Close Menu
News Desk KannadaNews Desk Kannada
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಇತ್ತೀಚಿನ ಸುದ್ದಿಗಳು
  • ಉದ್ಯೋಗ ಭಾಗ್ಯ
  • ಮಹಾದೇಗುಲ
  • ರುಚಿ ನೋಡಿ
  • ಪೊಲೀಸ್ ನ್ಯೂಸ್
  • ರೋಗ ಮುಕ್ತ
  • ಪ್ರವಾಸಿತಾಣ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Facebook X (Twitter) Instagram
News Desk KannadaNews Desk Kannada




  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
  • ಮಹಾದೇಗುಲ
  • ರುಚಿ ನೋಡಿ
  • ಉದ್ಯೋಗ ಭಾಗ್ಯ
  • ರೋಗ ಮುಕ್ತ
  • ಸಣ್ಣ ಕಥೆ
News Desk KannadaNews Desk Kannada
Home»ಇತ್ತೀಚಿನ ಸುದ್ದಿಗಳು»ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಆವಿರ್ಭವ-ಸಿಂದೂರ ಸಂಭ್ರಮ”* 
ಇತ್ತೀಚಿನ ಸುದ್ದಿಗಳು ಕರ್ನಾಟಕ

ಕಾರ್ಕಳದ ಕ್ರಿಯೇಟಿವ್ ಕಾಲೇಜಿನಲ್ಲಿ “ಕ್ರಿಯೇಟಿವ್ ಆವಿರ್ಭವ-ಸಿಂದೂರ ಸಂಭ್ರಮ”* 

ಡಿಸೆಂಬರ್ 4, 20252 Mins ReadBy admin
Facebook WhatsApp Twitter Telegram Copy Link Threads Email LinkedIn Pinterest
Follow us on
Google News Facebook
Facebook Twitter WhatsApp Email Telegram Copy Link
Advertisement
Advertisement
Advertisement
Advertisement
Advertisement
Advertisement
Advertisement
Advertisement
Advertisement

