ಮಡಿಕೇರಿ ಡಿ.17 NEWS DESK : ಡ್ರಗ್ಸ್ ಮುಕ್ತ ಕರ್ನಾಟಕ ಅಭಿಯಾನದ ಜನಜಾಗೃತಿ ರಥಯಾತ್ರೆ ಕೊಡಗಿಗೆ ಆಗಮಿಸಿದ್ದು, ರಥಯಾತ್ರೆ ಸಾಗುವ ಹಾದಿ ಮತ್ತು ಕಾರ್ಯಕ್ರಮಗಳ ವಿವರ. ಡಿ.17 ರಂದು ಬೆಳಿಗ್ಗೆ 10 ಗಂಟೆಗೆ ಪೊನ್ನಂಪೇಟೆಯ ರಾಮಕೃಷ್ಣ ಆಶ್ರಮದಲ್ಲಿ ಮಠಾಧೀಶರಿಂದ ಜಾಗೃತಿ ಸಂದೇಶ. ನಂತರ ಪೊನ್ನಂಪೇಟೆಯಿಂದ ಹೊರಟು ಗೋಣಿಕೊಪ್ಫ ಬಸ್ಸ್ ನಿಲ್ದಾಣದಲ್ಲಿ 11 ಗಂಟೆಗೆ ಡ್ರಗ್ಸ್ ವಿರುದ್ಧ ಜನಜಾಗೃತಿ ಭಾಷಣ ನಡೆಯಲಿದೆ. 11.30 ಗಂಟೆಗೆ ಗೋಣಿಕೊಪ್ಪ ಕಾವೇರಿ ಕಾಲೇಜಿನಲ್ಲಿ ಯುವ ಸಮುದಾಯ ವಿನಾಶಕಾರಿ ಡ್ರಗ್ಸ್ ನಿಂದ ದೂರ ಉಳಿಯುವಂತೆ ಯುವಜಾಗೃತಿ ಭಾಷಣ ಮಾಡಲಿದ್ದಾರೆ. 12.30 ಗಂಟೆಗೆ ಗೋಣಿಕೊಪ್ಪದಿಂದ ಹೊರಡುವ ರಥವು 1.30 ಗಂಟೆಗೆ ವಿರಾಜಪೇಟೆಯ ಸೈಂಟ್ ಆನ್ಸ್ ಕಾಲೇಜಿನಲ್ಲಿ ವಿನಾಶಕಾರಿ ಡ್ರಗ್ಸ್ ಬಗ್ಗೆ ಯುವ ಜಾಗೃತಿ ಮೂಡಿಲಾಗವುದು. ನಂತರ ಮಧ್ಯಾಹ್ನ 2.30 ಗಂಟೆಗೆ ವಿರಾಜಪೇಟೆಯ ಸರಕಾರಿ ಜೂನಿಯರ್ ಕಾಲೇಜಿನಲ್ಲಿ ಮಾರಕ ಡ್ರಗ್ಸ್ ವಿರುದ್ಧ ವಿದ್ಯಾರ್ಥಿ ಜಾಗೃತಿ ಭಾಷಣ ನಡೆಯಲಿದೆ. 3.30 ಗಂಟೆಗೆ ಅಮ್ಮತ್ತಿಯ ಸಿದ್ಧಾಪುರ ರಸ್ತೆ ಜಂಕ್ಷನ್ ನಲ್ಲಿ ಡ್ರಗ್ಸ್ ಬಳಕೆಯ ದುಷ್ಫರಿಣಾಮಗಳ ಬಗ್ಗೆ ತಿಳುವಳಿಕೆ ಭಾಷಣ ನಡೆಯಲಿದೆ. 5 ಗಂಟೆಗೆ ಸಿದ್ದಾಪುರ ಬಸ್ ನಿಲ್ದಾಣದಲ್ಲಿ ವಿನಾಶಕಾರಿ ಡ್ರಗ್ಸ್ ವಿರುದ್ಧ ಜನಜಾಗೃತಿ ಭಾಷಣದ ನಂತರ ನಂತರ ಕುಶಾಲನಗರದತ್ತ ರಥಯಾತ್ರೆ ಪಯಣ ಬೆಳೆಸಲಿದೆ.











