
ವಿರಾಜಪೇಟೆ ನ.26 NEWS DESK : ಕೊಡಗಿನ ರಸ್ತೆ ದುರಸ್ತಿಗೊಳಿಸುವಂತೆ ಆಗ್ರಹಿಸಿ ವಿರಾಜಪೇಟೆ ಮಂಡಲ ಬಿಜೆಪಿ ವತಿಯಿಂದ ವಿರಾಜಪೇಟೆಯ ಲೋಕೋಪಯೋಗಿ ಇಲಾಖೆಯ ಕಚೇರಿಯ ಮುಂದೆ ಪ್ರತಿಭಟನೆ ನಡೆಯಿತು. ವಿರಾಜಪೇಟೆ ಮಂಡಲ ಬಿಜೆಪಿ ಅಧ್ಯಕ್ಷ ಸುವಿನ್ ಗಣಪತಿ ನೇತೃತ್ವದಲ್ಲಿ ಇಲಾಖೆಯ ಮುಂಭಾಗದಲ್ಲಿ ಸಮಾವೇಶಗೊಂಡ ಬಿಜೆಪಿ ಕಾರ್ಯಕರ್ತರು, ಸರಕಾರದ ವಿರುದ್ಧ ಘೋಷಣೆ ಕೂಗಿದರಲ್ಲದೆ, ಒಂದು ಗಂಟೆಗೂ ಅಧಿಕ ಕಾಲ ಪ್ರತಿಭಟನೆ ನಡೆಸಿ, ಕಾಂಗ್ರೇಸ್ ಸರಕಾರದ ವೈಪಲ್ಯತೆ ಬಗ್ಗೆ ರಸ್ತೆ ಅಭಿವೃದ್ಧಿ ವಿಚಾರದಲ್ಲಿ, ಶಾಸಕರ ನಿರ್ಲಕ್ಷ್ಯದ ಬಗ್ಗೆ ಬಿಜೆಪಿ ಪಕ್ಷದ ಪ್ರಮುಖರು ತೀವ್ರ ವಾಗ್ದಾಳಿ ನಡೆಸಿದರು. ಈ ಸಂದರ್ಭ ಮಾತನಾಡಿದ ಮಾಜಿ ಶಾಸಕ ಕೆ.ಜಿ.ಬೋಪಯ್ಯ, ಬಿಜೆಪಿ ಪಕ್ಷ ಅಧಿಕಾರದಲ್ಲಿದ್ದ ಸಂದರ್ಭದಲ್ಲಿ ಇಂತಹ ಪರಿಸ್ಥಿತಿ ನಿರ್ಮಾಣವಾಗಿರಲಿಲ್ಲ. ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಎರಡೂವರೆ ವರ್ಷ ಪೂರೈಸಿದ್ದರೂ ರಸ್ತೆ ಅಭಿವೃದ್ಧಿ ಕಾರ್ಯ ಇನ್ನೂ ಆಗದಿರುವುದು ತಮ್ಮ ಆಡಳಿತ ವ್ಯವಸ್ಥೆಗೆ ಹಿಡಿದ ಕೈಗನ್ನಡಿಯಾಗಿದೆ. ಕೊಡಗು ಜಿಲ್ಲೆ ಸೇರಿದಂತೆ, ವಿರಾಜಪೇಟೆ, ಪೆÇನ್ನಂಪೇಟೆ ತಾಲೂಕಿನ ಮುಖ್ಯ ರಸ್ತೆಗಳು ತೀವ್ರ ಹದಗೆಟ್ಟಿದ್ದು ರಸ್ತೆ ಸಂಚಾರಕ್ಕೆ ತೊಂದರೆ ಉಂಟಾಗುತ್ತಿದೆ. ಮಳೆ ಬಿಡುವು ನೀಡಿದ ನಂತರ ಎಲ್ಲೆಡೆ ರಸ್ತೆ ದುರಸ್ತಿ ಕಾರ್ಯ ಕೈಗೊಳ್ಳುವುದಾಗಿ ಕ್ಷೇತ್ರದ ಶಾಸಕರು ಹಾಗೂ ಕಾಂಗ್ರೆಸ್ ಪಕ್ಷದ ವಕ್ತಾರರು ಹೇಳಿಕೆ ನೀಡಿದ್ದರು. ರಸ್ತೆ ಅಭಿವೃದ್ಧಿ ಮಾಡದೆ ಕುಚ್ಚಿಗೆ ಕಿತ್ತಾಟ ನಡೆಸುತ್ತಿದ್ದಾರೆ ಎಂದು ವ್ಯಂಗ್ಯವಾಡಿದರು. ಅಭಿವೃದ್ಧಿ ಎಂದು ಯಾವಾಗಲೂ ಭಾಷಣ ಹಾಗೂ ಪತ್ರಿಕೆ ಮೂಲಕ ಪ್ರಚಾರ ತೆಗೆದುಕೊಳ್ಳುತ್ತಾರೆಯೇ ವಿನ ಅಭಿವೃದ್ಧಿ ಮಾತ್ರ ಶೂನ್ಯ ಎಂದರು. ಬಿಜೆಪಿ ಜಿಲ್ಲಾ ಅಧ್ಯಕ್ಷ ರವಿ ಕಾಳಪ್ಪ ಮಾತನಾಡಿ, ಇದೀಗ ಮಳೆ ಬಿಡುವು ನೀಡಿ ಹಲವು ದಿನಗಳು ಕಳೆದಿದೆ. ಮುಖ್ಯ ರಸ್ತೆಯ ದುರಸ್ತಿ ಕಾರ್ಯ ಇನ್ನೂ ಕೈಗೆತ್ತಿಕೊಳ್ಳಲಿಲ್ಲ. ಜನರ ಆಶೋತ್ತರಗಳನ್ನು ಈಡೇರಿಸುವಲ್ಲಿ ಕಾಂಗ್ರೆಸ್ ಸರ್ಕಾರ ವಿಫಲವಾಗಿವೆ. ಕಳೆದ ಎರಡೂವರೆ ವರ್ಷದಿಂದ ರಸ್ತೆ ನಿರ್ವಹಣೆ ಇಲ್ಲದೆ ಇಂದು ರಸ್ತೆ ಹದಗೆಟ್ಟಲು ಕಾರಣವಾಗಿದೆ. ಕೇವಲ ಪ್ರಚಾರ, ಘೋಷಣೆಗಷ್ಟೆ ಕಾಂಗ್ರೆಸ್ ಸಿಮಿತವಾಗಿದೆ. ಅಭಿವೃದ್ಧಿ ಮಾತ್ರ ಇಲ್ಲ. ಮಳೆ ನಿಂತ ಕೂಡಲೆ ರಸ್ತೆ ಕಾಮಗಾರಿ ಪ್ರಾರಂಭ ಮಾಡುತ್ತೇವೆ ಎಂದು ಹೇಳಿದ ಸರಕಾರ ಮೌನ ವಹಿಸಿದೆ. ನಮ್ಮ ಅವಧಿಯಲ್ಲಿ ಮಾಡಿದ ರಸ್ತೆಗಳು ಕಾಮಗಾರಿ ಅಚ್ಚುಕಾಟ್ಟಗಿ ಮಾಡಲಾಗಿತ್ತು. ಎರಡೂವರೆ ವರ್ಷ ಕಳೆದರೂ ಯಾವ ರಸ್ತೆ ಕಾಮಗಾರಿ ಪ್ರಗತಿ ಕಾಣತ್ತಿಲ್ಲ. ಮುಖ್ಯ ರಸ್ತೆಯಲ್ಲಿ ವಾಹನಗಳ ಸಂಚಾರ ಮಾಡಲು ಸಾಹಸ ಪಡಬೇಕು. ಸಾರ್ವಜನಿಕರಿಗೆ ಮೂಲಭೂತ ಸೌಕರ್ಯ ಮುಖ್ಯವಾಗಿದೆ ಎಂದರು. ಮಾಜಿ ಜಿಲ್ಲಾದ್ಯಕ್ಷ ರಾಬೀನ್ ದೇವಯ್ಯ ಮಾತನಾಡಿ ನಮ್ಮ ಬಿಜೆಪಿ ಪಕ್ಷದ ಶಾಸಕರ ಅವಧಿಯಲ್ಲಿ ಮಾಡಿರುವ ಅಭಿವೃದ್ಧಿ ಕಾರ್ಯಗಳ ಬಗ್ಗೆ ನಾವುಗಳು ಲೆಕ್ಕಾಚಾರ ನೀಡಲು ತಯಾರಿದ್ದೇವೆ, ನಮ್ಮ ಶಾಸಕರ ಅವಧಿಯಲ್ಲಿ ಮಂಜೂರಾದ ಅನುದಾನವನ್ನು ತಮ್ಮ ಅವಧಿಯಲ್ಲಿ ತಂದ ಅನುದಾನ ಎಂದು ಜನರ ಮುಂದೆ ಸುಳ್ಳು ಮಾಹಿತಿ ನೀಡುವುದು ಉಚಿತವಲ್ಲ, ನಾವು ಅನುದಾನದ ಲೆಕ್ಕಾಚಾರ ಮುಂದಿಡುತ್ತೇವೆ. ತಾವು ಕೂಡ ತಮ್ಮ ಅನುದಾನ ಬಗ್ಗೆ ಲೆಕ್ಕವನ್ನು ಜನರ ಮುಂದೆ ಇಡುವಂತೆ, ಶ್ವೇತ ಪತ್ರ ಹೊರಡಿಸುವಂತೆ ಸವಾಲು ಹಾಕಿದರು. ವಿರಾಜಪೇಟೆ ಮಂಡಲ ಅಧ್ಯಕ್ಷ ಮಾಚಿಮಂಡ ಸುವಿನ್ ಗಣಪತಿ ಮಾತನಾಡಿ, ಎರಡೂ ತಾಲೂಕುಗಳ ರಸ್ತೆಗಳು ಸಂಪೂರ್ಣ ಗುಂಡಿ ಬಿದ್ದಿದ್ದು ರಸ್ತೆ ಸರಿಪಡಿಸದೆ ಎರಡು ಎರ್ಷಗಳು ಕಳೆದಿದೆ. ಕೇವಲ ಸಾಮಾಜಿಕ ಜಾಲತಾಣದಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳಿಗೆ, ರಸ್ತೆ ಅಭಿವೃದ್ಧಿಗೆ ಕೋಟಿ, ಕೋಟಿ ಅನುದಾನ ಬಂದಿದೆ ಎಂದು ಪ್ರಚಾರ ನೀಡಿದರೆ ಸಾಲದು, ನಿಖರತೆಯಾಗಿ ಜನರ ಮುಂದೆ ತಮ್ಮ ಅನುದಾನ ಬಗ್ಗೆ ಮಾಹಿತಿ ನೀಡಿ ಎಂದು ಆಗ್ರಹಿಸಿದರು. ತಿತಿಮತಿಯಿಂದ ಮಡಿಕೇರಿಯವರೆಗೆ ಹಾಗೂ ಸಿದ್ಧಾಪುರ ರಸ್ತೆಗಳಲ್ಲಿ ಸಂಚಾರ ಮಾಡಲು ಸಾಧ್ಯವಾಗತ್ತಿಲ್ಲ. ಗುಂಡಿಯಿಂದಾಗಿ ವಾಹನ ಅಪಘಾತಗಳು ಹೆಚ್ಚು ಸಂಭವಿಸುತ್ತಿದ್ದು ರಸ್ತೆ ಕಾಮಗಾರಿ ಮಾಡದಿದ್ದಲ್ಲಿ ಗ್ರಾಮ ಗ್ರಾಮಗಳಲ್ಲಿ ಸಹ ತೀವ್ರತರದ ಪ್ರತಿಭಟನೆ ನಡೆಸುವುದಾಗಿ ತಿಳಿಸಿದರು. ವಿರಾಜಪೇಟೆ ಮಂಡಲ ಬಿಜೆಪಿ ವಕ್ತಾರ ಚೆಪ್ಪುಡೀರ ರಾಕೇಶ್ ದೇವಯ್ಯ ಸೇರಿದಂತೆ ಹಲವರು ಮಾತನಾಡಿದರು. ಲೋಕೋಪಯೋಗಿ ಇಲಾಖೆಯ ಮುಖ್ಯ ಅಂಭಿಯಂತರ ಸತೀಶ್ ಮನವಿ ಸ್ವೀಕರಿಸಿ ಮಾತನಾಡಿ ಡಿಸೆಂಬರ್ ಅಂತ್ಯಕ್ಕೆ, ರಸ್ತೆ ಕಾಮಗಾರಿ ಪೂರ್ಣಗೊಳ್ಳುತ್ತದೆ. ಮಳೆಯಿಂದಾಗಿ ಸಮಸ್ಯೆಯಾಗಿದೆ ಎಂದರು. ಇದರಿಂದ ಆಕ್ರೋಶಿತಗೊಂಡ ಬಿಜೆಪಿಗರು ಸರಿಯಾದ ಮಾಹಿತಿ ನೀಡಿ, ಅಧಿಕಾರಿಗಳು ಸಮರ್ಪಕವಾಗಿ ಕೆಲಸ ನಿರ್ವಹಿಸಿ, ಕೈಗೊಂಬೆಗಳಂತೆ ವರ್ತಿಸಬೇಡಿ, ಜನರ ಆಶೋತ್ತರಗಳಿಗೆ ಸ್ಪಂದಿಸುವ ಕೆಲಸಮಾಡಿ ಎಂದರಲ್ಲದೆ ರಸ್ತೆ ಕಾಮಗಾರಿ ನಡೆಯದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ತೀವ್ರವಾಗಿ ಪ್ರತಿಭಟನೆ ನಡೆಸುವ ಎಚ್ಚರಿಕೆ ನೀಡಿದರು. ಅಲ್ಲದೆ ಕಾಮಗಾರಿಗಳಿಗೆ ಬಿಡುಗಡೆಯಾಗಿರುವ ಅನುದಾನಗಳ ಮಾಹಿತಿ ಕೇಳಿದರು. ಈ ಸಂಧರ್ಭ ಜಿಲ್ಲಾ ಬಿಜೆಪಿ ಉಪಾಧ್ಯಕ್ಷರಾದ ಗುಮ್ಮಟ್ಟೀರ ಕಿಲನ್ ಗಣಪತಿ, ಬಿಜೆಪಿ ಜಿಲ್ಲಾ ಪ್ರದಾನ ಕಾರ್ಯದರ್ಶಿ ನೆಲ್ಲಿರ ಚಲನ್ ಕುಮಾರ್, ತಾಲೂಕು ಪ್ರಧಾನ ಕಾರ್ಯದರ್ಶಿ ಕುಟ್ಟಂಡ ಅಜಿತ್ ಕರುಂಬಯ್ಯ, ಪಕ್ಷದ ಪ್ರಮುಖರಾದ ರೀನಾ ಪ್ರಕಾಶ್, ಕಾಂತಿ ಸತೀಶ್, ಯಮುನಾ ಚಂಗಪ್ಪ, ಮಾಜಿ ಜಿಲ್ಲಾಧ್ಯಕ್ಷ ರಾಬೀನ್ ದೇವಯ್ಯ, ನಗರ ಅಧ್ಯಕ್ಷ ಅನೀಲ್ ಮಂದಣ್ಣ, ಪ್ರಮುಖರಾದ ಕೂತಂಡ ಸಚಿನ್ ಕುಟ್ಟಯ್ಯ, ಶಶಿ ಸುಬ್ರಮಣಿ, ಮಾಚಿಮಂಡ ರವೀಂದ್ರ, ಅನಿತಾ ಪೂವಯ್ಯ, ಜೂನಾ, ಅನಿತಾ ಜಿಲ್ಲಾ ಖಜಾಂಚಿ ಸಂಪತ್, ರೈತಾ ಮೋರ್ಚಾದ ಅಮ್ಮುಣಿಚಂಡ ರಂಜು ಸೇರಿದಂತೆ ನೂರಾರು ಸಂಕ್ಯೆಯಲ್ಲಿ ಪಕ್ಷದ ಕಾರ್ಯಕರ್ತರು ಹಾಜರಿದ್ದರು.









