ಮಡಿಕೇರಿ ನ.22 NEWS DESK : ಎಸ್.ಎಂ.ಎಸ್ ಪದವಿ ಪೂರ್ವ ಕಾಲೇಜಿನ ವತಿಯಿಂದ ನಡೆದ ಕಲೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಮತ್ತು ಕ್ರೀಡಾಸ್ಪರ್ಧೆ ನಡೆಯಿತು. ಇದರಲ್ಲಿ ವಿರಾಜಪೇಟೆಯ ಕಾವೇರಿ ಶಾಲೆಯ ವಿದ್ಯಾರ್ಥಿಗಳು ವಿವಿಧ ಸ್ಪರ್ಧೆಗಳಲ್ಲಿ ಗೆಲುವನ್ನು ಸಾಧಿಸುವ ಮೂಲಕ ಪ್ರಥಮ ರನ್ನರ್ಸ್ ಟ್ರೋಫಿ ಯನ್ನು ತಮ್ಮದಾಗಿಸಿಕೊಂಡಿದ್ದಾರೆ. ರಸ ಪ್ರಶ್ನೆ ವಿಭಾಗದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಸೃಷ್ಟಿ ಬಿ.ಎಸ್, ಶ್ರೀವತ್ಸ ಯು.ಎಸ್, 9ನೇ ತರಗತಿ ವಿದ್ಯಾರ್ಥಿ ಉನ್ನತಿ ಎಂ ಭಾಗವಹಿಸಿ ದ್ವಿತೀಯ ಸ್ಥಾನ ಪಡೆದುಕೊಂಡರು. ಕಲಾಕೃತಿ ವಿಭಾಗದಲ್ಲಿ 9ನೇ ತರಗತಿ ವಿದ್ಯಾರ್ಥಿ ಹನಿಯ ಎ, 8ನೇ ತರಗತಿ ವಿದ್ಯಾರ್ಥಿ ಗಳಾದ ಆರ್ನವ್ ವಿ, ಅಕ್ಷರ ಸಂತೋಷ್ ಭಾಗವಹಿಸಿ ದ್ವಿತೀಯ ಸ್ಥಾನವನ್ನು ತಮ್ಮದಾಗಿಸಿಕೊಂಡರು. ನೃತ್ಯ ವಿಭಾಗದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಹನಾ ಫಲಕ್, ಸಾಯೋಜ್ಯ ಪಿ,ಸುಹಾನಿ ರಾಜ್ ಪುರೋಹಿತ್, ಹೈಜಾ ಬಿ. ಐ, ಬೊಳ್ಳೆಪಂಡ ದೀಪ್ತಿ ತಂಗಮ್ಮ, 9ನೇ ತರಗತಿ ವಿದ್ಯಾರ್ಥಿಗಳಾದ ಕೂಡoಡ ನಯಾನಿಕ ಎಸ್, ಸಾಹಿತ್ಯ ಪಿ. ಜಿ, ಜೀವನ್ಯ ಎಂ. ಡಿ, ಅಯ್ಯಮಂಡ ಲಿಷಿಕಾ ಬಿ,ಅನ್ವಿತ ಪಿ. ಎ ಭಾಗವಹಿಸಿ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿದ್ದಾರೆ. ಬಾಲಕಿಯರ ಹಗ್ಗ ಜಗ್ಗಾಟದಲ್ಲಿ 10ನೇ ತರಗತಿ ವಿದ್ಯಾರ್ಥಿಗಳಾದ ಮುಳ್ಳೆoಗಡ ಪೂರ್ವಿಕ, ನಿಲ್ಮಾಡ ತನ್ಯ ರೈ, ಸಣ್ಣುವಂಡ ರಶ್ಮಿ ಪೆÇನ್ನಮ್ಮ ಎಸ್, ಕುಟ್ಟನ ಯಶ್ಮಿತ ಎಂ, ಪುಚ್ಚಿಮಂಡ ಯು ತನಿಶ, 9ನೇ ತರಗತಿ ವಿದ್ಯಾರ್ಥಿಗಳಾದ ನಲ್ಲೆಚಂಡ ಪೆÇನ್ನಮ್ಮ ಎನ್, ಗುಡ್ಡoಡ ಮುತ್ತ ಮ್ಮ ಜಿ. ಟಿ, ಚೇಂದಿರ ದೀಪ್ಷಿಕ ಎಂ, 8ನೇ ತರಗತಿಯ ವಿದ್ಯಾರ್ಥಿ ಗಳಾದ ಬೇರೇರ ಶಿಯಾನ , ಕುಪ್ಪಚಿರ ಪ್ರಿಶ ಬಿ ಸ್ಪರ್ಧಿಸಿ ಭಾಗವಹಿಸುವಿಕೆ ಪತ್ರವನ್ನು ಪಡೆದಿರುತ್ತಾರೆ. ಮೂಕಾಭಿನಯ ತಂಡದಲ್ಲಿ 9ನೇ ತರಗತಿಯ ವಿದ್ಯಾರ್ಥಿ ಗಳಾದ ನಿಧಾ ಕೆ. ಎಚ್, ಸಮೀಕ್ಷಾ ಎಚ್. ಎಸ್, ಸನಾ ಕೆ.ಎಸ್ ಜೋಯಾ ನಾಜ್, ಮೂಕಂಡ ಕಾವೇರಮ್ಮ ಜಿ, ಪಳೆಯಂಡ ಕಾಜಲ್ ಸಿ, ದಿಕ್ಷಾ ವಿ ಸ್ಪರ್ಧಿಸಿ ಭಾಗವಹಿಸುವಿಕೆ ಪತ್ರವನ್ನು ಪಡೆದಿದ್ದಾರೆ. ಬಾಲಕರ ಹಗ್ಗ ಜಗ್ಗಾಟದಲ್ಲಿ 10ನೇ ತರಗತಿಯ ವಿದ್ಯಾರ್ಥಿಗಳಾದ ಸಹಲ್ ಎಂ.ಎಸ್, ಬಡುವಮಂಡ ವೃಶಾಂಕ್ ದೇವಯ್ಯ, ಶಿಫಾನ್ ಕೆ.ಸಿ, ಆದಿತ್ಯ.ಕೆ, 9ನೇ ತರಗತಿಯ ವಿದ್ಯಾರ್ಥಿಗಳಾದ ಚಬಂಡ ವಿಭಿನ್ ಸುಬ್ಬಯ್ಯ, ಮುo ಡoಡ ನಿಯಾನ್ ಸೋಮಣ್ಣ,ನೆಲಮಕ್ಕಡ ಅಯ್ಯಪ್ಪ, ತೇಜಸ್ ವಿ. ಎಸ್, ಹುಮೈ ದ್ ಜುಕಾಕೋ, 8ನೇ ತರಗತಿ ವಿದ್ಯಾರ್ಥಿಯಾದ ತಟ್ಟಂಡ ಕನಿಶ್ ಟಿ.ಕೆ ಸ್ಪರ್ಧಿಸಿ ಭಾಗವಿಸುವಿಕೆ ಪತ್ರವನ್ನು ಪತ್ರವನ್ನು ಪಡೆದುಕೊಂಡರು. ಶಾಲೆಯ ನೃತ್ಯ ತರಬೇತುಗಾರರಾದ ವಿಷ್ಣು ಅವರು ನೃತ್ಯ ತರಬೇತಿ ನೀಡಿದರು. ಶಾಲಾ ಮುಖ್ಯ ಶಿಕ್ಷಕಿಯಾದ ಪಾರ್ವತಿ ಪಿ.ಯು, ಸಹ ಶಿಕ್ಷಕಿಯರುಗಳಾದ ಲೀನಾ, ಸುರಯ್ಯ, ಮೋನಿಕಾ ಉಪಸ್ಥಿತರಿದ್ದರು. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯ ಶಿಕ್ಷಕಿ, ಸಂಯೋಜಕಿ, ಬೋಧಕ ಬೋಧಕೇತರ ಸಿಬ್ಬಂದಿ ವರ್ಗದವರು, ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದರು.











