ಮಡಿಕೇರಿ ಡಿ.17 NEWS DESK : ಮಂಜಿನ ನಗರಿ, ದಕ್ಷಿಣದ ಕಾಶ್ಮೀರ ಎಂದೆಲ್ಲ ಕರೆಯಲ್ಪಡುವ ಕೊಡಗಿನ ರಾಜಧಾನಿ ಮಡಿಕೇರಿ ನಗರವು ಶಕ್ತಿ ದೇವತೆಗಳ ನೆಲೆವೀಡು, ಅಂತೆಯೇ ಊರಿನ ರಾಜ ಬೀದಿಯಂತಿರುವ ಮಹದೇವಪೇಟೆಯಲ್ಲಿ ಸದ್ಭಕ್ತರ ಶ್ರದ್ಧಾ ಕೇಂದ್ರವಾಗಿ ಆರಾಧಿಸಲ್ಪಡುತ್ತಾ ಎಲ್ಲರ ಇಷ್ಟಾರ್ಥವನ್ನು ಸಿದ್ಧಿಸುತ್ತಾ ಅನುಗ್ರಹಿಸುತ್ತಿರುವ ಆರಾದ್ಯ ದೇವತೆಯೇ ಶ್ರೀ ಚೌಡೇಶ್ವರಿ ಅಮ್ಮನವರು. ಐತಿಹಾಸಿಕ ಹಿನ್ನೆಲೆ ಇರುವ ಶ್ರೀ ಚೌಡೇಶ್ವರಿ ದೇವಾಲಯವು ಮಹಾರಾಜರ ಆಳ್ವಿಕೆಯ ಕಾಲಘಟ್ಟದಲ್ಲಿ ಅಂದರೆ ಸುಮಾರು 250 ವರ್ಷಗಳ ಹಿಂದೆಯೇ ನಿರ್ಮಾಣವಾಗಿರುವ ದಾಖಲೆ ಇದ್ದು, ಅಲ್ಲಿಂದಲೂ ದೇವಿಯನ್ನು ನಂಬಿ ಒಳಿತನ್ನು ಕಂಡ ಭಕ್ತ ಸಮೂಹವೇ ಇದೆ. ಶಂಕರಿ ಗುಡಿ ಎಂದು ಪ್ರಸಿದ್ದಿಯಾಗಿದ್ದ ದೇವಾಲಯ ಕಾಲ ಕ್ರಮೇಣ ನವೀಕರಣಗೊಳ್ಳುತ್ತಾ ದಿನಾಂಕ 17-05-1968 ರಲ್ಲಿ ಮೈಸೂರಿನ ಚಾಮುಂಡಿ ಬೆಟ್ಟದ ಆಗಮಿಕರಾದ, ಕ್ಷೇತ್ರದ ತಂತ್ರಿಗಳಾದ ಆಗಮಾಚಾರ್ಯ ಶ್ರೀ ನಾರಾಯಣ ದೀಕ್ಷಿತರ ನೇತೃತ್ವದಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರ ಶಿಲಾಬಿಂಬದ ಜೊತೆಗೆ ಪರಿವಾರದ ದೇವತಾ ಸಾನಿದ್ಯವನ್ನು ಪ್ರತಿಷ್ಠಾಪಿಸಲಾಯಿತು. ವಾರ್ಷಿಕವಾಗಿ ಹಬ್ಬ ಹರಿದಿನಗಳಲ್ಲಿ ವಿಶೇಷ ಪೂಜೆಗಳು ನಡೆಯುತ್ತಿದ್ದು, ನವರಾತ್ರಿಯಲ್ಲಿ ನಡೆಯುವ ವೈಭವದ ಉತ್ಸವಕ್ಕೆ ಭಕ್ತ ಸಾಗರವೇ ಹರಿದು ಬಂದು ದೇವಿಯ ದರ್ಶನ ಪಡೆದು ಶ್ರೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ. 