ಕುಶಾಲನಗರ ನ.15 NEWS DESK : ಕುಶಾಲನಗರದ ಚೇಂಬರ್ ಆಫ್ ಕಾಮರ್ಸ್ ಮತ್ತು ಇಂಡಸ್ಟ್ರೀಸ್ ಸದೃಢವಾಗುತ್ತಿದೆ. 35 ವರ್ಷಗಳ ಇತಿಹಾಸವಿರುವುದನ್ನು ಮತ್ತಷ್ಟು ಗಟ್ಟಿಗೊಳಿಸಲಾಗುತ್ತಿದೆ ಎಂದು ಕೊಡಗು ಜಿಲ್ಲಾ ಚೇಂಬರ್ ಆಫ್ ಕಾಮರ್ಸ್ ಅಧ್ಯಕ್ಷ ಬಿ.ಆರ್.ನಾಗೇಂದ್ರ ಪ್ರಸಾದ್ ತಿಳಿಸಿದರು. ಕುಶಾಲನಗರದ ಬಾಪೂಜಿ ಬಡಾವಣೆಯಲ್ಲಿ ಚೇಂಬರ್ ಆಫ್ ಕಾಮರ್ಸ್ ಅಂಡ್ ಇಂಡಸ್ಟ್ರೀಸ್ ನ ನೂತನ ಸ್ಥಾನಿಕ ಕಚೇರಿಯನ್ನು ಉದ್ಘಾಟಿಸಿ ಮಾತನಾಡಿದ ಅವರು, ಕೊಡಗಿನದ್ಯಂತ ಸುಮಾರು 13 ಕ್ಕಿಂತ ಅಧಿಕ ಸ್ಥಾನಿಯ ಸಮಿತಿಗಳು ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿವೆ. ಅದರಲ್ಲಿ ಕುಶಾಲನಗರ ಘಟಕದ ಅಧ್ಯಕ್ಷರಾದ ಕೆ.ಎಸ್.ನಾಗೇಶ್ ಅವರ ನೇತೃತ್ವದಲ್ಲಿ ಸಾಕಷ್ಟು ಜನಪೋಯೋಗಿ ಕೆಲಸಗಳನ್ನು ಮಾಡಿ ಜನರ ವಿಶ್ವಾಸಗಳಿಸಿದೆ ಎಂದು ಶ್ಲಾಘಿಸಿದರು. ಏಕ ಬಳಕೆ ಪ್ಲಾಸ್ಟಿಕ್ ನಿಷೇಧ ಅಭಿಯಾನ, ಕುಶಾಲನಗರ ಹಬ್ಬ 2025 ಎನ್ನುವ ವಿಶಿಷ್ಠ ಗ್ರಾಹಕ ಮೇಳ, ಕಾರ್ಮಿಕ ಇಲಾಖೆಯಿಂದ ನೋಟಿಸ್ ಜಾರಿಯಾಗಿದ್ದನ್ನು ಪ್ರಶ್ನಿಸಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರೊಂದಿಗೆ ಚರ್ಚಿಸಿ ಪರಿಹಾರ ಕಂಡುಕೊಂಡಿದ್ದು ಹೀಗೆ ಹಲವು ಯಶಸ್ವಿ ಕಾರ್ಯಕ್ರಮಗಳು ನಡೆದಿರುವ ಕುರಿತು ಪ್ರಶಂಸೆ ವ್ಯಕ್ತಪಡಿಸಿದರು. ಕುಶಾಲನಗರ ಚೇಂಬರ್ ಆಫ್ ಕಾಮರ್ಸ್ ನ ಅಧ್ಯಕ್ಷ ಕೆ.ಎಸ್.ನಾಗೇಶ್ ಮಾತನಾಡಿ, ಕುಶಾಲನಗರ ಜನತೆಗೆ ಪುರಸಭೆ ಅವೈಜ್ಞಾನಿಕವಾಗಿ ತೆರಿಗೆ ಹೆಚ್ಚಿಸಿದ್ದನ್ನು ಆಡಳಿತ ಮಂಡಳಿಯ ಗಮನಕ್ಕೆ ತಂದು ಕಳೆದ ವರ್ಷಕ್ಕೆ ಕೇವಲ ಶೇ.10 ಹೆಚ್ಚಳ ಮಾಡಿಸುವಲ್ಲಿ ಸಾಧ್ಯವಾಗಿದ್ದನ್ನು ತಿಳಿಸಿದರು. 1990ರ ದಶಕದಲ್ಲಿ ಸ್ಥಾಪನೆಯಾದ ಚೇಂಬರ್ ಆಫ್ ಕಾಮರ್ಸ್ ನ ಪ್ರಾರಂಭಿಕ ಆಡಳಿತ ಮಂಡಳಿಯ ಸದಸ್ಯರುಗಳ ಕಾರ್ಯ ಸಾಧನೆಗಳನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಕುಶಾಲನಗರ ಸ್ಥಾನೀಯ ಘಟಕದ ಉಪಾಧ್ಯಕ್ಷರು ಜಿಲ್ಲಾ ನಿರ್ದೇಶಕ ರಂಗಸ್ವಾಮಿ, ಕಚೇರಿಗೆ ಕಟ್ಟಡವನ್ನು ತಾತ್ಕಾಲಿಕವಾಗಿ ಉಚಿತವಾಗಿ ನೀಡಿದ ಅಬ್ದುಲ್ ರಶೀದ್, ಕಾರ್ಯದರ್ಶಿ ಚಿತ್ರ ರಮೇಶ್, ಖಜಾಂಜಿ ಎನ್ ವಿ ಬಾಬು, ನಿರ್ದೇಶಕರಾದ ಪಿ.ಎಂ.ಮೋಹನ್, ಕೆ.ಜೆ.ಸತೀಶ್, ರಿಚರ್ಡ್ ಡಿಸೋಜ, ಓಂ ಪ್ರಕಾಶ್, ಜನಾರ್ಧನ ಪ್ರಭು, ವಿಮಲ್ ಜೈನ್ ಮತ್ತಿತ್ತರ ಪದಾಧಿಕಾರಿಗಳು ಹಾಗೂ ಸದಸ್ಯರು ಭಾಗವಹಿಸಿದ್ದರು.










