ಮಡಿಕೇರಿ ನ.24 NEWS DESK : ಯಾದಗಿರಿ ಜಿಲ್ಲೆಯ ಶಹಪುರ ಪಿ.ಯು ಕಾಲೇಜಿನಲ್ಲಿ ನಡೆದ ರಾಜ್ಯಮಟ್ಟದ ಚೆಸ್ ಪಂದ್ಯಾವಳಿಯಲ್ಲಿ ವಿರಾಜಪೇಟೆಯ ಕಾವೇರಿಶಾಲಾ ವಿದ್ಯಾರ್ಥಿಗಳು ಕೊಡಗು ಜಿಲ್ಲೆಯನ್ನು ಪ್ರತಿನಿಧಿಸಿದ್ದಾರೆ. ಶಾಲೆಯ 10ನೇ ತರಗತಿಯ ಸೃಷ್ಟಿ ಬಿ.ಎಸ್, ಶ್ರೀ ವತ್ಸಯು .ಎಸ್ ಹಾಗೂ ತರುಣ್‍ಎನ್.ಎಂ, ಮಂಡ್ಯ ಜಿಲ್ಲೆಯ ಆದಿಚುಂಚನಗಿರಿ ಮಹಾಸಂಸ್ಥಾನಮಠದಲ್ಲಿ ನಡೆದ ಚೆಸ್ ಪಂದ್ಯಾವಳಿಯಲ್ಲಿ 7ನೇ ತರಗತಿ ವಿದ್ಯಾರ್ಥಿಗಳಾದ ಮಾಲೇಟಿರ ಚಾಲ್ಸಿ ಹಾಗೂ ಆಜಾನ್‍ಎಂ.ಎ ಜಿಲ್ಲೆಯನ್ನು ಪ್ರತಿನಿಧಿಸಿ ಶಾಲೆಗೆ ಮತ್ತು ಜಿಲ್ಲೆಗೆ ಕೀರ್ತಿ ತಂದಿದ್ದಾರೆ. ಇವರಿಗೆ ಚೆಸ್ ಮಾಸ್ಟರ್ ಮಾನ್ಮಣಿ ಮಾರ್ಗದರ್ಶನ ನೀಡಿದ್ದಾರೆ. ವಿದ್ಯಾರ್ಥಿಗಳ ಸಾಧನೆಗೆ ಶಾಲಾ ಆಡಳಿತ ಮಂಡಳಿಯವರು, ಮುಖ್ಯಶಿಕ್ಷಕಿ, ಸಂಯೋಜಕಿ, ಬೋಧಕ-ಬೋಧಕೇತರ ವೃಂದದವರು ಹಾಗೂ ಪೋಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.











