ಮಡಿಕೇರಿ ಡಿ.17 NEWS DESK : ರಾಯಚೂರಿನಲ್ಲಿ ಡಿ.20 ಹಾಗೂ 21 ರಂದು ಖ್ಯಾತ ಸಾಹಿತಿಗಳಾದ ಡಾ. ಜಯದೇವಿ ಗಾಯಕವಾಡ ಅವರ ಸರ್ವಾಧ್ಯಕ್ಷತೆಯಲ್ಲಿ ನಡೆಯುತ್ತಿರುವ 11ನೇ ಅಖಿಲ ಭಾರತ ದಲಿತ ಸಾಹಿತ್ಯ ಸಮ್ಮೇಳನದಲ್ಲಿ ಕೊಡಗಿನ ಸಾಮಾಜಿಕ ಕಾರ್ಯಕರ್ತೆ ಡಾ.ಕಾವೇರಿ ಹೆಚ್.ಎಂ ಅವರು ಸಾವಿತ್ರಿಬಾಯಿ ಫುಲೆ ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆಯಾಗಿದ್ದಾರೆಂದು ಕೊಡಗು ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಅರ್ಜುನ್ ಮೌರ್ಯ ತಿಳಿಸಿದ್ದಾರೆ. “ಸಂವಿಧಾನ ಭಾರತ” ಧ್ಯೇಯವಾಕ್ಯದಲ್ಲಿ ಅರ್ಥಪೂರ್ಣ ಹಾಗೂ ಅದ್ದೂರಿಯಾಗಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ಕೊಡಗಿನ ಕವಯಿತ್ರಿ ರಮ್ಯ ಮೂರ್ನಾಡು ಅವರು ಮಹಿಳಾ ಕಾವ್ಯಯಾನಕ್ಕೆ, ಮಾರುತಿ ದಾಸಣ್ಣವರ್ ಪುಸ್ತಕ ಪ್ರಶಸ್ತಿಗೆ, ಸಾಧಕ ಪ್ರಶಸ್ತಿಗೆ ಬರಹಗಾರ್ತಿ ಡಾ.ಮಹಾಲಕ್ಷ್ಮಿ ಟಿ.ಎಸ್, ಸಮ್ಮೇಳನ ಲಾಂಛನ ರಚನೆಗಾಗಿ ಧನುಷ್ ಎ. ಇವರುಗಳನ್ನು ರಾಷ್ಟ್ರೀಯ ಪುರಸ್ಕಾರಕ್ಕೆ ಆಯ್ಕೆ ಮಾಡಲಾಗಿದೆ. ಈ ಬಾರಿಯ ಸಮ್ಮೇಳನದಲ್ಲಿ ಕೊಡಗಿನವರನ್ನು ಪರಿಗಣಿಸದ್ದಕ್ಕಾಗಿ ಆಯ್ಕೆ ಸಮಿತಿಯ ಅಧ್ಯಕ್ಷರೂ ಹಾಗೂ ದಲಿತ ಸಾಹಿತ್ಯ ಪರಿಷತ್ತಿನ ರಾಜ್ಯಾಧ್ಯಕ್ಷರಾದ ಡಾ.ಅರ್ಜುನ ಗೊಳಸಂಗಿ ಹಾಗೂ ಎಲ್ಲಾ ಆಯ್ಕೆ ಸಮಿತಿಯ ಪದಾಧಿಕಾರಿಗಳಿಗೆ ಕೊಡಗು ಜಿಲ್ಲಾ ದಸಾಪದಿಂದ ಕೃತಜ್ಞತೆ ಸಲ್ಲಿಸುತ್ತಿದ್ದೇನೆಂದು ಅರ್ಜುನ್ ಮೌರ್ಯ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.











