ಮಡಿಕೇರಿ ನ.11 NEWS DESK : ಜ್ಞಾನೋದಯ ಆಂಗ್ಲ ಮಾದ್ಯಮ ಶಾಲೆಯಲ್ಲಿ ನಡೆದ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಭಾಗಮಂಡಲದ ಅಟಲ್ ಬಿಹಾರಿ ವಾಜಪೇಯಿ ವಸತಿ ಶಾಲೆ ಹಲವು ಪ್ರಶಸ್ತಿಯನ್ನು ಗೆದ್ದುಕೊಂಡಿದೆ. ಇಂಗ್ಲೀಷ್ ಭಾಷಣ ಸ್ಪರ್ಧೆಯಲ್ಲಿ ಹೆಚ್.ಆರ್.ಪ್ರಜ್ಞಾ ಪ್ರಥಮ, ಕ್ಲೇ ಮಾಡಲಿಂಗ್ ಬಿ.ಆರ್.ಚಂದನ್ ಪ್ರಥಮ, ಮಿಮಿಕ್ರಿ ಎ.ಜೆ.ದಿಲನ್ ಪ್ರಥಮ, ರಸಪ್ರಶ್ನೆ ಸ್ಪರ್ಧೆಯಲ್ಲಿ ರೋಷನ್ ದೇಶ್ ಪ್ರೇಮ್ ಮತ್ತು ಚಂದ್ರಶೇಖರ್ ಪಟೇಲ್ ಪ್ರಥಮ, ಅಭಿನಯ ಗೀತೆಯಲ್ಲಿ ನೇಹಾಶ್ರೀ ಪ್ರಥಮ, ಕನ್ನಡ ಭಾಷಣ ಸ್ಪರ್ಧೆಯಲ್ಲಿ ಪಿ.ಎಲ್.ಹಿತಾಶ್ರೀ ದ್ವಿತೀಯ, ಹಿಂದಿ ಭಾಷಣ ಸ್ಪರ್ಧೆಯಲ್ಲಿ ಪಿ.ಎಂ.ಡಯಾನ ದ್ವಿತೀಯ, ಭಾವಗೀತೆ ಬಿ.ಡಿ.ಪೃಥ್ವಿ ದ್ವಿತೀಯ, ಜಾನಪದ ನೃತ್ಯ ಕೀರ್ತಿ ಮತ್ತು ತಂಡ ದ್ವಿತೀಯ, ರಂಗೋಲಿ ಸ್ಪರ್ಧೆಯಲ್ಲಿ ಲಕ್ಷ್ಮಿ ದ್ವಿತೀಯ, ಜಾನಪದ ಗೀತೆ ಸ್ಪರ್ಧೆಯಲ್ಲಿ ಸಿಂಚನ ತೃತೀಯ, ಆಶುಭಾಷಣ ಸ್ಪರ್ಧೆಯಲ್ಲಿ ಹೆಚ್.ಪಿ.ದೇವಿಕಾ ತೃತೀಯ, ಕಥೆ ಹೇಳುವುದು ನೇಹಾಶ್ರೀ ತೃತೀಯ ಸ್ಥಾನ ಪಡೆದುಕೊಂಡಿದ್ದಾರೆ. ಪ್ರತಿಭಾ ಕಾರಂಜಿ ಸ್ಪರ್ಧೆಗಳಲ್ಲಿ ಭಾಗವಹಿಸಿದ ಎಲ್ಲಾ ವಿದ್ಯಾರ್ಥಿಗಳಿಗೆ ಹಾಗೂ ಸಹಕಾರ ಹಾಗೂ ಮಾರ್ಗದರ್ಶನ ನೀಡಿದ ಎಲ್ಲಾ ಶಿಕ್ಷಕರಿಗೆ, ಬೋಧಕೇತರ ಮತ್ತು ಅಡುಗೆ ಸಿಬ್ಬಂದಿಗಳಿಗೆ ಶಾಲಾ ಆಡಳಿತ ಮಂಡಳಿ ಅಭಿನಂದನೆ ಸಲ್ಲಿಸಿದೆ.