ಕಾರ್ಕಳ ಡಿ.4 NEWS DESK : ಕರ್ನಾಟಕದ ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಭೂಮಿಕೆಯನ್ನು ಶ್ರೀಮಂತಗೊಳಿಸುತ್ತಿರುವ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ವಾರ್ಷಿಕ ಮಹೋತ್ಸವ “ಕ್ರಿಯೇಟಿವ್ ಆವಿರ್ಭವ-2025” ಡಿ.4, 5 ಮತ್ತು 6 ರಂದು ವೈಭವದೊಂದಿಗೆ ನಡೆಯಲಿದೆ. ಮೂರು ದಿನಗಳ ಸಂಭ್ರಮವು ಕ್ರಿಯೇಟಿವ್ ಶಿಕ್ಷಣ ಸಂಸ್ಥೆಯ ಕ್ಯಾಂಪಸ್‍ನಲ್ಲಿ ವಿವಿಧ ಸಾಂಸ್ಕೃತಿಕ, ವಿದ್ಯಾಭ್ಯಾಸಿಕ ಮತ್ತು ಮನರಂಜನಾ ಕಾರ್ಯಕ್ರಮಗಳ ಮೂಲಕ ವಿದ್ಯಾರ್ಥಿಗಳ ಪ್ರತಿಭಾ ಪ್ರದರ್ಶನಕ್ಕೆ ವೇದಿಕೆಯಾಗಲಿದೆ. ಡಿ.4 ರಂದು ಸಂಜೆ 6 ಗಂಟೆಗೆ ಕಾರ್ಯಕ್ರಮಕ್ಕೆ ಚಾಲನೆ ನೀಡಲಿದ್ದು,  ಸಾಂಸ್ಕೃತಿಕ ಸಂಭ್ರಮದ ಉದ್ಘಾಟನೆ ನಡೆಯಲಿದೆ. ಕರಾವಳಿಯ ಸಾಂಪ್ರದಾಯಿಕ ಕಲಾ ವೈಭವ, ಯಕ್ಷಗಾನ, ನೃತ್ಯ, ನಾಟಕ ಹಾಗೂ ಜಾನಪದ ಕಲಾಪ್ರದರ್ಶನಗಳು ಮುಖ್ಯ ಆಕರ್ಷಣೆಯಾಗಿವೆ. ಡಿ.5 ರಂದು ಮಧ್ಯಾಹ್ನ 2.30 ರಿಂದ ವಿವಿಧ ಗಣ್ಯ ಅತಿಥಿಗಳ ಉಪಸ್ಥಿತಿಯಲ್ಲಿ ಪ್ರತಿಭಾ ಪುರಸ್ಕಾರ ಸಮಾರಂಭ, ವಿದ್ಯಾರ್ಥಿಗಳ ಸಾಂಸ್ಕೃತಿಕ ಕಾರ್ಯಕ್ರಮಗಳು, ಸಂಗೀತ ಸಂಜೆ ಹಾಗೂ ವಿಶೇಷ ಅತಿಥಿ ಉಪನ್ಯಾಸಗಳು ನಡೆಯಲಿವೆ. ಡಿ.6 ರಂದು ಬೆಳಗ್ಗೆ 10.30 ಕ್ಕೆ ಸಾಧಕರಿಗೆ ಗೌರವ ಸಮರ್ಪಣೆ, ಸನ್ಮಾನ್ಯ ಅತಿಥಿಗಳಿಂದ ಸಂದೇಶಗಳು ಹಾಗೂ ಸಮಾರೋಪ ಸಮಾರಂಭ ನಡೆಯಲಿದೆ. ಸಾವಿರಾರು ವಿದ್ಯಾರ್ಥಿಗಳು, ಪಾಲಕರು, ಶಿಕ್ಷಕರು ಹಾಗೂ ಸಾರ್ವಜನಿಕರು ಈ ಸಾಂಸ್ಕೃತಿಕ ಹಬ್ಬಕ್ಕೆ ಸಾಕ್ಷಿಯಾಗಲಿದ್ದಾರೆ. :: ಆಕರ್ಷಣೀಯ ಕಾರ್ಯಕ್ರಮಗಳು ::   ಡಿ.4 ರಂದು ಸಂಜೆ 6 ರಿಂದ ‘ಕ್ರಿಯೇಟಿವ್ ಯಕ್ಷಾರಾಧನಮ್’ ಹವ್ಯಾಸಿ ಕಲಾವಿದರಿಂದ ಯಕ್ಷಗಾನ ಪ್ರದರ್ಶನ. ಶ್ರೀರಾಮಾನುಗ್ರಹ ಸಿಂದೂರ ವಿಜಯ”. ಡಿ.5 ರಂದು ಅಪರಾಹ್ನ 2.30 ರಿಂದ ದಿ. ಎಚ್.ಎಸ್.ವೆಂಕಟೇಶಮೂರ್ತಿ ಯವರ ಕುರಿತು ಭಾವ ನಮನ ಕಾರ್ಯಕ್ರಮ. ಸಂಜೆ 7 ರಿಂದ ಮ್ಯಾಜಿಕ್ ಶೋಪ್ರಖ್ಯಾತ ಜಾದೂಗಾರ ಕುದ್ರೋಳಿ ಗಣೇಶ್ ರವರಿಂದ ಡಿ. 6 ರಂದು ಅಪರಾಹ್ನ 12.15 ರಿಂದ ಕ್ರಿಯೇಟಿವ್ ಸಾಹಿತ್ಯಸಾಂಗತ್ಯಸಂವಾದ:ಮಾತು ಕ(ವಿ)ತೆ. ಚುಟುಕುಬ್ರಹ್ಮ ಎಚ್. ಡುಂಡಿರಾಜ್ ರವರ ಉಪಸ್ಥಿತಿಯಲ್ಲಿ.  ವಾರ್ಷಿಕೋತ್ಸವ ಸಮಾರಂಭದ ಸಂಪನ್ಮೂಲ ವ್ಯಕ್ತಿಗಳಾಗಿ  ವೀರಪ್ಪ ಮೊಯ್ಲಿ ಮಾಜಿ ಮುಖ್ಯಮಂತ್ರಿಗಳು,ಕರ್ನಾಟಕ ಸರ್ಕಾರ, ವಿ. ಸುನಿಲ್ ಕುಮಾರ್ ಶಾಸಕರು, ಕಾರ್ಕಳ ವಿಧಾನಸಭಾ ಕ್ಷೇತ್ರ,ಎಚ್. ಡುಂಡಿರಾಜ್ ಕನ್ನಡದ ಪ್ರಖ್ಯಾತ ಹಾಸ್ಯ ಕವಿ ಹಾಗೂ ನಾಟಕಕಾರರು, ಡಾ. ಎಚ್.ಎಸ್ ಬಲ್ಲಾಳ್ ಆಡಳಿತಗಾರರು, ರೇಡಿಯೋಲಜಿ ತಜ್ಞರು, ಮಣಿಪಾಲ ವಿ.ವಿಯ ಪೆÇ್ರ- ಚಾನ್ಸಲರ್ ಹಾಗೂ ಅಧ್ಯಕ್ಷರು, ಡಾ. ಜಿ. ರಾಮಕೃಷ್ಣ ಆಚಾರ್, ಸ್ಥಾಪಕರು ಎಸ್. ಕೆ.ಎಫ್ ಎಲಿಕ್ಸರ್ ಇಂಡಿಯಾ ಮತ್ತು ಸಂಜೀವಿನಿ ಗೋಧಾಮ, ಮುನಿಯಾಲು, ಕೆ. ಗುಣಪಾಲ್ ಕಡಂಬ ವಿಶ್ರಾಂತ ಪ್ರಾಚಾರ್ಯರು, ಸಂಘಟನಾ ಕಾರ್ಯದರ್ಶಿಗಳು ಮಿಯ್ಯಾರು ಕಂಬಳ ಸಮಿತಿ, ಶನಿಲ್ ಗೌತಮ್, ಖ್ಯಾತ ನಟರು, ಸೋ ಫ್ರಂ ಸೋ ಖ್ಯಾತಿ ಇವರು ಆಗಮಿಸಲಿದ್ದಾರೆ. ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಹಬ್ಬಕ್ಕೆ  ಎಲ್ಲಾ ನಾಗರಿಕರು, ಶಿಕ್ಷಣ ಪ್ರೇಮಿಗಳು ಹಾಗೂ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಕ್ರಿಯೇಟಿವ್ ಶಿಕ್ಷಣ ಸಂಸ್ಥೆಗಳ ಆಡಳಿತ ಮಂಡಳಿ ಆಹ್ವಾನಿಸಿದೆ.

 

 

Follow us Follow us
Share. WhatsApp Facebook Twitter Email Telegram Copy Link

Related Posts

ವಿರಾಜಪೇಟೆ ಮಹಿಳಾ ಸಹಕಾರ ಸಂಘದಲ್ಲಿ ಶಾರದಾ ಪೂಜೆ

ಅಕ್ಟೋಬರ್ 13, 2026

ವಿರಾಜಪೇಟೆ : ಶಿವಕೇರಿ ಶ್ರೀ ವಿಷ್ಣು ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ನವರಾತ್ರಿ ಉತ್ಸವ ಆರಂಭ

ಅಕ್ಟೋಬರ್ 13, 2026

ಸೋಮವಾರಪೇಟೆ : ಅ.14 ರಂದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಅಕ್ಟೋಬರ್ 13, 2026

ವಿರಾಜಪೇಟೆ : ಶಿವಕೇರಿ ಶ್ರೀ ವಿಷ್ಣು ದುರ್ಗಿ ವಿಷ್ಣುಮೂರ್ತಿ ನಾಗ ದೇವಾಲಯದಲ್ಲಿ ನವರಾತ್ರಿ ಉತ್ಸವ ಆರಂಭ

ಅಕ್ಟೋಬರ್ 13, 2026 ಇತ್ತೀಚಿನ ಸುದ್ದಿಗಳು ಕೊಡಗು ಜಿಲ್ಲೆ

ವಿರಾಜಪೇಟೆ ಅ.13 NEWS DESK : ವಿರಾಜಪೇಟೆ ನಗರದ ಶಿವೇರಿಯಲ್ಲಿರುವ ಶ್ರೀ ದುರ್ಗಿ ವಿಷ್ಣುಮೂರ್ತಿ ನಾಗ ದೇವಸ್ಥಾನದಲ್ಲಿ ವೈಭವದ ನವರಾತ್ರಿ…

ಸೋಮವಾರಪೇಟೆ : ಅ.14 ರಂದು ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ

ಅಕ್ಟೋಬರ್ 13, 2026

ಮುಂಗಾರು : ಬೆಳೆ ಸಮೀಕ್ಷೆ ಕಡ್ಡಾಯ

ಅಕ್ಟೋಬರ್ 13, 2026

ಮಡಿಕೇರಿ ಮತ್ತು ಗೋಣಿಕೊಪ್ಪ ದಸರಾ : ವಾಹನ ಸಂಚಾರದಲ್ಲಿ ಮಾರ್ಗ ಬದಲಾವಣೆ

ಅಕ್ಟೋಬರ್ 13, 2026

ಅ.15 ರಂದು ಮಡಿಕೇರಿ ದಸರಾ ಬಹುಭಾಷಾ ಕವಿಗೋಷ್ಠಿ : ನಾಡ ಹಬ್ಬಕ್ಕೆ ಸಾಹಿತ್ಯಿಕ ಸ್ಪರ್ಶ ನೀಡಲಿದ್ದಾರೆ 85 ಕವಿಗಳು

ಅಕ್ಟೋಬರ್ 13, 2026

ಮಡಿಕೇರಿ ದಸರಾ: ಕಾಫಿ ದಸರಾ ಮಳಿಗೆಗಳಿಗೆ ಚಾಲನೆ; 60 ಪೌರಕಾರ್ಮಿಕರಿಗೆ ಸನ್ಮಾನ

ಅಕ್ಟೋಬರ್ 13, 2026

2028ರ ವಿಧಾನಸಭಾ ಚುನಾವಣೆಯಲ್ಲಿ ಹೊಸ ಚಿಂತನೆಯ ವ್ಯಕ್ತಿಗಳು ಆಯ್ಕೆಯಾಗಲಿ : ಉದಯ ಕುಮಾರ್ ಜೆ.

ಅಕ್ಟೋಬರ್ 13, 2026

ಇಡಿ, ಐಟಿ, ಸಿಬಿಐ ದುರುಪಯೋಗ ಖಂಡಿಸಿ ದಲಿತ ಸಂಘರ್ಷ ಸಮಿತಿಯಿಂದ ಮನವಿ ಸಲ್ಲಿಕೆ

ಅಕ್ಟೋಬರ್ 13, 2026

ಅ.15ರಂದು ಮೂನಾಡ್‌ನಲ್ಲಿ ಸಿಎನ್‌ಸಿಯ 6ನೇ ಶಾಂತಿಯುತ ಮಾನವ ಸರಪಳಿ; ಕೊಡವ ಜನಾಂಗದ ಅಸ್ತಿತ್ವ, ಭೂಮಿ, ಭಾಷೆ ಮತ್ತು ಸಂಸ್ಕೃತಿ ರಕ್ಷಣೆಗೆ ಜನಜಾಗೃತಿ ಕಾರ್ಯಕ್ರಮ

ಅಕ್ಟೋಬರ್ 13, 2026

ಕುಶಾಲನಗರ ಸರ್ಕಾರಿ ಶಾಲೆಯಲ್ಲಿ ಕಳ್ಳತನ, ಹಾನಿ : ದುಷ್ಕೃತ್ಯಕ್ಕೆ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಖಂಡನೆ

ಅಕ್ಟೋಬರ್ 13, 2026
  • Facebook
  • Twitter
  • Instagram
  • WhatsApp
  • YouTube
Quick Links
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ
Quick Links
  • ಮಹಾದೇಗುಲ
  • ರುಚಿ ನೋಡಿ
  • ರೋಗ ಮುಕ್ತ
  • ಉದ್ಯೋಗ ಭಾಗ್ಯ
  • ಸಣ್ಣ ಕಥೆ
  • ವಿಡಿಯೋ ಗ್ಯಾಲರಿ
Contact

www.newsdeskkannada.com
News Desk,
Industrial Area,
Pathrika Bhavan Building,
Madikeri, Kodagu, Karnataka.
Phone: 94481 00724
              76766 24467
Email: newsdeskkodagu@gmail.com

© 2026 All Rights Reserved. Designed by Blueline Computers.
  • ಮುಖಪುಟ
  • ಕೊಡಗು ಜಿಲ್ಲೆ
  • ಕರ್ನಾಟಕ
  • ಭಾರತ
  • ಪೊಲೀಸ್ ನ್ಯೂಸ್
  • ಪ್ರವಾಸಿತಾಣ

Type above and press Enter to search. Press Esc to cancel.