ಗೋಣಿಕೊಪ್ಪ ನ.28 NEWS DESK : ಬುಡಕಟ್ಟು ಸಮುದಾಯದ ಯುವಕರು ನಾಗರಹೊಳೆ ಅರಣ್ಯ ಪ್ರದೇಶದ ನಾಣಚ್ಚಿ ಗೇಟ್ ಬಳಿ ಕ್ರಿಕೆಟ್ ಪಂದ್ಯಾಟ ನಡೆಸಿರುವ ಬಗ್ಗೆ ಅರಣ್ಯ ಅಧಿಕಾರಿಗಳಲ್ಲಿ ಮಾಹಿತಿ ಕೇಳಿದ ಅರಣ್ಯ ಸಚಿವರ ನಡೆಯನ್ನು ವಿರೋಧಿಸಿ ಪ್ರತಿಭಟನೆ ನಡೆಸಿದ ಕಾಡಿನ ಮಕ್ಕಳು, ಸಚಿವರು ಕೇಳಿದ ಮಾಹಿತಿಗೆ ಪ್ರತ್ಯುತ್ತರ ಪತ್ರವನ್ನು ಸಲ್ಲಿಸಿದ್ದಾರೆ. ನಾಗರಹೊಳೆ ಪ್ರವೇಶ ದ್ವಾರದಲ್ಲಿ ಬುಡಕಟ್ಟು ನಾಗರಹೊಳೆ ಆದಿವಾಸಿ ಜಮ್ಮಪಾಳೆ ಹಕ್ಕು ಸ್ಥಾಪನಾ ಸಮಿತಿ ಗ್ರಾಮಸಭೆ ಒಕ್ಕೂಟ, ಬಾಳೆಕೊವುಹಾಡಿ ತುಂಡುಮುಂಡಗೆ ಕೊಲ್ಲಿ, ಗದ್ದೆಹಾಡಿ, ಬೇಗೂರುಪಾರೆ ನಾಣಚ್ಚಿ ಗದ್ದೆ ಹಾಡಿ ಗ್ರಾಮಸಭೆ ಸದಸ್ಯರುಗಳ ವತಿಯಿಂದ ಪ್ರತಿಭಟನೆಗೆ ಮುಂದಾದ ಕಾಡಿನ ಮಕ್ಕಳು “ನಮಗೆ ಕ್ರಿಕೆಟ್ ಆಡುವ ಹಕ್ಕು ಇಲ್ಲವೇ” ಎಂದು ಪ್ರಶ್ನಿಸುವ ಮೂಲಕ ಬುಡಕಟ್ಟು ಸಮುದಾಯದವರು ನಮ್ಮ ಬದುಕಿನ ಹಕ್ಕಿಗಾಗಿ ಹೋರಾಡುತ್ತಿರುವ”, ಸ್ಥಿತಿಯ ಬಗ್ಗೆ ಪ್ರತಿಭಟನೆಯಲ್ಲಿ ಮನವರಿಕೆ ಮಾಡಿಕೊಡಲು ಮುಂದಾದರು. “ನಾಗರಹೊಳೆ ಗೇಟಿನಲ್ಲಿ ಕ್ರಿಕೆಟ್ ಆಡಲು ದೊಡ್ಡ ಪ್ರಮಾಣದ ಮರಗಳ ಹಾನನ ನಡೆದಿದೆ ಎಂದು ಡೋಂಗಿ ಪರಿಸರವಾದಿ ದೂರು ನೀಡಿದ್ದಾರೆ. ಇದನ್ನೇ ನಂಬಿಕೊಂಡ ಸಚಿವರು ಬುಡಕಟ್ಟು ಸಮುದಾಯದವರ ಹಕ್ಕಿನ ಮೇಲೆ ಚ್ಯುತ್ತಿ ಬರುವಂತೆ ವರ್ತಿಸಿರುವುದು ಬೇಸರದ ವಿಚಾರವಾಗಿದೆ. ತಲೆತಲಾಂತರಗಳಿಂದ ಕಾಡಿನಲ್ಲಿ ವಾಸಿಸುತ್ತ ಈ ನೆಲದ ಜೈವಿಕ ವಿವಿಧತೆಯನ್ನು ಕಾಪಾಡಿಕೊಳ್ಳುತ್ತಿರುವ ಮತ್ತು ವನ್ಯ ಪ್ರಾಣಿಗಳ ಬಗ್ಗೆ ವಿಶೇಷ ಕಾಳಜಿಯನ್ನು ಹೊಂದಿರುವ, ಪರಿಸರವನ್ನೇ ದೇವರುಗಳು ಎಂದು ಪೂಜಿಸುವ ಬುಡಕಟ್ಟು ಜನರ ನಡೆಯ ಬಗ್ಗೆ ಪ್ರಶ್ನೆ ಮಾಡಿರುವುದು ಕಾಳಜಿ ಸರ್ಕಾರದ ಲಕ್ಷಣವಲ್ಲ”, ಎಂಬ ವಿಚಾರವನ್ನು ಪ್ರತಿಭಟನೆಗಾರರು ಮಂಡಿಸಿದರು. “ನಾಗರಹೊಳೆ ಪ್ರದೇಶದಲ್ಲಿ ರೆಸಾರ್ಟ್ ಒಂದನ್ನು ನಡೆಸಲು ಮುಂದಾದಾಗ ಅದನ್ನು ವಿರೋಧಿಸಿ ಹೋರಾಟ ನಡೆಸಿದವರು ಬಡಕಟ್ಟು ಸಮುದಾಯದವರು. ನಾವುಗಳು ಪವಿತ್ರವೆಂದು ಪರಿಗಣಿಸುವ ಹುಲಿ, ಆನೆ, ಕರಡಿ, ನವಿಲು, ಕಾಡುನಾಯಿ ಹಾಗೂ ಇನ್ನಿತರ ಅನೇಕ ವನ್ಯಪ್ರಾಣಿಗಳು ಪ್ರವಾಸೋದ್ಯಮದ ಪ್ರದರ್ಶನವಾಗಬಾರದು ಎಂಬ ಉದ್ದೇಶದೊಂದಿಗೆ ಸರ್ಕಾರ ನಾಗರಹೊಳೆಯನ್ನ ಪ್ರವಸೋದ್ಯಮದಕ್ಕೆ ಉತ್ತೇಜಿಸುವ ವಿರುದ್ಧ ಧ್ವನಿ ಎತ್ತಿದವರು ನಾವು. ಹೀಗೆ ಕಾಡಿನಲ್ಲಿ ಬದುಕು ಕಂಡುಕೊಂಡ ಜನಾಂಗದ ಮೇಲೆ ಹಕ್ಕಿನ ವಿಚಾರವಾಗಿ ದೌರ್ಜನ್ಯ ಮಾಡುತ್ತಿರುವುದು ಬಹಳ ನೋವಿನ ವಿಚಾರವಾಗಿದೆ. ನಮ್ಮನ್ನ ಈ ಕಾಡಿನಿಂದ ಸ್ಥಳಾಂತರಿಸಲು ಈ ರೀತಿಯ ಹುನ್ನಾರಗಳು ಸದಾ ನಮ್ಮ ಬೆನ್ನ ಹಿಂದೆ ನಡೆಯುತ್ತಿದೆ”, ಎಂದು ಪ್ರತಿಭಟನಾಕಾರರು ಪ್ರತಿಪಾದಿಸಿದರು. “ಒಂದೆಡೆ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯವನ್ನು ಎತ್ತಿ ಹಿಡಿಯುತ್ತೇವೆ ಎಂದು ಹೇಳುತ್ತಾರೆ. ಆದರೆ, ನೆಲದ ಮೂಲ ನಿವಾಸಿಗಳ ವಿಷಯಕ್ಕೆ ಬಂದಾಗ ಸರ್ಕಾರ ನೋಡುವ ರೀತಿ, ಪ್ರತಿಕ್ರಿಯೆ ಸಂಕೋಚಿತ ಮತ್ತು ಅವಮಾನಕಾರಿಯಾಗಿದೆ”, ಎಂದು