ಮಡಿಕೇರಿ ಡಿ.12 NEWS DESK : ಶ್ರೀ ರಾಮಾಂಜನೇಯ ಭಜನಾ ಮಂಡಳಿ ವತಿಯಿಂದ 35 ನೇ ವಾಷಿ೯ಕೋತ್ಸವದ ಪ್ರಯುಕ್ತ ಡಿ.14 ರಂದು ಅಖಂಡ ಏಕಾಹ ಭಜನಾ ಕಾಯ೯ಕ್ರಮ ಆಯೋಜಿಸಲಾಗಿದೆ. ನಗರದ ಶ್ರೀ ಆಂಜನೇಯ ದೇವಾಲಯದಲ್ಲಿ ಡಿ.14 ರಂದು ಸೂಯೋ೯ದಯದಿಂದ ಸೂಯಾ೯ಸ್ತಮಾನದವರೆಗೆ 15 ತಂಡಗಳಿಂದ ನಿರಂತರ ಭಜನೆ ನಡೆಯಲಿದೆ. ಸಂಜೆ 3 ತಂಡಗಳಿಂದ ಕುಣಿತ ಭಜನೆ ನಡೆಯಲಿದೆ. ಅಂದು ಬೆಳಗ್ಗೆ 6.10 ಗಂಟೆಗೆ ನಗರಸಭೆಯ ಅಧ್ಯಕ್ಷೆ ಕಲಾವತಿಯವರು ಭದ್ರದೀಪ ಜ್ವಲನ ಮಾಡಲಿದ್ದು, ಸಂಜೆ 7 ಗಂಟೆಗೆ ಮಂಗಳಾಚರಣೆ, ಮಹಾಮಂಗಳಾರತಿ ಹಾಗೂ ಸಮಾರೋಪ ನಡೆಯಲಿದ್ದು ವಿಜಯವಿನಾಯಕ ದೇವಾಲಯದ ಟ್ರಸ್ಟಿ ಜಿ.ಚಿದ್ವಿಲಾಸ್ ಹಿತವಚನ ನೀಡಲಿದ್ದಾರೆ. ಶ್ರೀ ಓಂಕಾರೇಶ್ವರ ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಎ.ಸಿ.ದೇವಯ್ಯ ಅತಿಥಿಯಾಗಿ ಪಾಲ್ಗೊಳ್ಳಲಿದ್ದಾರೆ. ಶ್ರೀ ರಾಮಾಂಜನೇಯ ಮಹಿಳಾ ಭಜನಾ ಮಂಡಳಿ, ಶ್ರೀ ಸತ್ಯಸಾಯಿ ಭಜನಾ ಸಮಿತಿ ಮಡಿಕೇರಿ, ಭಕ್ತಿಲಹರಿ ತಂಡ ಮಡಿಕೇರಿ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಮಂಗಳಾದೇವಿ ನಗರ, ಮದೆಮಹೇಶ್ವರ ಭಜನಾ ಮಂಡಳಿ, ಮದೆ, ಶ್ರೀ ಸನಾತನ ಭಜನಾ ಮಂಡಳಿ ಕಗ್ಗೋಡ್ಲು, ಶ್ರೀದೇವಿ ಭಜನಾ ಮಂಡಳಿ ಜೋಡುಪಾಲ, ಶ್ರೀ ರಾಜರಾಜೇಶ್ವರಿ ಭಜನಾ ಮಂಡಳಿ ಎರಡನೇ ಮೊಣ್ಣಂಗೇರಿ, ಶ್ರೀ ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು, ಜನರಲ್ ತಿಮ್ಮಯ್ಯ ಪಬ್ಲಿಕ್ ಸ್ಕೂಲ್ ಮಡಿಕೇರಿ, ಶ್ರೀ ಕೋದಂಡ ರಾಮ ಭಜನಾ ಮಂಡಳಿ ಮಡಿಕೇರಿ, ಇಸ್ಕಾನ್ ತಂಡ ಮಡಿಕೇರಿ, ಶ್ರೀ ಚಾಮುಂಡೇಶ್ವರಿ ಭಜನಾ ಮಂಡಳಿ ದೇವರಕೊಲ್ಲಿ, ಶ್ರೀಶೖತಿ ಲಯ ಭಜನಾ ಮಂಡಳಿ, ಮಡಿಕೇರಿ, ಶ್ರೀ ರಾಮಾಂಜನೇಯ ಭಜನಾ ಮಂಡಳಿ ಮಡಿಕೇರಿ. ಕುಣಿತ ಭಜನೆ – ವಿನಾಯಕ ಸೇವಾ ಟ್ರಸ್ಟ್ ಕತ್ತಲೆಕಾಡು, ಆದಿಶಕ್ತಿ ವಿನಾಯಕ ಭಜನಾ ಮಂಡಳಿ ಉಡೋತ್, ಶ್ರೀ ಮದೆ ಮಧುರಪ್ಪ ಕುಣಿತ ಭಜನಾ ತಂಡ, ಮದೆನಾಡು.










