
ಮಡಿಕೇರಿ ನ.17 NEWS DESK : ನವ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ, ಸರ್ವೋಚ್ಚ ನ್ಯಾಯಾಲಯದ ಹಿರಿಯ ವಕೀಲರು ಹಾಗೂ ಸಂಸದರಾದ ಕಪಿಲ್ ಸಿಬಲ್ ರವರ, “ದಿಲ್ ಸೇ ವಿತ್ ಕಪಿಲ್ ಸಿಬಲ್” ಕಾರ್ಯಕ್ರಮದ 100ನೇ ಸಂಚಿಕೆಯ ಸಂಭ್ರಮಾಚರಣೆಯಲ್ಲಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಅವರು ಪಾಲ್ಗೊಂಡಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್, ಎಐಸಿಸಿ ಅಧ್ಯಕ್ಷರಾದ ಮಲ್ಲಿಕಾರ್ಜುನ ಖರ್ಗೆ ಮತ್ತಿತರ ಗಣ್ಯರೊಂದಿಗೆ ಭಾಗವಹಿಸುವ ಅವಕಾಶ ನನಗೆ ಲಭಿಸಿದ್ದು ನನ್ನ ಭಾಗ್ಯ ಎಂದು ಶಾಸಕ ಪೊನ್ನಣ್ಣ ಅವರು ಹೇಳಿದರು. ಈ ಸಂಚಿಕೆಯ ತಂಡದ ಎಲ್ಲಾ ಸದಸ್ಯರಿಗೆ ಶುಭಾಶಯಗಳು ಕೋರುತ್ತಾ, ಇನ್ನು ಮುಂದೆಯೂ ಸಹ ಮತ್ತಷ್ಟು ಅರ್ಥಪೂರ್ಣ ಹಾಗೂ ಸ್ಪೂರ್ತಿದಾಯಕ ಸಂಚಿಕೆಗಳು ಹೊರಬರುವಂತಾಗಲಿ ಎಂದು ಆಶಿಸಿದರು. ಈ ಸಂದರ್ಭ ಸಚಿವರುಗಳಾದ ಕೆ.ಜೆ ಜಾರ್ಜ್, ಎಚ್.ಸಿ ಮಹದೇವಪ್ಪ, ಬೈರತಿ ಸುರೇಶ್, ಜಮೀರ್ ಅಹ್ಮದ್ ಖಾನ್, ಎಂ.ಸಿ ಸುಧಾಕರ್, ಶಾಸಕರು ಅಶೋಕ್ ಪಟ್ಟಣ್, ಹಾಗೂ ಮತ್ತಿತರರು ಪ್ರಮುಖರು ಭಾಗವಹಿಸಿದ್ದರು.









