ವಿರಾಜಪೇಟೆ ಡಿ.17 NEWS DESK : ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ಬೆಂಗಳೂರು ಕೇಂದ್ರ ಸಮಿತಿಯ ಚುನಾವಣೆಯಲ್ಲಿ ಕಾರ್ಯಕಾರಿ ಸಮಿತಿ ಸದಸ್ಯ ಸ್ಥಾನಕ್ಕೆ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದ ವಿರಾಜಪೇಟೆಯ ವಿದ್ಯುತ್ ಗುತ್ತಿಗೆದಾರ ಬಿ.ಎಂ. ಗಣೇಶ್ ಅವರನ್ನು ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘ ವಿರಾಜಪೇಟೆಯ ಸಮಿತಿ ವತಿಯಿಂದ ಅಭಿನಂದಿಸಿ ಸನ್ಮಾನಿಸಲಾಯಿತು. ವಿರಾಜಪೇಟೆಯ ತಾಲೂಕು ಸಮಿತಿ ಕಚೇರಿಯಲ್ಲಿ ನಡೆದ ಅಭಿನಂದನೆ ಕಾರ್ಯಕ್ರಮದಲ್ಲಿ ತಾಲೂಕು ಸಮಿತಿ ಅಧ್ಯಕ್ಷ ಬಿ.ಸಿ. ಭರತ್, ಉಪಾಧ್ಯಕ್ಷ ಕೆ. ಎಂ. ಹಂಸ, ಕಾರ್ಯದರ್ಶಿ ಎನ್.ಜಿ. ಚಂದ್ರಶೇಖರ್, ಸಹ ಕಾರ್ಯದರ್ಶಿ ಸಿ.ಜಿ. ಹರೀಶ್. ಖಜಾಂಚಿ ಎಂ.ಎಂ. ಸರ್ಫು, ಸಂಘಟನಾ ಕಾರ್ಯದರ್ಶಿ ಬಿ.ಎಂ. ರಮೇಶ್, ಸದಸ್ಯರಾದ ಬಿ.ಸಿ. ಕಿರಣ್, ಎಂ.ಡಿ. ರಫೀಕ್, ಅಲೆಕ್ಸ್, ಬಿ.ಎಸ್. ಚಂದ್ರಶೇಖರ್. ಸಿ.ಜಿ. ಜೋಯ್, ಬಿ.ಆರ್. ಮನು, ಬಿ.ಎಂ. ಮ್ಯಾಥ್ಯೂ, ಬಿ.ಬಿ. ಹೊನ್ನಪ್ಪ ಹಾಗೂ ರಾಜಶೇಖರ ಇವರುಗಳು ಉಪಸ್ಥಿತರಿದ್ದರು.










