ನಾಪೋಕ್ಲು ನ.17 NEWS DESK : ಚೆರಿಯ ಪರಂಬುವಿನ ಕಕ್ಕುಂದ ಕಾಡಿನ ಕರಿ ಚಾಮುಂಡಿ ದೇವಾಲಯಕ್ಕೆ ತೆರಳುವ ರಸ್ತೆಯ ಕಾಮಗಾರಿಗೆ ಗ್ರಾಮ ಪಂಚಾಯಿತಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್ ಚಾಲನೆ ನೀಡಿದರು. ಶಾಸಕರ 5 ಲಕ್ಷ ರೂ.ಅನುದಾನದಲ್ಲಿ ಕಾಂಕ್ರೀಟ್ ರಸ್ತೆಯ ನಿರ್ಮಾಣಕ್ಕೆ ಭೂಮಿ ಪೂಜೆ ನೆರವೇರಿಸಲಾಯಿತು. ಬಹು ದಿನಗಳ ಬೇಡಿಕೆಯನ್ನು ಈಡೇರಿಸಿದ ಶಾಸಕರ ಕಾಳಜಿಯ ಬಗ್ಗೆ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಡಿಸಿಸಿ ಉಪಾಧ್ಯಕ್ಷ ಎಮ್.ಹೆಚ್ ಅಬ್ದುಲ್ ರೆಹಮಾನ್, ಗ್ರಾಮ ಪಂಚಾಯತಿ ಸದಸ್ಯ ಕೆ.ಎ.ಇಸ್ಮಾಯಿಲ್, ಮಾಚೇಟಿರ ಕುಸು ಕುಶಾಲಪ್ಪ, ತಿಮ್ಮಯ್ಯ, ಯುವಕರು ಕಾಂಗ್ರೆಸ್ಸಿನ ಅನುಷ್ಠಾನ ಸಮಿತಿ ಸದಸ್ಯ ಸಿರಾಜ್, ಎಮ್ ಎಚ್ ಉಭೈದು. ಟಿ.ಎ.ಇಬ್ರಾಹಿಂ. ಶ್ರೀ ಲಕ್ಷ್ಮಿ ವೆಂಕಟೇಶ್ವರ ದೇವಸ್ಥಾನದ ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗೋಪಾಲ, ಖಜಾಂಚಿ ಸೂರ್ಯಕುಮಾರ್, ಭವಾನಿ, ಆಶಾಲತಾ, ವಸಂತ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.
ವರದಿ : ದುಗ್ಗಳ ಸದಾನಂದ.











