
ಸುಂಟಿಕೊಪ್ಪ ಡಿ.1 NEWS DESK : ಸರಕಾರ ಸೇವೆಯಲ್ಲಿ ವಯೋನಿವೃತ್ತಿ ಸಹಜ. ಆದರೆ ನಿಮ್ಮ ಶಿಕ್ಷಣ, ವೃತ್ತಿ ಜೀವನವನ್ನು ಕೊನೆಗೊಳಿಸದೆ ಸಮಾಜ ಸೇವೆಯಲ್ಲಿ ತೊಡಗಿಕೊಳ್ಳಬೇಕೆಂದು ಗ್ರಾ.ಪಂ.ಅಧ್ಯಕ್ಷ ಪಿ.ಆರ್.ಸುನಿಲ್‍ಕುಮಾರ್ ಹೇಳೀದರು. ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ಆವರಣದಲ್ಲಿ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿ ವಯೋನಿವೃತ್ತಿ ಹೊಂದಿರುವ ಸಿ.ಎ.ಗೀತಾ ಪಾರ್ಥ, ಅವರಿಗೆ ಬೋಳ್ಕೊಡುಗೆ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಆಗಮಿಸಿ ಅವರು ಮಾತನಾಡಿದರು. ಶಾಲೆಗೆ ಆಗಮಿಸುವ ಮಕ್ಕಳು ಹಾಗೂ ಪೋಷಕರೊಂದಿಗೆ ಸದಾಗೌರವ, ಹಸನ್ಮುಖಿಯಾಗಿರುವ ಗೀತಾ ಅವರು ಶಾಲೆಯನ್ನು ಮಾದರಿ ಶಾಲೆಯನ್ನಾಗಿ ರೂಪುಗೊಳಿಸಿದ್ದಾರೆ. ಶಾಲೆಯಲ್ಲಿ ಮಕ್ಕಳ ಸಂಖ್ಯೆಯನ್ನು ಏರಿಕೆಗೊಳಿಸುವಲ್ಲಿಯೂ ಅವರ ಪರಿಶ್ರಮ ಅಪರಿಮಿತವಾಗಿದೆ. ಅಲ್ಲದೆ ಶಾಲೆಯ ಅಭಿವೃದ್ಧಿಗೆ ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡಿರುವುದು ಆಶಾದಾಯಕ ಎಂದರು. ಸಹಶಿಕ್ಷಕರಿಗೆ ಪಠ್ಯದಷ್ಟೇ ಮಹತ್ವವನ್ನು ಪಠ್ಯೇತರ ಚಟುವಟಿಕೆಗಳಿಗೆ ತೊಡಗಿಸಿಕೊಳ್ಳಲು ಶಿಕ್ಷಕರಿಗೆ ಪ್ರೇರೆಪಿಸುವ ಮೂಲಕ ಪ್ರತಿಭೆಗಳನ್ನು ಅನಾವರಣಗೊಳಿಸುವಲ್ಲಿ ಮುಖ್ಯ ಶಿಕ್ಷಕಿ ಗೀತಾ ಅವರ ಪಾತ್ರ ಮಹತ್ವದಾಗಿದೆ ಎಂದು ಹೇಳಿದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಶಾಲಾ ಎಸ್‍ಡಿಎಂಸಿ ಅಧ್ಯಕ್ಷ ಹಾಗೂ ಗ್ರಾ.ಪಂ.ಸದಸ್ಯ ರಫೀಕ್‍ಖಾನ್, ಮುಖ್ಯ ಶಿಕ್ಷಕಿ ಗೀತಾ ಶಾಲೆಯ ಅಭಿವೃದ್ಧಿಗೆ ಸಾಕಷ್ಟು ಶ್ರಮಿಸಿದ್ದು, ಇಂದು ಸರಕಾರಿ ಶಾಲೆಯ ಮಕ್ಕಳ ಸಂಖ್ಯೆ ಏರಿಕೆಗೊಳ್ಳಲು ಗುಣಮಟ್ಟದ ಶಿಕ್ಷಣಕ್ಕೆ ತನ್ನದೆಯಾದ ರೀತಿಯಲ್ಲಿ ಕೊಡುಗೆಯನ್ನು ನೀಡಿದ್ದಾರೆಂದು ಅವರ ಸೇವೆಯನ್ನು ಸ್ಮರಿಸಿದರು. ಕಾರ್ಯಕ್ರಮದಲ್ಲಿ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಉಪಾಧ್ಯಕ್ಷೆ ಶಿವಮ್ಮ ಮಹೇಶ್, ಸದಸ್ಯರುಗಳಾದ ಜೀನಾಸುದ್ಧಿನ್, ಪ್ರಸಾದ್‍ಕುಟ್ಟಪ್ಪ, ಪಿ.ಎಫ್.ಸಬಾಸ್ಟೀನ್, ಸೋಮನಾಥ್, ಆಲಿಕುಟ್ಟಿ, ಶಾಂತಿ, ವಸಂತಿ, ರೇಷ್ಮ, ಪ್ರೌಢಶಾಲೆಯ ಉಪಪ್ರಾಂಶುಪಾಲರಾದ ಬಾಲಕೃಷ್ಣ, ಸಹಶಿಕ್ಷಕಿ ಚಿತ್ರ, ಪ್ರಕಾಶ್, ಕಾನ್‍ಬೈಲ್ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಶಾಂತಿ, ಅತ್ತೂರು ನಲ್ಲೂರು ಶಾಲೆಯ ಮುಖ್ಯೋಪಾದ್ಯಾಯನಿ ನಯನ, 7ನೇ ಹೊಸಕೋಟೆ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಕೆ.ಕೆ.ಹೇಮಾವತಿ, ಗದ್ದೆಹಳ್ಳ ಸಂಯುಕ್ತ ಪ್ರಾಥಮಿಕ ಶಾಲೆಯ ಮುಖ್ಯೋಪಾದ್ಯಾಯನಿ ಹೇಮಲತಾ, ವಿವಿಧ ಶಾಲೆಯ ಸಹಶಿಕ್ಷಕರುಗಳು ನಿವೃತ್ತ ಮುಖ್ಯೋಪಾದ್ಯಾಯನಿ ಮನೋಹರಿ ಸೇರಿದಂತೆ ನಿವೃತ್ತ ಸಹ ಶಿಕ್ಷಕರುಗಳು ಉಪಸ್ಥಿತರಿದ್ದರು.










