ಮಡಿಕೇರಿ ಡಿ.10 NEWS DESK : ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಕೊಡಗು ವ್ಯದ್ಯಕೀಯ ವಿಜ್ಞಾನಗಳ ಸಂಸ್ಥೆ ಹಾಗೂ ಬೋದಕ ಆಸ್ಪತ್ರೆ ವತಿಯಿಂದ ಪಿ.ಹೆಚ್.ಸಿ ಕಾಕೋಟು ಪರಂಬು ವ್ಯಾಪ್ತಿಯಲ್ಲಿ ರಕ್ತದಾನ ಶಿಬಿರ, ಅಂಗಾಂಗದಾನ ನೋಂದಣಿ, ಸಂತಾನ ನಿರೋಧ ಶಸ್ತ್ರಚಿಕಿತ್ಸೆ ಹಾಗೂ ಪಲ್ಸ್ ಪೋಲಿಯೋ ಕಾರ್ಯಕ್ರಮದ ಬಗ್ಗೆ ಜಾಗೃತಿ ಕಾರ್ಯಕ್ರಮ ನಡೆಯಿತು. ವಿರಾಜಪೇಟೆಯ ಕ್ಲಬ್ ಮಹೀಂದ್ರದಲ್ಲಿ ನಡೆದ ಕಾರ್ಯಕ್ರಮದಲ್ಲಿ ರಕ್ತ ನಿಧಿ ಕೇಂದ್ರದ ವೈದ್ಯಾಧಿಕಾರಿ ಡಾ.ಕರುಂಬಯ್ಯ ಹಾಗೂ ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಾಂತಿ ಆರೋಗ್ಯ ಶಿಕ್ಷಣ ನೀಡಿದರು. ಕಾರ್ಯಕ್ರಮದಲ್ಲಿ ರಕ್ತ 42 ಯೂನಿಟ್ ಸಂಗ್ರಹವಾಗಿದ್ದು, 40 ಫಲಾನುಭವಿಗಳು ಅಂಗಾಂಗದಾನ ನೋಂದಣಿ ಮಾಡಿಕೊಂಡರು. ತಂಡದಲ್ಲಿ ಡಾ.ಆಕಾಶ್, ನರ್ಸಿಂಗ್ ಆಫೀಸರ್ ಕೀರ್ತಿ, ಕ್ಲಬ್ ಮಹೇಂದ್ರದ ಮುಖ್ಯಸ್ಥರಾದ ಶೈನ್ ಮೋಹನ್, ಕೋಸ್ ರಾಜ್ ಐಯ್ಯಪ್ಪ, ಆರೋಗ್ಯ ನಿರೀಕ್ಷಣಾಧಿಕಾರಿ ದುಂಬಿತ, ಆಶಾ ಕಾರ್ಯಕರ್ತೆ ಭವ್ಯ, ಸವಿತ ಹಾಗೂ ರಕ್ತ ನಿಧಿ ಕೇಂದ್ರದ ಸಿಬ್ಬಂದಿಗಳು ಪಾಲ್ಗೊಂಡಿದ್ದರು.











