ಮಡಿಕೇರಿ ನ.28 NEWS DESK : ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಭಾಗಮಂಡಲದಲ್ಲಿ ನಿರ್ಮಿಸಲು ಉದ್ದೇಶಿಸಿರುವ ಕೊಡವ ಮತ್ತು ಅಮ್ಮ ಕೊಡವ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರು ಹಾಗೂ ವಿರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್.ಪೊನ್ನಣ್ಣ ಮತ್ತು ಮೈಸೂರು- ಕೊಡಗು ಕ್ಷೇತ್ರದ ಸಂಸದ ಯದುವೀರ್ ಒಡೆಯರ್ ಅವರು ಭೂಮಿ ಪೂಜೆ ನೆರವೇರಿಸಿದರು. ಈ ಸಂದರ್ಭ ವಿಧಾನ ಪರಿಷತ್ ಮಾಜಿ ಸದಸ್ಯೆ ವೀಣಾ ಅಚ್ಚಯ್ಯ, ಶ್ರೀ ಕಾವೇರಮ್ಮ ಕೊಡವ ಹಿತ ರಕ್ಷಣಾ ಚಾರಿಟೇಬಲ್ ಟ್ರಸ್ ನಾ ಅಧ್ಯಕ್ಷರು ಮುದ್ದಂಡ ದೇವಯ್ಯ, ಸದಸ್ಯರು, ಪದಾಧಿಕಾರಿಗಳು, ಅಹ್ವಾನಿತ ಗಣ್ಯರು, ನಾಪೋಕು ಬ್ಲಾಕ್ ಅಧ್ಯಕ್ಷರು ಇಸ್ಮಾಯಿಲ್, ವಲಯ ಅಧ್ಯಕ್ಷರು ವೆಂಕಟೇಶ್ ಕೋಳಿಬೈಲು, ಕೊಡವ ಫೆಡರೇಷನ್ ಅಧ್ಯಕ್ಷರು ಕಳ್ಳಿಚಂಡ ವಿಷ್ಣು ಕಾರ್ಯಪ್ಪ, ಅಮ್ಮ ಕೊಡವ ಸಮಾಜದ ಅಧ್ಯಕ್ಷರು ಶ್ರೀ ಬಾನಂಡ ಪ್ರತ್ಯು, ಪಂಚಾಯಿತಿ ಅಧ್ಯಕ್ಷರು, ಹಾಗೂ ಪ್ರಮುಖರು ಉಪಸ್ಥಿತರಿದ್ದರು. ದಶಕಗಳಿಂದ ಕಾವೇರಮ್ಮ ಕೊಡವ ಚಾರಿಟೇಬಲ್ ಟ್ರಸ್ಟ್ ಅವರು ಈ ಭಾಗದಲ್ಲಿ ಸಮುದಾಯ ಭವನ ನಿರ್ಮಾಣಕ್ಕಾಗಿ ಪ್ರಯತ್ನಿಸಿದ್ದರು. ಇವರ ಮನವಿಗೆ ಸ್ಪಂದಿಸಿದ ಶಾಸಕರಾದ ಎ.ಎಸ್ ಪೊನ್ನಣ್ಣ ಅವರು ಸರಕಾರದ ವತಿಯಿಂದ ರೂ.1 ಕೋಟಿ ಅನುದಾನ ಒದಗಿಸಿ, ಇಲ್ಲಿ ಸಮುದಾಯ ಭವನ ನಿರ್ಮಾಣಕ್ಕೆ ಸಹಾಯ ಹಸ್ತ ನೀಡಿದ್ದಾರೆ.













