ಮಡಿಕೇರಿ ನ.27 NEWS DESK : ವಿರಾಜಪೇಟೆ ಕಾವೇರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾವೇರಿ ಕಾರ್ನಿವಲ್ ನ ಲೋಗೋ ಹಾಗೂ ಬ್ಯಾನರ್ ಗಳನ್ನು ಬಿಡುಗಡೆ ಮಾಡಲಾಯಿತು. ಗೋಣಿಕೊಪ್ಪಲು ಕಾವೇರಿ ಎಜುಕೇಶನ್ ಸೊಸೈಟಿ ನಿರ್ದೇಶಕರಾದ ಪಳಗಂಡ ವಾಣಿ ಚಂಗಪ್ಪ ಲೋಗೋ ಹಾಗೂ ಬ್ಯಾನರ್ ಗಳನ್ನು ಬಿಡುಗಡೆಗೊಳಿಸಿ ವಿದ್ಯಾರ್ಥಿಗಳಿಗೆ ಶುಭಕೋರಿದರು. ಕಾರ್ಯಕ್ರಮದ ಪೂರ್ವ ತಯಾರಿ ಹಿಂದಿನ ಜವಾಬ್ದಾರಿಗಳು ಪ್ರಾಂಶುಪಾಲರ, ಎಲ್ಲಾ ಉಪನ್ಯಾಸಕರ ಹಾಗೂ ವಿದ್ಯಾರ್ಥಿಗಳ ಪರಿಶ್ರಮ ಅಪಾರವೆಂದರು. ಡಿ.2 ರಂದು ನಡೆಯುವ ಕಾವೇರಿ ಕಾರ್ನಿವಲ್ 2025 ಜಿಲ್ಲಾ ಮಟ್ಟದ ಅಂತರ ಶಾಲಾ ಸ್ಪರ್ಧೆಯನ್ನು ಆಯೋಜಿಸಿದ್ದು, ಹೆಚ್ಚಿನ ಸಂಖ್ಯೆಯಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಅನಾವರಣಗೊಳಿಸುವ ಮೂಲಕ ವ್ಯಕ್ತಿತ್ವವನ್ನು ರೂಪಿಸಿಕೊಳ್ಳಿ ಎಂದು ಶುಭ ನುಡಿದರು. ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಎನ್.ಎಂ.ನಾಣಯ್ಯ, ಪದವಿ ಕಾಲೇಜಿನ ಪ್ರಾಂಶುಪಾಲರು ಬೇನೆಡಿಕ್ಟ್ ಸಾಲ್ದಾನ, ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ನಾಗರಾಜು ಕಾರ್ಯಕ್ರಮದ ಮುಂದಿನ ಕಾರ್ಯಯೋಜನೆಗೆ ಶುಭಕೋರಿದರು. ಉಪನ್ಯಾಸಕರು, ಪದವಿ ಉಪನ್ಯಾಸಕರು, ಬೋಧಕೇತರ ವೃಂದ ಹಾಗೂ ಸರ್ವ ವಿದ್ಯಾರ್ಥಿಗಳು ಹಾಜರಿದ್ದರು. ವಿದ್ಯಾರ್ಥಿಗಳ ನೃತ್ಯ ಪ್ರದರ್ಶನ ಮೂಲಕ ರಂಜಿಸಿದರು.











