್ನರ್ ವೀಲ್ 5 ಸಾಥ೯ಕ ದಶಕಗಳನ್ನ ಪೂರೈಸಿದ್ದು ಸ್ಥಾಪಕಾಧ್ಯಕ್ಷೆಯಾಗಿ ತನ್ನಲ್ಲಿ ಸಾಥ೯ಕ ಭಾವ ಮೂಡಿಸಿದೆ ಎಂದು ಹೆಮ್ಮೆಯಿಂದ ನುಡಿದರು. 12 ಸದಸ್ಯರಿಂದ 1975 ರಲ್ಲಿ ಪ್ರಾರಂಭವಾದ ಇನ್ನರ್ ವೀಲ್ 50 ವಷ೯ಗಳಲ್ಲಿ 46 ಸದಸ್ಯೆಯರ ಮೂಲಕ ಸದಸ್ಯತ್ವವನ್ನು ನಾಲ್ಕು ಪಟ್ಟು ಹೆಚ್ಚಿಸಿಕೊಂಡಿರುವುದು ಶ್ಲಾಘನೀಯ ಎಂದೂ ಅವರು ಹೇಳಿದರು. ಕಾಯ೯ಕ್ರಮದಲ್ಲಿ ಮಡಿಕೇರಿ ಇನ್ನರ್ ವೀಲ್ ಅಧ್ಯಕ್ಷೆ ಲಲಿತಾರಾಘವನ್ ಅವರಿಗೆ ಗೋಲ್ಟನ್ ಕಾಲರ್ ನೀಡಿ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಗೌರವಿಸಿದರು. ಇನ್ನರ್ ವೀಲ್ ಜಿಲ್ಲೆಯ ಮಾಜಿ ಅಧ್ಯಕ್ಷೆ ಪೂಣಿ೯ಮಾ ರವಿ, ಸೇರಿದಂತೆ ಜಿಲ್ಲೆಯ ಅನೇಕ ಮಾಜಿ ಅಧ್ಯಕ್ಷೆಯರು ಹಾಜರಿದ್ದು ಸುವಣ೯ ಮಹೋತ್ಸವ ಅಂಗವಾಗಿ 50 ದೀಪಗಳನ್ನು ಬೆಳಗಿಸಿದರು. ಶಫಾಲಿ ರೈ ಸಂಪಾದಕತ್ವದಲ್ಲಿ ಪ್ರಕಟಿತ ವಾತಾ೯ ಸಂಚಿಕೆ ಗಿರಿಶೖಂಗವನ್ನು ಈ ಸಂದಭ೯ ಲೋಕಾಪ೯ಣೆಗೊಳಿಸಲಾಯಿತು. ಇನ್ನರ್ ವೀಲ್ ಕಾಯ೯ದಶಿ೯ ನಮಿತಾ ರೈ, ಸುವಣ೯ ಮಹೋತ್ಸವ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ, ಕಾಯ೯ದಶಿ೯ ಶಫಾಲಿ ರೈ ವೇದಿಕೆಯಲ್ಲಿದ್ದರು. ಲಲಿತಾ ರಾಘವನ್ ಸ್ವಾಗತಿಸಿ, ರಶ್ಮಿ ಪ್ರವೀಣ್ ವಂದಿಸಿದ ಕಾಯ೯ಕ್ರಮವನ್ನು ದಿವ್ಯಾಮುತ್ತಣ್ಣ ನಿರೂಪಿಸಿದರು. ಡಾ. ರೇಣುಕಾ ಸುಧಾಕರ್, ವಿಜಯಲಕ್ಷ್ಮಿ ಚೇತನ್ ಪ್ರಾಥಿ೯ಸಿ, ನಮೖತಾ ವಿಕಾಸ್, ಅಗ್ನೇಸ್ ಮುತ್ತಣ್ಣ, ಮೖಣಾಲಿನಿ ಚಿಣ್ಣಪ್ಪ, ಬೊಳ್ಳು ಮೇದಪ್ಪ, ಶಮ್ಮಿ ಮೋಹನ್ ಪ್ರಭು ಸಭೆಯ ವಿವಿಧ ಹಂತಗಳನ್ನು ನಿವ೯ಹಿಸಿದರು. ಸುವಣ೯ ಸಂಭ್ರಮದ ಪ್ರಯುಕ್ತ ಇನ್ನರ್ ವೀಲ್ ಸದಸ್ಯೆಯರಿಂದ ಆಕಷ೯ಕ ಮನೋರಂಜನಾ ಕಾಯ೯ಕ್ರಮಗಳು ಮನಸೆಳೆದವು.











