ಮಡಿಕೇರಿ NEWS DESK ನ.16 : ಬ್ಲೂ ಬ್ಯಾಂಡ್ ಎಫ್‌ಎಂ ಎಸ್‌ಸಿಐ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್ ನೇತೃತ್ವದಲ್ಲಿ ರೋಬಸ್ಟಾ ಸ್ಪೋರ್ಟ್ಸ್ ಅಂಡ್ ಅಡ್ವೆಂಚರ್ ಅಕಾಡೆಮಿ ಸಹಕಾರದೊಂದಿಗೆ ರೋಬಸ್ಟಾ 2025 ರ‍್ಯಾಲಿ ಪಾಲಿಬೆಟ್ಟ ಸುತ್ತಮುತ್ತಲ ಕಾಫಿ ತೋಟಗಳಲ್ಲಿ ಕಡಿದಾದ ರಸ್ತೆಯಲ್ಲಿ ನಡೆಯಿತು. ಕರ್ನಾಟಕ, ತಮಿಳುನಾಡು, ಆಂಧ್ರ, ಕೇರಳ, ಮಹಾರಾಷ್ಟ್ರ, ಗೋವಾ, ಪೂನಾ, ಚಂಡೀಗಡ್, ಕಲ್ಕತ್ತಾ ಸೇರಿದಂತೆ ವಿವಿಧ ರಾಜ್ಯಗಳ 58 ಸ್ಪರ್ಧಿಗಳು ಪಾಲ್ಗೊಂಡಿದ್ದರು. ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್‌ಶಿಪ್‌ನ ಮೂರನೇ ಸುತ್ತಿನ ಸ್ಪರ್ಧೆ ಟಾಟಾ ಕಾಫಿ ಸಂಸ್ಥೆಯ ಕಾಫಿ ಎಸ್ಟೇಟ್‌ನಲ್ಲಿ ನಡೆಯಿತು. ಕೊಡಗಿನಲ್ಲಿ ಸತತ ಮೂರನೇ ಬಾರಿಗೆ ನಡೆದ ಇಂಡಿಯನ್ ನ್ಯಾಷನಲ್ ರ‍್ಯಾಲಿ ಚಾಂಪಿಯನ್ ಶಿಪ್‌ನ ಜವಾಬ್ದಾರಿಯನ್ನು ತಿಮ್ಮಣ್ಣ, ಮಾಚಯ್ಯ ಮ್ಯಾಕ್ಸ್, ಸೋಮಣ್ಣ ಮತ್ತಿತರರು ವಹಿಸಿಕೊಂಡಿದ್ದರು. ಮೊದಲನೇ ದಿನದಲ್ಲಿ ಸಂಚರಿಸಿದ 58 ಕಾರುಗಳ ಪೈಕಿ 10ಕ್ಕೊ ಹೆಚ್ಚು ಕಾರುಗಳು ತಾಂತ್ರಿಕ ದೋಷ ಅನುಭವಿಸಿದವು. ಜಿಲ್ಲೆಯ ಸುತ್ತಮುತ್ತಲ ಸಾರ್ವಜನಿಕರು, ಕ್ರೀಡಾಪಟುಗಳು, ಕಾರ್ಮಿಕರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ರ‍್ಯಾಲಿಪಟುಗಳನ್ನು ಹುರಿದುಂಬಿಸಿದರು. ಸವಾಲಿನೊಂದಿಗೆ ಗುರಿ ಮುಟ್ಟಿದ ರ‍್ಯಾಲಿಪಟುಗಳು ಬಹುಮಾನ ಪಡೆದರು.











