ಮಡಿಕೇರಿ ಡಿ.17 NEWS DESK : ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ ತಯಾರಕರ ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಡಿ.ನಾಣಯ್ಯ ಅವರು ಮುಂದುವರೆಯಲಿದ್ದಾರೆ ಎಂದು ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಸಂಘದ ಸ್ಥಾಪಕಾಧ್ಯಕ್ಷೆ ಕೆ.ಎಸ್.ಮುತ್ತಮ್ಮ ಕೋಟಿ ಅವರು ತಿಳಿಸಿದ್ದಾರೆ. ಪತ್ರಿಕಾ ಪ್ರಕಟಣೆ ನೀಡಿರುವ ಅವರು ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ ತಯಾರಕರ ಸಹಕಾರ ಸಂಘದ ಸದಸ್ಯರಾಗಿ, ಖಜಾಂಚಿಯಾಗಿ ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿರುವ ಎಂ.ಡಿ.ನಾಣಯ್ಯ ಅವರು ಕಳೆದ 7 ವರ್ಷಗಳಿಂದ ಅಧ್ಯಕ್ಷ ಸ್ಥಾನವನ್ನು ಯಶಸ್ವಿಯಾಗಿ ನಿಭಾಯಿಸಿದ್ದಾರೆ. ಅಲ್ಲದೆ ಸಹಕಾರ ಸಂಘದ ಅಭಿವೃದ್ಧಿಗಾಗಿ ಸಾಕಷ್ಟು ಶ್ರಮಪಟ್ಟಿದ್ದಾರೆ ಎಂದು ಹೇಳಿದ್ದಾರೆ. ಸಹಕಾರ ಸಂಘದ ಅಧ್ಯಕ್ಷರಾಗಿ ಎಂ.ಡಿ.ನಾಣಯ್ಯ ಅವರೇ ಮುಂದುವರೆಯಬೇಕು ಎನ್ನುವ ಅಭಿಲಾಷೆಯನ್ನು ನಾನು ಹಾಗೂ ಸದಸ್ಯರು ವ್ಯಕ್ತಪಡಿಸಿದ್ದೇವೆ. ಅಧ್ಯಕ್ಷ ಸ್ಥಾನದಲ್ಲಿ ಮುಂದುವರಿಯುವಂತೆ ಮನವಿ ಮಾಡಿಕೊಂಡಿದ್ದೇವೆ, ಇದಕ್ಕೆ ನಾಣಯ್ಯ ಅವರು ಒಪ್ಪಿಗೆ ಸೂಚಿಸಿದ್ದಾರೆ. ಆದ್ದರಿಂದ ಕೊಡಗು ಜಿಲ್ಲಾ ಕುಲಾಲ (ಕುಂಬಾರ)ರ ಮಡಿಕೆ ತಯಾರಕರ ಸಹಕಾರ ಸಂಘದ ಅಧ್ಯಕ್ಷ ಸ್ಥಾನದಲ್ಲಿ ಎಂ.ಡಿ.ನಾಣಯ್ಯ ಅವರೇ ಮುಂದುವರೆಯಲಿದ್ದು, ಸದಸ್ಯರು ಎಂದಿನಂತೆ ಸಹಕಾರ ನೀಡುವಂತೆ ಕೆ.ಎಸ್.ಮುತ್ತಮ್ಮ ಕೋಟಿ ಮನವಿ ಮಾಡಿದ್ದಾರೆ.











