ಮಡಿಕೇರಿ ಡಿ.16 NEWS DESK : ರಾಜಪೇಟೆ ಉಪ ಖಜಾನೆಯ ನೂತನ ಕಚೇರಿಯು ವಿರಾಜಪೇಟೆ ತಾಲ್ಲೂಕು ಆಡಳಿತ ಸೌಧದಲ್ಲಿ ನಿರ್ಮಾಣಗೊಂಡಿದ್ದು, ಖಜಾನೆ ಆಯುಕ್ತರ ಅನುಮತಿ ನೀಡಿರುವ ಮೇರೆಗೆ ಈ ಉಪ ಖಜಾನೆಯು ಹಾಲಿ ಕಾರ್ಯನಿರ್ವಹಿಸುತ್ತಿರುವ ಬಾಡಿಗೆ ಕಟ್ಟಡದಿಂದ ವಿರಾಜಪೇಟೆ ತಾಲ್ಲೂಕು ಆಡಳಿತ ಸೌಧದ ನೆಲ ಮಹಡಿಯಲ್ಲಿರುವ ನೂತನ ಕಚೇರಿಗೆ ಡಿ.12 ರಂದು ಸ್ಥಳಾಂತರಗೊಂಡು ಕಚೇರಿ ಕಾರ್ಯ ಚಟುವಟಿಕೆಗಳು ಪ್ರಾರಂಭಗೊಂಡಿರುತ್ತದೆ ಎಂದು ವಿರಾಜಪೇಟೆ ಉಪ ಖಜಾನೆಯ ಪತ್ರಾಂಕಿತ ಉಪ ಖಜಾನಾಧಿಕಾರಿ ಅವರು ತಿಳಿಸಿದ್ದಾರೆ. ಉಪ ಖಜಾನೆಗೆ ಸಂಬಂಧಿಸಿದ ಎಲ್ಲಾ ಪತ್ರ ವ್ಯವಹಾರಗಳು ಹಾಗೂ ಖಜಾನೆ ಕೆಲಸ ಕಾರ್ಯಗಳಿಗೆ ಸಂಬಂಧಿಸಿದಂತೆ ಪತ್ರಾಂಕಿತ ಉಪ ಖಜಾನಾಧಿಕಾರಿಗಳು, ಉಪ ಖಜಾನೆ ಕಚೇರಿ, ನೆಲ ಮಹಡಿ, ತಾಲ್ಲೂಕು ಆಡಳಿತ ಸೌಧ, ವಿರಾಜಪೇಟೆ-571218. ವಿಳಾಸದ ವಿವರವುಳ್ಳ ನೂತನ ಕಚೇರಿಯನ್ನು ಸಂಪರ್ಕಿಸುವಂತೆ ವಿರಾಜಪೇಟೆ ಉಪ ಖಜಾನೆ ಪತ್ರಾಂಕಿತ ಉಪ ಖಜಾನಾಧಿಕಾರಿ ಅವರು ತಿಳಿಸಿದ್ದಾರೆ.










