ನಾಪೋಕ್ಲು ಡಿ.3 NEWS DESK : ಕೋಡಗು ಜಿಲ್ಲಾ ವಿಶ್ವವಿದ್ಯಾಲಯ ಮಟ್ಟದ ಕ್ರಾಸ್-ಕಂಟ್ರಿ ಸ್ಪರ್ಧೆಯಲ್ಲಿ ಗೌತಮ್ ಶೆಟ್ಟಿ ಪ್ರಥಮ ಸ್ಥಾನ ಪಡೆದು ಆಲ್ ಇಂಡಿಯಾ ಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ವಿರಾಜಪೇಟೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಆಯೋಜಿಸಲಾದ ಕೋಡಗು ಜಿಲ್ಲಾ ವಿಶ್ವವಿದ್ಯಾಲಯ ಮಟ್ಟದ 10 ಕಿ.ಮೀ ಪುರುಷರ ಗುಡ್ಡಗಾಡು ಓಟ 2024-25 (ಕ್ರಾಸ್-ಕಂಟ್ರಿ) ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನದ ಫಲವಾಗಿ ಪ್ರಥಮ ಸ್ಥಾನ ಪಡೆದು ರಾಷ್ಟ್ರಮಟ್ಟದ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ. ನಾಪೋಕ್ಲು ಸರಕಾರಿ ಪ್ರಥಮ ದರ್ಜೆ ಕಾಲೇಜು ಅಂತಿಮ ಬಿ ಎ ವಿದ್ಯಾರ್ಥಿ ಗೌತಮ್ ಶೆಟ್ಟಿ ಇವರಿಗೆ ವಿಕಾಸ್ ಶ್ರೀನಿವಾಸ್ ಮಾರ್ಗದರ್ಶಕರಾಗಿ ಈ ಸಾಧನೆಯಲ್ಲಿ ಮಹತ್ವದ ಪಾತ್ರ ನಿರ್ವಹಿಸುತ್ತಿದ್ದಾರೆ. ವಿರಾಜಪೇಟೆಯ ಶೇಖರ್ ಮತ್ತು ಶೋಭಾ ದಂಪತಿಯ ಪುತ್ರನಾದ ಗೌತಮ್ ಮುಂದಿನ ರಾಷ್ಟ್ರಮಟ್ಟದ ಸ್ಪರ್ಧೆಗಳಲ್ಲಿಯೂ ಉತ್ತಮ ಸಾಧನೆ ಮಾಡುವ ನಿರೀಕ್ಷೆಯಿದೆ .
ವರದಿ : ದುಗ್ಗಳ ಸದಾನಂದ.











