ಸೋಮವಾರಪೇಟೆ ನ.15 NEWS DESK : ಬಿಹಾರ ಚುನಾವಣೆಯಲ್ಲಿ ಎನ್‍ಡಿಎ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆ ಸೋಮವಾರಪೇಟೆ ಮಂಡಳ ಬಿಜೆಪಿ ವತಿಯಿಂದ ವಿಜಯೋತ್ಸವ ಆಚರಿಸಲಾಯಿತು. ಪಟ್ಟಣದ ಪುಟ್ಟಪ್ಪ ವೃತ್ತದಲ್ಲಿ ಜಮಾಯಿಸಿದ ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಿಸಿದರು. ಬಿಜೆಪಿ ಮುಖಂಡರಾದ ಎಸ್.ಜಿ.ಮೇದಪ್ಪ, ಮಹೇಶ್ ತಿಮ್ಮಯ್ಯ, ಮನು ಕುಮಾರ್ ರೈ, ದರ್ಶನ್ ಜೋಯಪ್ಪ, ಬಿ.ಜೆ.ದೀಪಕ್, ಎಸ್.ಆರ್.ಸೋಮೇಶ್, ಕಿಬ್ಬೆಟ್ಟ ಮಧು ಇದ್ದರು.











