ಮಡಿಕೇರಿ NEWS DESK ನ.16 : ವಿರಾಜಪೇಟೆಯ ಸರ್ಕಾರಿ ಪದವಿ ಪೂರ್ವ ಕಾಲೇಜು ಮೈದಾನದಲ್ಲಿ ನಡೆದ ತಾಲ್ಲೂಕು ಮಟ್ಟದ ಅಥ್ಲೆಟಿಕ್ಸ್ ಪಂದ್ಯಾವಳಿಯ ವಿವಿಧ ಆಟೋಟಗಳಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ಪ್ರೌಢಶಾಲಾ ಮತ್ತು ಪ್ರಾಥಮಿಕ ವಿಭಾಗದ ವಿದ್ಯಾರ್ಥಿಗಳು ಸ್ಪರ್ಧಿಸಿ ಪದಕಗಳನ್ನು ಗೆದ್ದಿದ್ದಾರೆ. 200 ಮೀ ಓಟದ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಬೊವ್ವೇರಿಯಂಡ ಹನ್ಸಿಕಾ ಪೊನ್ನಪ್ಪ ಚಿನ್ನದ ಪದಕ , 400 ಮೀ ಓಟದ ಸ್ಪರ್ಧೆಯಲ್ಲಿ 9ನೇ ತರಗತಿ ವಿದ್ಯಾರ್ಥಿನಿ ಕರ್ನಂಡ ಕೃತಿಕಾ ಅಕ್ಕಮ್ಮ ಚಿನ್ನದ ಪದಕ,400 ಮೀ ಓಟದ ಸ್ಪರ್ಧೆಯಲ್ಲಿ 8ನೇ ತರಗತಿಯ ವಿದ್ಯಾರ್ಥಿನಿ ಕರ್ನಂಡ ಶತಕ ಕಾವೇರಮ್ಮ ಬೆಳ್ಳಿ ಪದಕ, 400 ಮೀ ಓಟದ ಸ್ಪರ್ಧೆಯಲ್ಲಿ ನಡುಮನೆ ಮೋಕ್ಷಿತ ಕಂಚಿನ ಪದಕ, 600 ಮೀ ಓಟದ ಸ್ಪರ್ಧೆಯಲ್ಲಿ 7ನೇ ತರಗತಿ ಹಿತಾರ್ಥ ಕಂಚಿನ ಪದಕ, 4×400 ಮೀ ರಿಲೇ ಪಂದ್ಯಾಟದಲ್ಲಿ ಕರ್ನಂಡ ಕೃತಿಕಾ ಅಕ್ಕಮ್ಮ, ಬೊವ್ವೇರಿಯಂಡ ಹನ್ಸಿಕಾ ಪೊನ್ನಪ್ಪ, ಕರ್ನಂಡ ಶತಕ ಕಾವೇರಮ್ಮ, ಕುಲ್ಲಚಂಡ ಭೂಮಿಕ ಬೋಜಮ್ಮ ಒಳಗೊಂಡ ತಂಡ ಚಿನ್ನದ ಪದಕ ತಮ್ಮದಾಗಿಸಿಕೊಂಡಿರುತ್ತಾರೆ. ಶಾಲಾ ದೈಹಿಕ ಶಿಕ್ಷಕರಾದ ಮೋನಿಕಾ ಹಾಗೂ ಲಾವಣ್ಯ ಅವರ ಮಾರ್ಗದರ್ಶನದಲ್ಲಿ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಪಾಲ್ಗೊಂಡರು. ಇವರ ಈ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ, ಬೋದಕ ಬೋದಕೇತರ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿರುತ್ತಾರೆ.











