ಮಡಿಕೇರಿ ನ.11 NEWS DESK : ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯ ವತಿಯಿಂದ ನೀಡಲ್ಪಟ್ಟ ಮೆಡಿಕಲ್ ಇಕ್ಯೂಪ್ ಮೆಂಟ್ ಬ್ಯಾಂಕ್ ಗೆ ಇನ್ನರ್ ವೀಲ್ ಜಿಲ್ಲಾಧ್ಯಕ್ಷೆ ಶಬರಿ ಕಡಿದಾಳ್ ಚಾಲನೆ ನೀಡಿದರು. ಮಡಿಕೇರಿಯ ಅಶ್ವಿನಿ ಆಸ್ಪತ್ರೆಯ ಆವರಣದಲ್ಲಿ ಆಯೋಜಿತ ಕಾಯ೯ಕ್ರಮದಲ್ಲಿ ಇನ್ನರ್ ವೀಲ್ ಮಡಿಕೇರಿ ಸಂಸ್ಥೆಗೆ 50 ವಷ೯ಗಳ ಸಂಭ್ರಮದ ಸಂದಭ೯ ಅಶ್ವಿನಿ ಆಸ್ಪತ್ರೆಯ ಮೂಲಕ ಅಗತ್ಯವಿರುವ ರೋಗಿಗಳಿಗೆ ಉಪಕರಣಗಳನ್ನು ನೀಡುವ ಯೋಜನೆ ಚಾಲನೆಗೊಂಡಿತು. ಅಶ್ವಿನಿ ಆಸ್ಪತ್ರೆಗೆ ಇನ್ನರ್ ವೀಲ್ ಸಂಸ್ಥೆಯಿಂದ 4 ವೀ್ಲ್ ಚೇರ್, 4ಕ್ರಚಸ್, 3 ವಾಕರ್ , 2, ವಾಟರ್ ಬೆಡ್, ಸುಸಜ್ಜಿತ ಬೆಡ್ ಸೇರಿದಂತೆ ಅಂದಾಜು 1.20 ಲಕ್ಷ ರು. ಮೌಲ್ಯದ ಆರೋಗ್ಯ ಉಪಕರಣಗಳನ್ನು ನೀಡಲಾಯಿತು. ಶಬರಿ ಕಡಿದಾಳ್ ಮಾತನಾಡಿ, ಇದೊಂದು ಅತ್ಯಗತ್ಯ ಯೋಜನೆಯಾಗಿದ್ದು, ಸುವಣ೯ ಸಂಭ್ರಮದ ಸಾಥ೯ಕತೆಯನ್ನು ಈ ಯೋಜನೆ ಹೆಚ್ಚಿಸಿದೆ ಎಂದು ಶ್ಲಾಘಿಸಿದರಲ್ಲದೇ, ಅನೇಕರ ಮನೆಗಳಲ್ಲಿ ಬಳಕೆಯಾಗಿ ಮೂಲೆಸೇರಿರುವ ಉತ್ತಮ ಕಾಯ೯ನಿವ೯ಹಣೆಯ ವೈದ್ಯಕೀಯ ಪರಿಕರಗಳನ್ನು ಕೂಡ ಅಶ್ವಿನಿ ಆಸ್ಪತ್ರೆ, ಇನ್ನರ್ ವೀಲ್ ಗೆ ನೀಡುವ ಮೂಲಕ ಅಗತ್ಯವುಳ್ಳವರಿಗೆ ಉಪಯೋಗವಾಗುವಂತೆ ಮಾಡಬಹುದಾಗಿದೆ ಎಂದು ಸಲಹೆ ನೀಡಿದರು. ಸಮಾಜದ ಹಿತದೖಷ್ಟಿಯಿಂದ ಇಂಥ ಯೋಜನೆಗಳು ಮತ್ತಷ್ಟು ಹೆಚ್ಚಾಗಲಿ ಎಂದೂ ಅವರು ಹಾರೈಸಿದರು. ಅಶ್ವಿನಿ ಆಸ್ಪತ್ರೆಯ ಆಡಳಿತ ಮಂಡಳಿಯ ಕಾಯ೯ದಶಿ೯ ಕುಪ್ಪಂಡ ರಾಜಪ್ಪ ಮಾತನಾಡಿ, ಅಶ್ವಿನಿ ಆಸ್ಪತ್ರೆಯಲ್ಲಿ ಪ್ರಸ್ತುತ 37 ತಜ್ಞ ವೈದ್ಯರು,ಹಾಗೂ , 7 ಕತ೯ವ್ಯ ನಿರತ ವೈದ್ಯರ ಸೇವೆ ಲಭ್ಯವಿದೆ. ಬಡರೋಗಿಗಳಿಗೆ ಸಹಾಯವಾಗುವ ನಿಟ್ಟಿನಲ್ಲಿ ಅನೇಕ ಯೋಜನೆಗಳಿವೆ. ಮುಂದಿನ 10 ವಷ೯ಗಳಲ್ಲಿ ಅಶ್ವಿನಿ ಆಸ್ಪತ್ರೆಯಲ್ಲಿ ಖಾಸಗಿ ವೈದ್ಯಕೀಯ ಆಸ್ಪತ್ರೆ ಪ್ರಾರಂಭಿಸುವ ಉದ್ದೇಶವೂ ಇದೆ. ಈಗಾಗಲೇ 100 ಹಾಸಿಗೆಗಳೊಂದಿಗೆ, ನಸೀ೯ಂಗ್ ತರಬೇತಿಯನ್ನು ಕೂಡ ಅಶ್ವಿನಿ ಆಸ್ಪತ್ರೆಯಲ್ಲಿ ನೀಡಲಾಗುತ್ತಿದೆ ಎಂದೂ ಮಾಹಿತಿ ನೀಡಿದರು. ಅಶ್ವಿನಿ ಆಸ್ಪತ್ರೆಯ ಸಂಚಾಲಕಿ ಕುಪ್ಪಂಡ ಛಾಯಾ ನಂಜಪ್ಪ ಮಾತನಾಡಿ, ಆರೋಗ್ಯ ಸೇವೆ ಎಲ್ಲರಿಗೂ ತಲುಪಬೇಕು. ಈ ಮೂಲಕ ಆರೋಗ್ಯವಂತ ಜನರಿರುವ ಭಾರತದ ಪರಿಕಲ್ಪನೆ ಸಾಕಾರಗೊಳ್ಳಬೇಕು. ಈ ನಿಟ್ಟಿನಲ್ಲಿ ಮಡಿಕೇರಿಯ ಅಶ್ವಿನಿ ಆಸ್ಪತ್ರೆಗೆ ವೈದ್ಯಕೀಯ ಉಪಕರಣಗಳ ನೆರವು ನೀಡಿದ ಇನ್ನರ್ ವೀಲ್ ಸಂಸ್ಥೆಗೆ ಕೖತಜ್ಞತೆ ಸಲ್ಲಿಸಿದರು. ಇನ್ನರ್ ವೀಲ್ ಅಧ್ಯಕ್ಷೆ ಲಲಿತಾ ರಾಘವನ್, ಕಾಯ೯ದಶಿ೯ ನಮಿತಾ ರತ್ನಾಕರ್ ರೈ, ಮಾಜಿ ಜಿಲ್ಲಾಧ್ಯಕ್ಷೆ ಪೂಣಿ೯ಮಾ ರವಿ, ಸುವಣ೯ ಮಹೋತ್ಸವ ಸಮಿತಿ ಅಧ್ಯಕ್ಷೆ ಲತಾ ಚಂಗಪ್ಪ, ಕಾಯ೯ದಶಿ೯ ಶಫಾಲಿ ಪ್ರಮೋದ್ ಕುಮಾರ್ ರೈ , ಅಶ್ವಿನಿ ಆಸ್ಪತ್ರೆಯ ಟ್ರಸ್ಟಿ ಗೋಕುಲ್ ಎಂ.ಪಿ. ಆಡಳಿತಾಧಿಕಾರಿ ಬಿ.ಎಂ.ರವೀಂದ್ರಕುಮಾರ್ ಹಾಜರಿದ್ದರು.











