ವಾಮಂಜೂರು ಡಿ.17 NEWS DESK : ವಾಮಂಜೂರಿನ ಸಂತೋಷನಗರ ಮೈದಾನದಲ್ಲಿ ಎಸ್.ಜೆ.ಸಿ. ಫ್ರೆಂಡ್ಸ್ ವಾಮಂಜೂರು, ರೊ ಇಂಟರ್‌ನ್ಯಾಷನಲ್ ಹಾಗೂ ಗಜಾನನ ಕ್ರಿಕೆಟರ್ಸ್ (ಪ್ರಜ್ವಲ್ ಫಿಲ್ಮ್ಸ್) ಪ್ರಾಯೋಜಕತ್ವದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ಚರ್ಚ್ ಹಂತದ ಎರಡು ದಿನಗಳ ಅಂಡರ್‌ಆರ್ಮ್ ಕ್ರಿಕೆಟ್ ಪಂದ್ಯಾವಳಿ ನಡೆಯಿತು. ಪಂದ್ಯದಲ್ಲಿ ಮಂಗಳೂರು ಧರ್ಮಪ್ರಾಂತ್ಯದ ವಿವಿಧ ಚರ್ಚ್‌ಗಳಿಂದ ಒಟ್ಟು 19 ತಂಡಗಳು ಭಾಗವಹಿಸಿದ್ದವು. ಅಂತಿಮ ಪಂದ್ಯದಲ್ಲಿ ಅದ್ಭುತ ಪ್ರದರ್ಶನ ನೀಡಿದ ಸಂತ ಸೆಬೆಸ್ಟಿಯನ್ ಪೆರ್ಮನ್ನುರ್ ಕ್ರಿಕೆಟ್ ತಂಡವು ಕುಡ್ಲ ಟ್ರೋಫಿಯನ್ನು ತನ್ನದಾಗಿಸಿಕೊಂಡು ಚಾಂಪಿಯನ್ ಪಟ್ಟವನ್ನು ಅಲಂಕರಿಸಿತು. ಟೀಂ ಪಾಲಡ್ಕಾ ತಂಡವು ದ್ವಿತೀಯ ಸ್ಥಾನವನ್ನು ಪಡೆದುಕೊಂಡಿತು. ಪಂದ್ಯಗಳನ್ನು ನ್ಯಾಯಸಮ್ಮತವಾಗಿ ನಡೆಸುವಲ್ಲಿ ಅಂಪೈರ್‌ಗಳಾಗಿ ರಾಜೇಶ್ ಪಡಿಲ್, ಸೈಫ್ ಬಜಾಲ್, ರಂಜೇಶ್ ಉಚಿಲ್, ಆರಿಫ್ ಜೋಕಟ್ಟೆ ಹಾಗೂ ಅಶ್ವತ್ ಕುಂಪಲ ಸಮರ್ಥವಾಗಿ ನಿರ್ವಹಿಸಿದರು. ಪಂದ್ಯದ ಪ್ರತಿಯೊಂದು ಹಂತವನ್ನೂ ರೋಚಕವಾಗಿಸುವಂತೆ ರಾಜೇಶ್ ಪೆರೇರಾ ಹಾಗೂ ಸಯ್ಯಾದ್ ಗುರುಕಂಬಳ ಅವರು ಮನಮೋಹಕ ಹಾಗೂ ವಿವರವಾದ ಕಾಮೆಂಟ್ರಿ ನೀಡಿದರು. ಆಟಗಾರರು, ಆಯೋಜಕರು ಹಾಗೂ ಪ್ರೇಕ್ಷಕರ ಉತ್ತಮ ಸಹಕಾರದಿಂದ ಕ್ರಿಕೆಟ್ ಪಂದ್ಯಾವಳಿಯು ಯಶಸ್ವಿಯಾಗಿ ಸಮಾರೋಪಗೊಂಡಿತು. ಕ್ರೀಡಾಭಿಮಾನಿಗಳಿಗೆ ಅನೇಕ ರೋಚಕ ಕ್ಷಣಗಳನ್ನು ನೀಡಿದ ಪಂದ್ಯಾವಳಿ ರೋಹನ್ ವಾಮಂಜೂರು, ಸೋಹನ್, ರೊಲ್ವಿನ್, ಮಧು, ಪ್ರಜ್ನಾ ಹಾಗೂ ಸ್ವೀಟಿ ಅವರ ಸಮರ್ಥ ಮುಂದಾಳತ್ವ ಮತ್ತು ಉತ್ತಮ ವ್ಯವಸ್ಥೆಯೊಂದಿಗೆ ಯಶಸ್ವಿಯಾಗಿ ನೆರವೇರಿತು.











