
ಮಡಿಕೇರಿ ಡಿ.24 NEWS DESK : ಭಾಗಮಂಡಲದ ಶ್ರೀ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವದ ವಿಕಸನ ಕುರಿತಾಗಿ ಸರಳ ಶಾರೀರಿಕ ವ್ಯಾಯಾಮದ ಶಿಬಿರ ನಡೆಯಿತು. ಗೋಣಿಕೊಪ್ಪಲಿನ ಹೊಳೆಕರೆ ಚಂಗಪ್ಪ ಅವರು ವಿದ್ಯಾರ್ಥಿಗಳಿಗೆ ವ್ಯಾಯಾಮದ ಆಯಾಮಗಳನ್ನು ಹೇಳಿಕೊಟ್ಟರು. ಅಲ್ಲದೇ ವಿದ್ಯಾರ್ಥಿಗಳಿಗೆ ಚಂಗಪ್ಪ ಅವರು ಬರೆದ “ಬದಕ್ ನ ಸಿನ್ಮಲಿ ಒಂದು ಒಳ್ಳ ಪಾರ್ಟ್” ಎಂಬ ಪುಸ್ತಕವನ್ನು ಉಚಿತವಾಗಿ ವಿತರಿಸಿದರು. ಕಾಲೇಜಿನ ಪ್ರಾಂಶುಪಾಲರಾದ ಕೆ.ಜೆ.ದಿವಾಕರ್ ಮತ್ತು ರಾಜ್ಯಶಾಸ್ತ್ರ ಉಪನ್ಯಾಸಕರಾದ ದಾಮೋದರ್ ನಾಯಕ್ ಉಪಸ್ಥಿತರಿದ್ದರು.









