ಮಡಿಕೇರಿ, ಡಿ.17 NEWS DESK : ಕೊಡಗು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ವತಿಯಿಂದ ಆಯೋಜಿಸಲಾಗುತ್ತಿರುವ ‘ವಿಪ್ರ ಕ್ರೀಡೋತ್ಸವ’ದ ಭಾಗವಾಗಿ ಡಿ.21 ರಂದು ನಗರದಲ್ಲಿ ಮಡಿಕೇರಿ ತಾಲ್ಲೂಕು ಮಟ್ಟದ ಒಳಾಂಗಣ ಕ್ರೀಡಾ ಸ್ಪರ್ಧೆಗಳು ನಡೆಯಲಿದೆಯೆಂದು ನಿಧಿಯ ಅಧ್ಯಕ್ಷರಾದ ರಾಮಚಂದ್ರ ಮೂಗೂರು ಮತ್ತು ಕಾರ್ಯದರ್ಶಿ ಬಿ.ಕೆ. ಜಗದೀಶ್ ತಿಳಿಸಿದ್ದಾರೆ. ನಗರದ ಶ್ರೀ ಲಕ್ಷ್ಮೀ ನರಸಿಂಹ ಕಲ್ಯಾಣ ಮಂಟಪದಲ್ಲಿ ಡಿ.21 ರಂದು ಮಧ್ಯಾಹ್ನ 2 ಗಂಟೆಗೆ ತಾಲ್ಲೂಕು ವ್ಯಾಪ್ತಿಯ ವಿಪ್ರ ಬಾಂಧವರಿಗಾಗಿ ಚೆಸ್, ಕೇರಂ ಹಾಗೂ ಪುರುಷರಿಗೆ, ಮಹಿಳೆಯರಿಗೆ, ಬಾಲಕ, ಬಾಲಕಿಯರಿಗೆ ವಿವಿಧ ಮನರಂಜನಾ ಸ್ಪರ್ಧೆಗಳನ್ನು ಏರ್ಪಡಿಸಲಾಗಿದೆಯೆಂದು ತಿಳಿಸಿದ್ದಾರೆ. ಚೆಸ್ ಹಾಗೂ ಕೇರಂ ಸಿಂಗಲ್ಸ್ನಲ್ಲಿ ಗೆದ್ದಂತಹ ಸ್ಪರ್ಧಿಗಳು ಜನವರಿ ತಿಂಗಳಲ್ಲಿ ನಡೆಯಲಿರುವ ಜಿಲ್ಲಾಮಟ್ಟದ ಸ್ಪರ್ಧೆಗೆ ಅರ್ಹತೆ ಪಡೆದುಕೊಳ್ಳಲಿದ್ದಾರೆ. ಸ್ಪರ್ಧೆಯಲ್ಲಿ ವಿಪ್ರಬಂಧುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಳ್ಳುವಂತೆ ವಿನಂತಿಸಿಕೊಂಡಿದ್ದಾರೆ.