ಹೇಳಿದರು. ಕೊಡಗಿನ ಸಾವಿರಾರು ಎಕರೆ ಅರಣ್ಯ ಪ್ರದೇಶ ಕಾಫಿ ತೋಟಗಳಾಗಿ ಪರಿವರ್ತನೆಗೊಂಡಿದೆ ಅದನ್ನ ತೆರವುಗೊಳಿಸುವ ಕಾರ್ಯಕ್ಕೆ ಮುಂದಾಗದ ನೀವು, ಅರಣ್ಯ ವಾಸಿಗಳು ಕ್ರಿಕೆಟ್ ಆಡಿದರೆಂದು ಸಮಜಾಯಿಸಿಕೆ ಕೇಳಿ ಪತ್ರ ಬರೆಯುತ್ತಿರಿ ಎಂದರೆ, ನಿಮ್ಮ ನೈತಿಕ ಮೌಲ್ಯಗಳು ಎಲ್ಲಿ ಅಡಗಿ ಹೋಯಿತು”, ಎಂದು ಸಚಿವರನ್ನು ಪ್ರಶ್ನೆ ಮಾಡಿದರು. “ಬುಡಕಟ್ಟು ಸಮುದಾಯದವರು ಅವರ ಸಂಸ್ಕøತಿ ಮತ್ತು ಕ್ರೀಡೆಗಳ ಬಗ್ಗೆ ಕೇಂದ್ರೀಕೃತವಾಗಬಾರದು ಎಂದು ಹೇಳುವ ನೀವು ಅವರ ಬದುಕಿನ ದೌರ್ಜನ್ಯಗಳ ಬಗ್ಗೆ ಗಮನ ಹರಿಸಿದ್ದೀರಾ. ಕೂಲಿ ಕಾರ್ಮಿಕರಾಗಿ ಇಂದು ಶೋಷಿತರಾಗುತ್ತಿರುವ ವಿಚಾರ ನಿಮಗೆ ತಿಳಿದಿದೆಯೇ”, ಎಂದು ಸಚಿವರನ್ನು ಪ್ರಶ್ನೆ ಮಾಡಿದರು. ‘ಬಿರ್ಸಾ ಮುಂಡಾ’ ಅವರ 150ನೇ ಜಯಂತಿ ಆಚರಣೆಯ ಸಂದರ್ಭ ವಿವಿಧ ಹಾಡಿಗಳಲ್ಲಿ ವಾಸಿಸುವ ಯುವಕರು ಮಕ್ಕಳಿಗಾಗಿ ಕ್ರಿಕೆಟ್ ಪಂದ್ಯವನ್ನು ಆಚರಣೆಯ ಭಾಗವಾಗಿ ಆಯೋಜಿಸಲಾಗಿತ್ತು. ಮೂಲ ನಿವಾಸಿ ಸಮುದಾಯದ ನಾಯಕರಾಗಿರುವ ಬಿರ್ಸಾಮುಂಡಾರವರು ತಮ್ಮ ನೆಲ, ಕಾಡು, ಜಮೀನ್ದಾರ್, ಭೂಮಾಲೀಕ, ಬ್ರಿಟಿμï ಸಾಮ್ರಾಜ್ಯದ ವಿರುದ್ಧ ನಡೆಸಿದ ಹೋರಾಟದ ಬಗ್ಗೆ ತಿಳಿಸುವ ಮಾರ್ಗವಾಗಿದ್ದು, ಅರಣ್ಯ ನಾಸದ ಕಾರಣವಾಗಿರಲಿಲ್ಲ”, ಎಂದು ತಿಳಿಸಿದರು. “ಕ್ರಿಕೆಟ್ ಆಡುವ ನೆಪದಲ್ಲಿ ಕಾಡು ಮರಗಳನ್ನು ತರವುಗೊಳಿಸುವ ಕಾರ್ಯ ನಡೆದಿಲ್ಲ ಇದು ತೀವ್ರ ಸುಳ್ಳು ಸುದ್ದಿಯಾಗಿದೆ. ಬಾಳೆಕೊವು ಹಾಡಿಯ ಮುಂಭಾಗದಲ್ಲಿ, ಲ್ಯಾಟಾನಾ, ಇನ್ನಿತರ ಗಿಡಗಳನ್ನು ಕೆರವುಗೊಳಿಸುವ ಅರಣ್ಯ ಇಲಾಖೆ ನಡೆಸುವ ಸ್ಥಳದಲ್ಲಿ ಪಂದ್ಯಾಟ ಆಯೋಜಿಸಿದ್ದೇವೆ”, ಎಂದು ಸ್ಪಷ್ಟಪಡಿಸಿದರು. “ನಾವು ಕ್ರಿಕೆಟ್ ಆಡುವ ಸಂದರ್ಭ ಅನುಮತಿ ಇಲ್ಲದೆ ಫೆÇೀಟೋಗಳನ್ನು ಮತ್ತು ವಿಡಿಯೋಗಳನ್ನು ತೆಗೆದು ಸಾಮಾಜಿಕ ಮಾಧ್ಯಮಗಳಲ್ಲಿ ಹರಡಿರುವ ವ್ಯಕ್ತಿಯ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. “ಬಲಿಷ್ಠ ಸಮುದಾಯಗಳ ಯುವಕರಿಗೆ ಕ್ರೀಡೆಗಳನ್ನು ನಡೆಸಲು ಕ್ಲಬ್‍ಗಳು, ಮೈದಾನಗಳು, ಸ್ಟೇಡಿಯಂಗಳು, ಥಿಯೇಟರ್‍ಗಳು ಎಂದು ಇದೆ. ಆದರೆ ಮೂಲವಾಸಿಗಳಾದ ಕಾಡಿನ ಮಕ್ಕಳಿಗೆ ಯಾವುದೇ ಸೌಕರ್ಯಗಳಿಲ್ಲ. ಅವರು ಕಾಡಿನಲ್ಲಿಯೇ ತಮ್ಮ ಪ್ರತಿಭೆಗಳನ್ನು ಅನವರಣಗೊಳಿಸಿಕೊಳ್ಳಬೇಕು ಎಂಬ ಕನಿಷ್ಠ ಜ್ಞಾನವು ಸಚಿವರಿಗೆ ಇಲ್ಲದೇ ಇರುವುದು ಬಹಳ ವೇದನೆಯ ವಿಚಾರವಾಗಿದೆ”, ಎಂದು ದೂರಿಕೊಂಡರು. ಪ್ರತಿಭಟನೆಯಲ್ಲಿ ಬಾಳೆಕೋವು ಹಾಡಿ ಗ್ರಾಮ ಸಭೆಯ ಅಧ್ಯಕ್ಷ ಕಾಳಾ ಬಿ.ಸಿ, ನಾಗರಹೊಳೆ ಆದಿವಾಸಿ ಜಮ್ಮ ಪಾಳೆ ಹಕ್ಕು ಸ್ಥಾಪನಾ ಸಮಿತಿ ಗ್ರಾಮ ಸಭೆಗಳ ಒಕ್ಕೂಟ ಅಧ್ಯಕ್ಷ, ತಿಮ್ಮ ಜೆ.ಕೆ, ಬೇಗೂರು ಪಾರೆ ನಾಣ್ಯಚ್ಚಿ ಗದ್ದೆ ಹಾಡಿ ಗ್ರಾಮ ಸಭೆ ಮುಖ್ಯಸ್ಥ ರಾಮಕೃಷ್ಣ ಜೆ.ಎಸ್, ಬೇಗೂರು ಪಾರೆ ನಾಣೆಚ್ಚಿ ಗದ್ದೆ ಹಾಡಿ ಗ್ರಾಮ ಸಭೆ ಅಧ್ಯಕ್ಷ ಗಣಪತಿ ಜೆ.ಕೆ, ತುಂಡು ಮುಂಡಗೆ ಕೊಲ್ಲಿಗದ್ದೆ ಹಾಡಿ ಗ್ರಾಮ ಸಭೆ ಮನು ಜೆ.ಬಿ, ನಾಗರಹೊಳೆ ಅರಣ್ಯವಾಸಿಗಳು ಪ್ರತಿಭಟನೆಯಲ್ಲಿದ್ದರು.











