ಮಡಿಕೇರಿ ನ.17 NEWS DESK : ಚೇರಂಬಾಣೆ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮ ನಡೆಯಿತು.ವಿವಿಧ ವಿಭಾಗಗಳಲ್ಲಿ ನಡೆದ ಸ್ಪರ್ಧೆಗಳಲ್ಲಿ ಚೇರಂಬಾಣೆಯ ಶ್ರೀ ರಾಜರಾಜೇಶ್ವರಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಭಾಗವಹಿಸಿ 19 ಪ್ರಥಮ ಬಹುಮಾನ, 11 ದ್ವಿತೀಯ ಬಹುಮಾನ ಹಾಗೂ 6 ತೃತೀಯ ಬಹುಮಾನಗಳನ್ನು ಗಳಿಸುದರ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. 1 ರಿಂದ 4ನೇ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕಥೆ ಹೇಳುವುದು – ತನ್ವಿತ ರಾಜೇಶ್ ಕೆ, ಧಾರ್ಮಿಕ ಪಠಣ -ತನ್ವಿತ ರಾಜೇಶ್ ಕೆ, ದೇಶಭಕ್ತಿ ಗೀತೆ – ಲಿಪಿ ಆಳ್ವ ಬಿ.ಎ, ಚಿತ್ರಕಲೆ – ಯೋಗಿತ್ ಪಿ.ವಿ ಪ್ರಥಮ ಬಹುಮಾನ ಗೆದ್ದುಕೊಂಡಿದ್ದಾರೆ. ಕನ್ನಡ ಕಂಠಪಾಠ – ಅನ್ವಿತ ಸುದೀಪ್ ಕೆ, ಅಭಿನಯಗೀತೆ – ಮೊನಾಲಿ ಎಂ.ಕೆ ದ್ವಿತೀಯ ಬಹುಮಾನ ಪಡೆದುಕೊಂಡರು. ಛದ್ಮವೇಷ – ಓಶಿನ್ ಮುತ್ತಮ್ಮ ಬಿ.ಎ., ಕ್ಲೇ ಮಾಡೆಲ್ – ಪುನರ್ವಿ ಹೊಸೂರು ತೃತೀಯ ಬಹುಮಾನವನ್ನು ತಮ್ಮದಾಗಿಸಿಕೊಂಡರು. 5 ರಿಂದ 7ನೆಯ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಭಕ್ತಿ ಗೀತೆ – ಯಶಸ್ ಮಂದಣ್ಣ ಕೆ.ಬಿ., ಪದ್ಯ ವಾಚನ – ಭವಿಷ್ಯ ಕೆ.ಬಿ., ಪ್ರಬಂಧ ರಚನೆ – ಪ್ರಥಮ್ ಎಮ್.ಎ, ಚಿತ್ರಕಲೆ – ಯಶಸ್ ಮಂದಣ್ಣ ಕೆ.ಬಿ, ಆಶುಭಾಷಣ – ಅಭಿನಂದನ್ ಹೊಸೂರ್ ಪ್ರಥಮ ಸ್ಥಾನ ಪಡೆದುಕೊಂಡರು. ಕನ್ನಡ ಕಂಠಪಾಠ – ತನ್ಮಯಿ ಕೆ.ಕೆ, ಇಂಗ್ಲಿಷ್ ಕಂಠಪಾಠ ಕವನ ಪಿ.ವಿ, ಧಾರ್ಮಿಕ ಪಠಣ – ಅಪ್ರಮೇಯ ಬಿ.ಎ, ದೇಶಭಕ್ತಿ ಗೀತೆ – ನಿಖಿಲ್ ನಂಜಪ್ಪ ಕೆ.ಪಿ ದ್ವಿತೀಯ ಬಹುಮಾನ ಗೆದ್ದುಕೊಂಡರು. ಹಿಂದಿ ಕಂಠಪಾಠ – ಚರಿತ ಎ.ಜೆ, ಕ್ಲೇ ಮಾಡಲಿಂಗ್- ಚಿನ್ಮಯ್ ಕೆ.ಜೆ., ತೃತೀಯ ಬಹುಮಾನ ಪಡೆದುಕೊಂಡರು. 8 ರಿಂದ 12ನೆಯ ತರಗತಿ ವಿದ್ಯಾರ್ಥಿಗಳಿಗೆ ನಡೆದ ಸ್ಪರ್ಧೆಯಲ್ಲಿ ಕನ್ನಡ ಭಾಷಣ – ತನ್ವಿ ದೀಪಕ್ ಕೆ, ಧಾರ್ಮಿಕ ಪಠಣ – ಅನುಪಮಾ ಕೆ.ವಿ, ಜನಪದ ಗೀತೆ – ಪೂರ್ಣ ಪಿ.ಎ., ಜನಪದ ಗೀತೆ – ಪೂರ್ಣ ಪಿ.ಎ., ಭರತನಾಟ್ಯ- ಲಕ್ಷ್ಯ ಚೋಂದಮ್ಮ ಬಿ.ಕೆ., ಪ್ರಬಂಧ – ತ್ರಿಷ ಕೆ.ಜೆ, ಮಿಮಿಕ್ರಿ- ಶ್ರೀವತ್ಸ ಬಿ.ಡಿ., ರಂಗೋಲಿ – ವಿಸ್ಮಯ ಟಿ.ವಿ, ಪದ್ಯವಾಚನ – ಯಶಿಕಾ ಬಿ.ಎಸ್., ರಸಪ್ರಶ್ನೆ – ಆಶಿಕ್ ಮಂದಣ್ಣ ಕೆ.ಪಿ ಮತ್ತು ಕೌಶಿಕ್ ಟಿ.ಎಂ. ಪ್ರಥಮ, ಇಂಗ್ಲೀಷ್ ಭಾಷಣ – ತ್ರಿಷ ಎ.ಎಸ್, ಹಿಂದಿ ಭಾಷಣ- ವನ್ಯಕೃಷ್ಣ ಕೆ.ಟಿ., ಚಿತ್ರಕಲೆ – ವಿಸ್ಮಯ ಟಿ.ವಿ., ಚರ್ಚಾ ಸ್ಪರ್ಧೆ- ಶ್ರೀವತ್ಸ ಬಿ.ಡಿ, ಆಶುಭಾಷಣ – ತ್ರಿಷ ಎ.ಎಸ್.ದ್ವಿತೀಯ, ಧಾರ್ಮಿಕ ಪಠಣ – ಅಫಿಯ ಪಿ.ಎ., ಗಝಲ್ – ಅನುಪಮಾ ಕೆ.ವಿ.ತೃತೀಯ ಬಹುಮಾನ ಗೆದ್ದುಕೊಂಡರು.











