

ಮಡಿಕೇರಿ ನ.12 NEWS DESK : ಯೋಜನಾ ಸಮನ್ವಯಾಧಿಕಾರಿಗಳ ಕಚೇರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ, ಮಡಿಕೇರಿ ಈ ಕಚೇರಿಯು ಕೊಡಗು ಜಿಲ್ಲಾ ಪಂಚಾಯತ್ ಕಟ್ಟಡದಿಂದ ನಗರದ ಕಾನ್ವೆಂಟ್ ಜಂಕ್ಷನ್ ಸಮೀಪ, ಲೋಕೋಪಯೋಗಿ ಇಲಾಖೆಯ ಕಟ್ಟಡದ ಹತ್ತಿರ ನೂತನವಾಗಿ ನಿರ್ಮಾಣವಾಗಿರುವ ಯೋಜನಾ ಸಮನ್ವಯಾಧಿಕಾರಿಗಳು, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕೊಡಗು ಜಿಲ್ಲೆ ಇವರ ಕಚೇರಿಗೆ ಸ್ಥಳಾಂತರವಾಗಿದೆ. ಇನ್ನು ಮುಂದೆ ಪತ್ರ ವ್ಯವಹಾರವನ್ನು ಯೋಜನಾ ಸಮನ್ವಯಾಧಿಕಾರಿ, ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ, ಕಾನ್ವೆಂಟ್ ಜಂಕ್ಷನ್ ಸಮೀಪ, ಲೋಕೋಪಯೋಗಿ ಇಲಾಖೆ ಕಟ್ಟಡ ಹತ್ತಿರ ಕೊಡಗು ಜಿಲ್ಲೆ, ಮಡಿಕೇರಿ ವಿಳಾಸಕ್ಕೆ ತಲುಪಿಸಲು ಹಾಗು ಸಾರ್ವಜನಿಕರು/ ಪರಿಶಿಷ್ಟ ಪಂಗಡದವರು ಈ ಕಚೇರಿಯನ್ನು ಸಂಪರ್ಕಿಸಬಹುದು ಎಂದು ಸಮಗ್ರ ಗಿರಿಜನ ಅಭಿವೃದ್ಧಿ ಯೋಜನೆ ಇಲಾಖೆಯ ಯೋಜನಾ ಸಮನ್ವಯಾಧಿಕಾರಿ ಎಸ್.ಹೊನ್ನೇಗೌಡ ಅವರು ಕೋರಿದ್ದಾರೆ.