63 ವರ್ಷಗಳ ದಸರಾ ಇತಿಹಾಸವೂ ದೇವಾಲಯಕ್ಕೆ ಇದೆ. ಅದರಂತೆ ದೇವಾಲಯದ ಜೀರ್ಣೋದ್ದಾರ ವಿಚಾರವಾಗಿ ದಿನಾಂಕ 02-02-2022 ರಂದು ಪುತ್ತೂರಿನ ಖ್ಯಾತ ಜೋತಿಷ್ಯತಿಲಕರಾದ ಶ್ರೀ ಸ್ವಾಮಿನಾಥನ್ ಪಣಿಕ್ಕರ್ ಅವರ ನೇತೃತ್ವದಲ್ಲಿ ಪ್ರಶ್ನಾಚಿಂತನೆ ನಡೆಸಲಾಗಿ ಚಿಂತನೆಯಲ್ಲಿ ಶ್ರೀ ಚೌಡೇಶ್ವರಿ ಅಮ್ಮನವರಿಗೆ ನೂತನ ಶಿಲಾಗುಡಿಯನ್ನು ನಿರ್ಮಿಸುವಂತೆ ದೇವರ ಅಭಿಲಾಷೆ ಇದೆ ಎಂದು ಕಂಡು ಬಂದಿರುತ್ತದೆ. ಈ ವಿಚಾರವಾಗಿ ಖ್ಯಾತ ವಾಸ್ತುಶಿಲ್ಪಿ ಕಾಸರಗೋಡಿನ ಶ್ರೀ ರಮೇಶ್ ಕಾರಂತರರ ನಿರ್ದೇಶನದಂತೆ ದೇವಾಲಯದ ನೂತನ ನೀಲನಕ್ಷೆಯನ್ನು ನಿರ್ಮಿಸಿ ಕೊಟ್ಟಿರುತ್ತಾರೆ. ಲೋಕ ಕಲ್ಯಾಣದ ಸಂಕಲ್ಪದೊಂದಿಗೆ ಜಗನ್ಮಾತೆಗೆ ನೂತನವಾದ ದೇವಾಲಯ ನಿರ್ಮಾಣ ಮಾಡಲು ದೊರೆತಿರುವ ಸುವರ್ಣ ಅವಕಾಶ ನಮ್ಮಂತಹ ಭಕ್ತ ಸಮೂಹದ ಭಾಗ್ಯವೇ ಸರಿ. ಇದೀಗ ನೂತನವಾಗಿ ರೂಪುಗೊಳ್ಳುವ ದೇವಾಲಯದ ವೆಚ್ಚ ಸರಿಸುಮಾರು ರೂಪಾಯಿ 1.50 ಕೋಟಿಯಷ್ಟು ಅಂದಾಜು ವೆಚ್ಚವಾಗಲಿದ್ದು, ಈ ಎಲ್ಲಾ ದೇವತಾ ಪ್ರತಿಷ್ಠಾ ಕಾರ್ಯ ನಡೆಯಲಿದ್ದು, ಭಗವತ್ಥಕ್ತರಾದ ತಾವೆಲ್ಲರೂ ಈ ಮಹತ್ಕಾರ್ಯಕ್ಕೆ ಕೈ ಜೋಡಿಸುವ ಮುಖಾಂತರ ತನು ಮನ ಪೂರ್ವಕವಾಗಿ ಉದಾರ ಧನ ಸಹಾಯವನ್ನು ನೀಡಿ ನಾಡಿಗೆ ಸಂಪತ್ತು, ಸಮೃದ್ಧಿ, ಸುಭೀಕ್ಷೆಯ ಜೀವನ ಮುಂದಿನ ಪೀಳಿಗೆಗೂ ದೊರೆಯುವ ಪ್ರಾರ್ಥನೆ ಮತ್ತು ಆಶಯದೊಂದಿಗೆ ಅಮ್ಮನವರ ಕೃಪೆಗೆ ಪಾತ್ರರಾಗಬೇಕಾಗಿ ಶ್ರೀ ಚೌಡೇಶ್ವರಿ ದೇವಾಲಯದ ಆಡಳಿತ ಮಂಡಳಿಯು ತಮ್ಮಲ್ಲಿ ಭಕ್ತಿಪೂರ್ವಕವಾಗಿ ವಿನಂತಿಸುತ್ತೇವೆ.
NAME : SRI CHOWDESHWARI DEVANGA SANGHA
A/C NO: 64210100012852
IFSC : BARB0VJMADI
BANK OF BARODA, MADIKERI.
MOB : 9449951999 / 9945013982











