ಸುಂಟಿಕೊಪ್ಪ ನ.22 NEWS DESK : ಸಮಾಜ ಸೇವಕ ಬಾಪ್ಪುಟ್ಟಿ ಅವರು ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮಕ್ಕಳಿಗೆ ಟ್ರ್ಯಾಕ್‍ಶೂಟ್ ಅನ್ನು ವಿತರಿಸಿದರು. ಗದ್ದೆಹಳ್ಳ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವ್ಯಾಸಂಗ ಮಾಡುತ್ತಿರುವ 40 ವಿದ್ಯಾರ್ಥಿಗಳಿಗೆ ಟ್ರ್ಯಾಕ್ ಶೂಟ್ ಅನ್ನು ವಿತರಿಸಿ ಮಾತನಾಡಿದ ಅವರು ಸರಕಾರಿ ಶಾಲೆಯಲ್ಲಿ ಬಡ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, ಶಾಲೆಯ ಶಿಕ್ಷಕರು ಹಾಗೂ ಆಡಳಿತ ಮಂಡಳಿಯವರು ಬೇಡಿಕೆಯನ್ನು ಸಲ್ಲಿಸಿದ ಹಿನ್ನಲೆಯಲ್ಲಿ ವಿದ್ಯಾರ್ಥಿಗಳಿಗೆ ಟ್ರ್ಯಾಕ್‍ಶೂಟ್ ವಿತರಿಸಲಾಗಿದೆ ಎಂದರು. ವಿದ್ಯಾರ್ಥಿಗಳು ಉತ್ತಮ ಭವಿಷ್ಯದ ಪ್ರಜೆಗಳಾಗಿ ಮೂಡಿಬರಲೆಂದು ಅವರು ಹಾರೈಸಿದರು. ಸುಂಟಿಕೊಪ್ಪ ಹಿರಿಯ ಪತ್ರಕರ್ತರಾದ ಬಿ.ಡಿ.ರಾಜುರೈ ಮಾತನಾಡಿ ಸಮಾಜ ಸೇವೆಯಲ್ಲಿ ನಿರಂತವಾಗಿ ತಮ್ಮನ್ನು ತೊಡಗಿಸಿಕೊಂಡಿರುವ ಸಮಾಜ ಸೇವಕ ಬಾಪ್ಪು ಅವರು ಈ ಹಿಂದೆಯೇ ಕೊವಿಡ್, ಪ್ರಾಕೃತಿಕ ವಿಕೋಪ ಸಂದರ್ಭ ನಿರಾಶ್ರಿತರು ಮತ್ತು ನಿರ್ಗತಿಕರು ಮತ್ತು ಅನಾಥರಿಗೆ ತಮ್ಮ ಕೈಯಲಾದ ನೆರವು ನೀಡಿದ್ದು ಅವರ ಸೇವೆ ಇತರರಿಗೆ ಮಾದರಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಈ ಸಂದರ್ಭ ಶಾಲಾ ಶಿಕ್ಷಕಿ ಮೀನಾಕುಮಾರಿ, ಮಹಮ್ಮದ್ ನಿಸಾರ್, ಕೆ.ಇ.ಬಶೀರ್, ಕೆ.ಎಸ್.ಅನಿಲ್‍ಕುಮಾರ್ ಮತ್ತಿತರರು ಇದ್ದರು.











