
ಗೋಣಿಕೊಪ್ಪ ನ.20 NEWS DESK : ಕೊಡಗಿನ ಕಲಾವಿದ ರತೀಶ್ ಹುದಿಕೇರಿ ನಟಿಸಿ, ನಿರ್ಮಿಸಿದ ಗಿಡುಗ ಸಿನಿಮಾ ನ.21 ರಂದು ಗೋಣಿಕೊಪ್ಪದ ಕೂರ್ಗ್ ಸಿನಿಫ್ಲೆಕ್ಸ್‍ನಲ್ಲಿ ಬಿಡುಗಡೆಯಾಗಲಿದೆ ಎಂದು ನಿರ್ದೇಶಕ ಕೆಂಪೆಗೌಡ ಮಾಗಡಿ ಮಾಹಿತಿ ನೀಡಿದ್ದಾರೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಬೆಳಿಗ್ಗೆ 10 ಗಂಟೆಗೆ ಮೊದಲ ಪ್ರದರ್ಶನ ಕಾಣಲಿದ್ದು, ಗಿಡುಗ ಸಿನಿಮಾವೊಂದು ಕೊಡಗು, ಬೆಂಗಳೂರು, ಮಾಗಡಿ ಪ್ರದೇಶದಲ್ಲಿ ಶೂಟಿಂಗ್ ಮುಗಿಸಿ, ಬಿಡುಗಡೆಗೆ ಸಿದ್ಧವಾಗಿದೆ. ಕೆಂಪೆಗೌಡ ಮಾಗಡಿ ಚಿತ್ರಕಥೆ, ಸಂಭಾಷಣೆ, ನಿರ್ದೇಶನ ಜತೆಗೆ ಬಂಡವಾಳ ಹೂಡಿದ್ದಾರೆ. ಶಂಕರ ನಾರಾಯಣ ನಂಬುದಿರಿ ಮತ್ತು ವಿ.ಎ.ರತೀಶ್ ಹುದಿಕೇರಿ ನಿರ್ಮಾಣದಲ್ಲಿ ಕೈ ಜೋಡಿಸಿದ್ದಾರೆ. ದ ಹಂಟರ್ ಎಂಬ ಅಡಿಬರಹವಿದೆ. ಅಣ್ಣತಂಗಿ ಬಾಂಧವ್ಯದ ಕಥೆಯಳ್ಳ ಚಿತ್ರ ಇದಾಗಿದ್ದು, ಸಸ್ಪೆನ್ಸ್ ಮರ್ಡರ್ ಮಿಸ್ಟರಿ ಅಂಶಗಳನ್ನು ಒಳಗೊಂಡಿದೆ. ರತೀಶ್ ಕೂರ್ಗ್ ಈ ಚಿತ್ರದ ನಾಯಕ ತಂಗಿಯಾಗಿ ಭವಾನಿ ಉಳಿದಂತೆ ಭಾನು ಮೋಹನ್, ಚಾಮರಾಜು, ರೇವಣ್ಣ ಮಾಗಡಿ, ಚೆನ್ನಬಸವ, ಕಿಶೋರ್, ಸಂಜೀವ್, ಮಾಸ್ಟರ್ ಹೃದಯನ್ ಗೌಡ, ಮಾಸ್ಟಪುನೀತ್ ಮುಂತಾದವರು ನಟಿಸಿದ್ದಾರೆ. ಹಾಡುಗಳಿಗೆ ವಿನ್ಸೆಂಟ್ ಮುಕೇಶ್ ಸಂಗೀತ ಸಂಯೋಜಿಸಿದ್ದಾರೆ.









