ಮಡಿಕೇರಿ ಡಿ.5 NEWS DESK : ವಿನಾಶಕಾರಿ ಡ್ರಗ್ಸ್ ನಿಂದ ನಮ್ಮ ಯುವ ಜನರನ್ನು ರಕ್ಷಿಸುವ ಸಲುವಾಗಿ ಡ್ರಗ್ಸ್ ಮುಕ್ತ ಕರ್ನಾಟಕ ಸಂಕಲ್ಪ ಸಾರುವ ಸಂದೇಶ ಹೊತ್ತ ಸ್ತಬ್ಧಚಿತ್ರವು ಡಿ.9 ರಂದು ಮೈಸೂರಿನಿಂದ ಹೊರಟು 45 ದಿನಗಳ ಕಾಲ ರಾಜ್ಯಾದ್ಯಂತ ಸಂಚರಿಸಿ ಜನರಲ್ಲಿ ಜಾಗೃತಿ ಮೂಡಿಸಲಿದೆ. ಡಿ.17 ರಂದು ಬೆಳಿಗ್ಗೆ 9 ಗಂಟೆಗೆ ಕೊಡಗಿಗೆ ಆಗಮಿಸಲಿದೆ. ಡಿ.18 ರಂದು ಬೆಳಿಗ್ಗೆ 10 ಗಂಟೆಗೆ ಕುಶಾಲನಗರ ಹಾಗೂ ಮಧ್ಯಾಹ್ನ 2 ಗಂಟೆಗೆ ಸೋಮವಾರಪೇಟೆಯಲ್ಲಿ ಬೃಹತ್ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ. ಡಿ.19 ರಂದು ಬೆಳಿಗ್ಗೆ 10 ಗಂಟೆಗೆ ಮಡಿಕೇರಿ ಹಾಗೂ ಮಧ್ಯಾಹ್ನ 2 ಗಂಟೆಗೆ ಸಂಪಾಜೆಯಲ್ಲಿ ಬೃಹತ್ ಜನಜಾಗೃತಿ ಕಾರ್ಯಕ್ರಮಗಳು ನಡೆಯಲಿದೆ. ಆದ್ದರಿಂದ ಜನಜಾಗೃತಿ ಸ್ತಬ್ದಚಿತ್ರ ಹೊತ್ತ ರಥಯಾತ್ರೆ ಜಿಲ್ಲೆಯ ತಾಲ್ಲೂಕುಗಳಿಗೆ ಆಗಮಿಸುವ ಸಂದರ್ಭ ಸ್ಥಳೀಯ ಎಲ್ಲಾ ಸರಕಾರಿ, ಸರಕಾರೇತರ ಸಂಘ ಸಂಸ್ಥೆಗಳು, ಶಾಲಾ ಕಾಲೇಜು ವಿದ್ಯಾರ್ಥಿಗಳು ಒಟ್ಟು ಸೇರಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಬೇಕಾಗಿ ಮನವಿ ಮಾಡಿದ್ದಾರೆ. ಹೆಚ್ಚಿನ ಮಾಹಿತಿಗೆ 7022095863 (ಶರತ್ ಗೋಣಿಕೊಪ್ಪ), 9449762686 ( ಯೋಗೇಶ್ ವಿರಾಜಪೇಟೆ), 9845777134 ( ಹರೀಶ್ ಕುಶಾಲನಗರ) 7483018566 (ರಂಜನ್ ಸೋಮವಾರಪೇಟೆ), 9845178711 (ಕುಮಾರ್ ಮಡಿಕೇರಿ), 9449475662 (ತಿಲಕ್ ರಾಜ್ ಕಳಗಿ ಸಂಪಾಜೆ.) ಸಂಪರ್ಕಿಸಬಹುದಾಗಿದೆ.











