ಮಡಿಕೇರಿ NEWS DESK ನ.23 : ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ವತಿಯಿಂದ 35 ನೇ ಕೊಡವ ನ್ಯಾಷನಲ್ ಡೇ ಮತ್ತು ಭಾರತೀಯ ಸಂವಿಧಾನ ದಿನ ನ.26 ರಂದು ನಡೆಯುತ್ತಿದ್ದು, ಇದರ ಪ್ರಯುಕ್ತ ದೇವಟ್ ಪರಂಬ್ ಕೊಡವ ನರಮೇಧ ಸ್ಮಾರಕ ಸ್ಥಳಕ್ಕೆ ಭೇಟಿ ನೀಡಿದ ಸಿಎನ್‌ಸಿ ಪ್ರಮುಖರು ಹಿರಿಯರಿಗೆ ಪ್ರಾರ್ಥನೆ ಸಲ್ಲಿಸಿದರು. 1785 ರಲ್ಲಿ ಮೈಸೂರು ಸುಲ್ತಾನರು ಹಾಗೂ ಫ್ರೆಂಚ್ ಈಸ್ಟ್ ಇಂಡಿಯಾ ಕಂಪನಿ ಪಡೆಗಳಿಂದ ಹತ್ಯಾಕಾಂಡಕ್ಕೊಳಗಾದ ಪೂರ್ವಜರಿಗೆ ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಗೌರವ ಸಲ್ಲಿಸಿ ಕೊಡವಲ್ಯಾಂಡ್ ಭೂ-ರಾಜಕೀಯ ಸ್ವಾಯತ್ತತೆಗಾಗಿ ಆಶೀರ್ವಾದವನ್ನು ಕೋರಿದರು. ಕಲಿಯಂಡ ಪ್ರಕಾಶ್, ಪಟ್ಟಮಾಡ ಕುಶ ಹಾಗೂ ಮಂದಪಂಡ ಮನೋಜ್ ಭಾಗವಹಿಸಿದ್ದರು.













