
ಮಡಿಕೇರಿ NEWS DESK ಡಿ.7 : ಕೊಡಗಿನ ಸುಗ್ಗಿ ಹಬ್ಬ ಪುತ್ತರಿಯ ಹಿನ್ನೆಲೆಯಲ್ಲಿ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆ ದೇವಟ್ ಪರಂಬುವಿನ ಕೊಡವರ ನರಮೇಧದ ಸ್ಮಾರಕ ಸ್ಥಳದಲ್ಲಿ ಪುಷ್ಪ ನಮನ ಸಲ್ಲಿಸಿತು. ಪುತ್ತರಿ ದಿನ ಕೊಯ್ಲು ಮಾಡಿದ ಕದಿರನ್ನು ಸಿಎನ್‌ಸಿ ಅಧ್ಯಕ್ಷ ಎನ್.ಯು.ನಾಚಪ್ಪ ಅವರ ನೇತೃತ್ವದಲ್ಲಿ ಪಟ್ಟಮಾಡ ಕುಶ, ಮಂದಪಂಡ ಮನೋಜ್ ಹಾಗೂ ನಂದೇಟಿರ ಮೋಹನ್ ಸುಬ್ಬಯ್ಯ ಅವರುಗಳು ಸ್ಮಾರಕಗಳಿಗೆ ಕಟ್ಟಿ ಪುಷ್ಪ ನಮನ ಸಲ್ಲಿಸಿದರು. ನಂತರ ಮಾತನಾಡಿದ ಎನ್.ಯು.ನಾಚಪ್ಪ ಅವರು ಹಿರಿಯರಿಗೆ ಗೌರವ ಅರ್ಪಿಸಿ ಏಕ-ಜನಾಂಗೀಯ ಆನಿಮಿಸ್ಟಿಕ್ ಕೊಡವ ಸಮುದಾಯದ ಪರವಾದ ಸಿಎನ್‌ಸಿಯ ಹೋರಾಟಕ್ಕೆ ಬೆಂಬಲ ಕೋರಲಾಯಿತು ಎಂದರು.








