ಕಣಿವೆ ನ.15 NEWS DESK : ಸ್ವಚ್ಛ ಭಾರತ್ ಮಿಷನ್ ಯೋಜನೆಯ ಸಾಮರ್ಥ್ಯ ಅಭಿವೃದ್ಧಿ ಘಟಕದಡಿಯಲ್ಲಿ ಬೆಂಗಳೂರಿನ ಸ್ವಚ್ಛ ಗೃಹ ಕಲಿಕ ಕೇಂದ್ರಕ್ಕೆ ಕುಶಾಲನಗರದ ಪುರಸಭೆಯ ಪೌರ ಕಾರ್ಮಿಕರ ನಿಯೋಗ ಒಂದು ದಿನದ ಅಧ್ಯಯನ ಪ್ರವಾಸ ಕೈಗೊಂಡಿತ್ತು. ಬೆಂಗಳೂರಿನ ಸ್ವಚ್ಛ ಗೃಹ ಕಲಿಕಾ ಕೇಂದ್ರದಲ್ಲಿ ನಡೆಯುತ್ತಿರುವ ದೇವಸ್ಥಾನದ ಕಸವನ್ನು ಹೇಗೆ ಗೊಬ್ಬರವಾಗಿಸಬೇಕು, ಮನೆಯಲ್ಲಿ ಉತ್ಪತ್ತಿಯಾಗುವ ಕಸವನ್ನು ಗೊಬ್ಬರ ಮಾಡುವ ವಿಧಾನಗಳು, ಕಸವನ್ನು ಯಾವ ರೀತಿ ಮನೆಯಲ್ಲಿ ವಿಂಗಡಣೆ ಮಾಡಬೇಕು, ನಾಗರೀಕರೊಂದಿಗೆ ಸಂವಾದ ಹೇಗೆ ನಡೆಸಬೇಕು, ಮನೆಯಲ್ಲಿಯೇ ಕಸವನ್ನು ಬೇರ್ಪಡಿಸಿ ತರಬೇಕೆಂದು ತಿಳಿಸಲಾಯಿತು. ಎರೆಹುಳು ಗೊಬ್ಬರ ತಯಾರಿಸುವ ವಿಧಾನ, ಪೈಪ್ ಕಾಂಪೋಸ್ಟಿಂಗ್, ಮೆಶ್ ಕಾಂಪೋಸ್ಟಿಂಗ್ ಬಗ್ಗೆ ತಿಳಿಸಿ ಕೊಡಲಾಯಿತು. ನಂತರ ಮಹಿಳೆಯರ ಮಾಸಿಕ ರುತುಚಕ್ರದ ಸಂದರ್ಭ ಬಳಸುವ ಪ್ಯಾಡ್ ಗಳ ಬಳಕೆ ಮತ್ತು ಆರೋಗ್ಯಕಾರಿಯಾಗಿ ನಿರ್ವಹಣೆಯ ವಿಧಾನಗಳು, ಗೃಹಬಳಕೆಯ ಅನುಪಯುಕ್ತ ಪ್ಲಾಸ್ಟಿಕ್ ಗಳ ವಿಂಗಡಣೆ, ಮರು ಬಳಕೆ ಮಾಡಬಹುದಾದ ಬಗ್ಗೆ ಸಮಗ್ರವಾಗಿ ಮಾಹಿತಿ ಕೊಡಲಾಯಿತು.
ಇದೇ ಸಂದರ್ಭ ಸ್ವಚ್ಛ ಕಲಿಕಾ ಕೇಂದ್ರದ ಸಂಪನ್ಮೂಲ ವ್ಯಕ್ತಿಯೊಬ್ಬರು ಪ್ಲಾಸ್ಟಿಕಾಸುರ ಎಂಬ ನಾಮಾಂಕಿತರು ಪ್ಲಾಸ್ಟಿಕ್ ಗಳಿಂದ ಪರಿಸರದ ಮೇಲಾಗುವ ಹಾನಿಗಳ ಬಗ್ಗೆ ಮಾಹಿತಿ ನೀಡುವ ರೂಪಕ ನಡೆಸಿಕೊಟ್ಟರು. ಈ ಪ್ರವಾಸದಲ್ಲಿ ಹಿರಿಯ ಅರೋಗ್ಯ ನಿರೀಕ್ಷಕ ರಾದ ಉದಯ ಕುಮಾರ್, ಯೋಜನಾ ನಿರ್ದೇಶಕರ ಕಚೇರಿಯ ಘನ ತ್ಯಾಜ್ಯಾ ನಿರ್ವಹಣಾ ತಜ್ಞರಾದ ಎಂ. ಕೀರ್ತಿ ಪ್ರಸಾದ್ ಅಧ್ಯಯನ ಪ್ರವಾಸ ಆಯೋಜಿಸಿದ್ದರು. ಸಂಪನ್ಮೂಲ ವ್ಯಕ್ತಿಗಳಾದ ಎಸ್ ಡಬ್ಲ್ಯೂ ಎಂ ಅರ್ ಟಿ ಸಂಸ್ಥೆಯ ವಾಸುಕಿ ಅಯ್ಯಂಗಾರ್, ಗ್ರೀನ್ ಅಯಾನ್ ಸಂಸ್ಥೆಯ ಸಿ.ಎಂ. ಸಂಪತ್ ಹಾಗೂ ಎಚ್ ಎಸ್ ಅರ್ ಸಿಟಿಜನ್ ಫೋರಮ್ ನ ಲಕ್ಷ್ಮಿ ಉಪಸ್ಥಿತರಿದ್ದರು.











