
ಮಡಿಕೇರಿ ನ.17 NEWS DESK : ಉತ್ತರ ಕನ್ನಡ ಕಿವುಡರ ಸಂಘದ ವತಿಯಿಂದ ನ.20 ಮತ್ತು 21 ರಂದು ನಡೆಯಲಿರುವ 15ನೇ ಕರ್ನಾಟಕ ರಾಜ್ಯ ಕಿವುಡರ ಕ್ರೀಡಾಕೂಟದಲ್ಲಿ ಕೊಡಗು ತಂಡ ಭಾಗವಹಿಸಲಿದ್ದು, ದಾನಿಗಳು ಸಹಕರಿಸುವಂತೆ ಸಂಘದ ಉಪಾಧ್ಯಕ್ಷ ಕೆ.ಕೆ.ಶಂಕರ ನಾರಾಯಣ ಕೋರಿದ್ದಾರೆ.
ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಉತ್ತರ ಕನ್ನಡ ಶ್ರೀ ಮಾರಿಕಾಂಬಾ ಜಿಲ್ಲಾ ಕ್ರೀಡಾಂಗಣದಲ್ಲಿ ಎರಡು ದಿನಗಳ ಕಾಲ ನಡೆಯಲಿರುವ ಕ್ರೀಡಾಕೂಟದಲ್ಲಿ ಕೊಡಗು ಜಿಲ್ಲಾ ಕಿವುಡರ ಸಂಘ ಕೊಡಗು ಜಿಲ್ಲೆಯನ್ನು ಪ್ರತಿಧಿಸಲಿದೆ. ಈ ನಿಟ್ಟಿನಲ್ಲಿ ಅನುದಾನದ ಅಗತ್ಯ ಇದ್ದು, ದಾನಿಗಳು ಸಹಕರಿಸುವಂತೆ ಸಂಘದ ಕೆ.ಕೆ.ಶಂಕರ ನಾರಾಯಣ ಕೋರಿದ್ದಾರೆ. ಆಸಕ್ತರು ಸಂಘದ ಖಾತೆ ಸಂಖ್ಯೆ AAGAK2464F, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ, ಖಾತೆ ಸಂಖ್ಯೆ : 520101254608758, ಐಎಫ್‍ಎಸ್‍ಸಿ : UBIN0900087 ಹಣ ಪಾವತಿಸಬಹುದಾಗಿದೆ.









