

ಮಡಿಕೇರಿ ನ.11 NEWS DESK : ರಾಜ್ಯ ಆಯುಕ್ತರ ಕಚೇರಿ ಅಂಗವಿಕಲ ವ್ಯಕ್ತಿಗಳ ಹಕ್ಕುಗಳ ಅಧಿನಿಯಮ, ಬೆಂಗಳೂರು ರಾಜ್ಯ ಆಯುಕ್ತಾಲಯವು 2025 ರ ಡಿಸೆಂಬರ್, 5 ರಿಂದ 7 ರವರೆಗೆ ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ರಾಷ್ಟ್ರ ಮಟ್ಟದ ಪರ್ಪಲ್ ಫೆಸ್ಟ್ ಕಾರ್ಯಕ್ರಮ ಆಚರಿಸುತ್ತಿದೆ. ಇದರಲ್ಲಿ ಕೊಡಗು ಜಿಲ್ಲೆಯಲ್ಲಿ ವಿವಿಧ ಕೇತ್ರಗಳಲ್ಲಿ ಸಾಧನೆಗೈದಿರುವ ವಿಕಲಚೇತನ ವ್ಯಕ್ತಿಗಳನ್ನು ರಾಯಭಾರಿಯನ್ನಾಗಿ ಆಯ್ಕೆ ಮಾಡುವ ಸಲುವಾಗಿ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ನ.16 ರೊಳಗೆ ಗೂಗಲ್ ಫಾರ್ಮ್ https://forms.gle/7pMqcgCySATEvNVm6 ಮೂಲಕ ಅಥವಾ ಆಯುಕ್ತರು ಅಂಗವಿಕಲರ ವ್ಯಕಿಗಳ ಹಕ್ಕುಗಳ ಅಧಿನಿಯಮ ಕಚೇರಿಗೆ ಖುದ್ದಾಗಿ ಸಲ್ಲಿಸಬೇಕು. ರಾಯಭಾರಿಯ ಆಯ್ಕೆಗಾಗಿ ಅರ್ಜಿ ನಮೂನೆಯನ್ನು ಹಾಗೂ ರಾಯಭಾರಿಯಾಗಿ ಆಯ್ಕೆಯಾಗಲು ಇರಬೇಕಾದ ಮಾನದಂಡಗಳ ಮಾರ್ಗಸೂಚಿಯ ಪ್ರತಿಯನ್ನು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳ ಕಚೇರಿ, ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆ, ಚೈನ್ಗೇಟ್ ಹತ್ತಿರ, ಮೈಸೂರು ರಸ್ತೆ, ಮಡಿಕೇರಿ ಇಲ್ಲಿಂದ ಪಡೆಯಬಹುದು ಎಂದು ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿ ವಿಮಲ ಅವರು ತಿಳಿಸಿದ್ದಾರೆ.










