
ವಿರಾಜಪೇಟೆ ನ.12 NEWS DESK : ವಿಶ್ವಸಂಸ್ಥೆಯ ಅಂತರರಾಷ್ಟ್ರೀಯ ಮಕ್ಕಳ ತುರ್ತು ನಿಧಿ (ಯುನಿಸೆಫ್)ನ ಹೈದರಾಬಾದ್ ಪ್ರಾದೇಶಿಕ ಕಚೇರಿ ಹಾಗೂ ಮೈಸೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದ ವತಿಯಿಂದ ಬೆಂಗಳೂರಿನ ಹಲಸೂರಿನಲ್ಲಿರುವ ರ್ಯಾಡಿಸನ್ ಬೆಂಗಳೂರು ಸಿಟಿ ಸೆಂಟರ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಮಹಿಳಾ ಮತ್ತು ಮಕ್ಕಳ ಸಂಬಂಧಿ ಆರೋಗ್ಯ ಕಾರ್ಯಾಗಾರದಲ್ಲಿ ಕೊಡಗಿನಿಂದ ಸಾಹಿತಿ ಹಾಗೂ ಪತ್ರಕರ್ತೆ ರಜಿತ ಕಾರ್ಯಪ್ಪ ಪಾಲ್ಗೋಂಡು ಪ್ರಶಂಸನಾ ಪತ್ರ ಪಡೆದುಕೊಂಡಿದ್ದಾರೆ. ಈ ಸಂದರ್ಭ ರಾಷ್ಟ್ರೀಯ ಕಿಶೋರ ಸ್ವಾಸ್ಥ್ಯ ಕಾರ್ಯಕ್ರಮದ ಉಪನಿರ್ದೇಶಕಿ ಡಾ. ಇಂದುಮತಿ, ಮೈಸೂರು ವಿಶ್ವ ವಿದ್ಯಾನಿಲಯದ ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ ಅಧ್ಯಯನ ವಿಭಾಗದ ಪ್ರಾದ್ಯಾಪಕಿ ಡಾ. ಸಪ್ನ, ಯುನಿಸೆಫ್‍ನ ಭಾರತೀಯ ಘಟಕದ ವೈಧ್ಯಕೀಯ ಸಲಹೆಗಾರ ಡಾ. ಶ್ರೀಧರ್ ಪ್ರಹ್ಲಾದ್, ಹೈದರಾಬಾದ್ ಯುನಿಸೆಫ್‍ನ ಪ್ರಾದೇಶಿಕ ಕಛೇರಿಯ ಮುಖ್ಯಸ್ಥ ಡಾ. ಪ್ರೊಸುನ್‍ಸೆನ್ ಮತ್ತಿತರರು ಇದ್ದರು.









