ಮಡಿಕೇರಿ ನ.22 NEWS DESK : ವಿರಾಜಪೇಟೆ-ಕೊಟ್ಟೋಳಿ-ಕೆದಮುಳ್ಳೂರು-ಪಾಲಂಗಾಲ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಚಾಲನೆ ನೀಡಿದರು. ಕೊಟ್ಟೋಳಿಯ ಅಂಗನವಾಡಿ ಕೇಂದ್ರ ಬಳಿ ಭೂಮಿ ಪೂಜೆ ನೆರವೇರಿಸಿ ಮಾತನಾಡಿದ ಶಾಸಕರು, ಈ ಸಾಲಿನಲ್ಲಿ ವಿಪರೀತ ಹಾಗೂ ಅಕಾಲಿಕ ಮಳೆ ಆಗುತ್ತಿರುವುದರಿಂದ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಕೊಂಚ ತೊಡಕು ಉಂಟಾಗಿದೆ. ಮಳೆ ಸಂಪೂರ್ಣ ದೂರ ಆದಂತೆ ಪ್ರತಿಯೊಂದು ರಸ್ತೆಯ ಅಭಿವೃದ್ಧಿ ಕಾಮಗಾರಿಗಳು ವೇಗ ಪಡೆಯಲಿದೆ. ಸಾರ್ವಜನಿಕರಿಗೆ ಅನಾನುಕೂಲ ಆಗದಂತೆ ಎಲ್ಲಾ ರೀತಿಯ ಕ್ರಮ ಕೈಗೊಳ್ಳಾಗುವುದು ಎಂದು ತಿಳಿಸಿದರು. ಈ ಸಂದರ್ಭ ವಿರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು ಪಟ್ಟಡ ರಂಜಿ ಪೂಣಚ್ಚ, ಪುರಸಭೆ ಅಧ್ಯಕ್ಷರು ದೇಚಮ್ಮ ಕಾಳಪ್ಪ, ವಲಯ ಅಧ್ಯಕ್ಷರು ನಡಿಕೇರಿಯಂಡ ಮಹೇಶ್, ಕೆ ಡಿ ಪಿ ಸದಸ್ಯರು ಮಳೆಟೀರ ಪ್ರಶಾಂತ್ ಉತ್ತಪ್ಪ, ಪಂಚಾಯಿತಿ ಅಧ್ಯಕ್ಷರು ಜೇಫ್ರಿ ಚಂಗಪ್ಪ, ಪಂಚಾಯಿತಿ ಸದಸ್ಯರು ಇಸ್ಮಾಯಿಲ್, ಪವಿತ್ರ, ವನಿತಾ, ತಯಮ್ಮ, ಬೂತ್ ಅಧ್ಯಕ್ಷರು ವಿಜಯ ಕುಮಾರ್, ಗ್ಯಾರಂಟಿ ಅನುಷ್ಠಾನ ಸಮಿತಿಯ ಸದಸ್ಯರು ಎಮ್ ವೈ ಆಲಿ, ಪಲೇಕಂಡ ಅಯ್ಯಣ್ಣ, ಬೇಲ್ಲು ಬೋಪಯ್ಯ, ಹರೀಶ್, ಕುಂಡಚ್ಚಿರ ಮಂಜು ದೇವಯ್ಯ, ಹಾಗೂ. ಪಕ್ಷದ ಮುಖಂಡರುಗಳು, ಕಾರ್ಯಕರ್ತರು, ಸ್ಥಳೀಯರು ಉಪಸ್ಥಿತರಿದ್ದರು. ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶಾಸಕರು 1 ಕೋಟಿ 30 ಲಕ್ಷ ರೂ. ಒದಗಿಸಿದ್ದರು.











