ನಾಪೋಕ್ಲು ನ.17 NEWS DESK : ಬೇತು ಗ್ರಾಮದ ಸೇಕ್ರೆಡ್ ಹಾರ್ಟ್ಸ್ ಆಂಗ್ಲ ಮಾಧ್ಯಮ ಶಾಲೆಯ ಹತ್ತನೇ ತರಗತಿ ವಿದ್ಯಾರ್ಥಿ ಪೊರುಕೊಂಡ ರಯಾನ್ ಪೆಮ್ಮಯ್ಯ ರಾಜ್ಯ ಮಟ್ಟದ ಕೊಡಗು ತಂಡದ ಪರವಾಗಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ವಿಭಾಗ ಮಟ್ಟದ ಪ್ರೌಢಶಾಲಾ ಅಂಡರ್-17 ವಯೋಮಿತಿಯ ಶಟಲ್ ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ಕೊಡಗು ತಂಡದ ಪರ ಆಡಿ ರಾಯಚೂರಿನಲ್ಲಿ ನಡೆಯಲಿರುವ ರಾಜ್ಯ ಮಟ್ಟದ ಅಂಡರ್ – 17 ಶಟಲ್ ಬ್ಯಾಡ್ಮಿಂಟನ್ ಟೂರ್ನಮೆಂಟ್ ನಲ್ಲಿ ಭಾಗವಹಿಸಲು ಆಯ್ಕೆಯಾಗಿದ್ದಾರೆ. ಇವರು ಹಳೆ ತಾಲೂಕು ನಿವಾಸಿ ಪೊರುಕೊಂಡ ಸುನಿಲ್ ಮತ್ತು ದಮಯಂತಿ ದಂಪತಿಗಳ ಪುತ್ರ.
ವರದಿ : ದುಗ್ಗಳ ಸದಾನಂದ.











